ವಿಕ ಸುದ್ದಿಲೋಕ ಉಡುಪಿ
ನಿಟ್ಟೂರು ಶ್ರೀ ಸೋಮನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಶ್ರೀ ಮನ್ಮಹಾರಥೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿದೇವಸ್ಥಾನ ಅಭಿವೃದ್ಧಿಗೆ ಕೊಡುಗೆ ನೀಡಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಆನುವಂಶಿಕ ಅರ್ಚಕರಾದ ಸುರೇಶ್ ಕಾರಂತ್ , ಅರವಿಂದ್ ಕಾರಂತ್ , ಹಲವು ವರ್ಷಗಳಿಂದ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸಿದ ಶ್ರೀವತ್ಸ, ಪಂಚವಾದ್ಯ ವಾದಕರಾದ ನಾರಾಯಣ ಮತ್ತು ಲಕ್ಷ್ಮಿ ಶೋಭಾನೆ ಮಹಿಳಾ ಭಜನಾ ಮಂಡಳಿ ಸದಸ್ಯರಾದ ಶ್ರೀವಿದ್ಯಾ ಸನ್ಮಾನಿತರು.
ವೆಂಕಟರಾಜ್ ಕಾರಂತ ಮತ್ತು ಮುರಳಿ ಭಟ್ ಕೊಡಂಕೂರು ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕಿ ಶುಭಾ ಬಾಳ್ತಿಲ್ಲಾಯ, ಸುಂದರ ಪೂಜಾರಿ, ಆಡಳಿತ ಮಂಡಳಿ ಸದಸ್ಯರು, ಅರ್ಚಕ ವೃಂದ, ಲಕ್ಷ್ಮೀ ಶೋಭಾನೆ ತಂಡದ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಫೋಟೋಫೈಲ್ 01ಎಮ್ ಎಮ್ ನಿಟ್ಟೂರು
ಫೋಟೋಕ್ಯಾಪ್ಷನ್ ಸಮಾರಂಭದಲ್ಲಿಸಾಧಕರನ್ನು ಸನ್ಮಾನಿಸಲಾಯಿತು.

