ಜಿಲ್ಲೆಯಲ್ಲಿ76.64 ಲಕ್ಷ ಕ್ವಿಂ.ಮುಸುಕಿನ ಜೋಳ ಆವಕ, ಕೆಎಂಎಫ್ ಖರೀದಿ ಷರತ್ತಿಗೆ ರೈತ ಸಮೂಹ ತತ್ತರ (ಕಿಕ್ಕರ್ )
ಕುಸಿದ ಮುಸುಕಿನ ಜೋಳದ ಬೆಲೆ
*ಕಣ ಮತ್ತು ಜಮೀನಿನಲ್ಲಿಯೇ ಉಳಿದ ಜೋಳ
*ಜಿಲ್ಲೆಯ ರೈತರಿಗೆ ಕಣ್ಣೀರು ತರಿಸಿದ ಹಿಂಗಾರು ಬೆಳೆ
* ರೈತರಿಗೆ ನೇರ ಖರೀದಿ ಕೇಂದ್ರಗಳನ್ನು ಆರಂಭಿಸಲಿ
*ಪಶು ಆಹಾರ ಕಾರ್ಖಾನೆಗಳಿಗೆ ನೇರ ಸಂಪರ್ಕ ಕಲ್ಪಿಸಿ
ಬಸವರಾಜ ಅಯ್ಯನಗೌಡರ ಹಗರಿಬೊಮ್ಮನಹಳ್ಳಿ
ಜಿಲ್ಲೆಯಲ್ಲಿತಿಂಗಳ 76.64 ಲಕ್ಷ ಕ್ವಿಂಟಾಲ್ ಹಿಂಗಾರು ಮುಸುಕಿನ ಜೋಳ ಆವಕವಾಗಿದೆ. ಆದರೆ, ಬಹುತೇಕ ರೈತರು ಬೆಲೆ ಕುಸಿತದ ಬರೆಯಿಂದಾಗಿ ತತ್ತರಿಸಿದ್ದಾರೆ. ರೈತರು ಇದೀಗ ಒಕ್ಕಣೆಗೆ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಲಕ್ಷ ಕ್ವಿಂ. ನಷ್ಟು ಮುಸುಕಿನ ಜೋಳವನ್ನು ಎಪಿಎಂಸಿಯಲ್ಲಿಖರೀದಿಸಲಾಗಿದೆ. ಅಪಾರ ಪ್ರಮಾಣದ ಮುಸುಕಿನ ಜೋಳ ಬೆಳೆದ ಜಿಲ್ಲೆಯ ರೈತರಿಗೆ ಬೆಲೆ ಕುಸಿತದ ಆಘಾತ ತಂದಿದೆ. ಅರ್ಧದಷ್ಟು ಬೆಳೆಯನ್ನು ಒಕ್ಕಣೆ ಕಣ ಮತ್ತು ಹೊಲಗಳಲ್ಲೇ ಉಳಿಸಿದ್ದಾರೆ. ಎಪಿಎಂಸಿಯಲ್ಲಿವಾರದಿಂದಲೂ ಆವಕದ ಪ್ರಮಾಣ ತೀವ್ರ ಕುಸಿದಿದೆ.
ಹೀಗಿದೆ ದರ ಬರೆ:
ಕಳೆದ ಸಾಲಿನಲ್ಲಿಇದೇ ಹಿಂಗಾರು ವೇಳೆಗೆ ಪ್ರತಿ ಕ್ವಿಂ.ಗೆ ಬರೋಬ್ಬರಿ 2.300 ರೂ.ಬೆಲೆ ಇತ್ತು. ಈ ಸಾಲಿನಲ್ಲಿಕೇವಲ 1,600 ರೂ.ಗೆ ಬೆಲೆ ಕುಸಿದಿದೆ. ವರ್ಷದಲ್ಲೇ ಪ್ರತಿ ಕ್ವಿಂ.ಗೆ 700ರೂ. ಬೆಲೆ ತಗ್ಗಿದ್ದು, ರೈತರ ಜಂಘಾಬಲ ಉಡುಗಿಸಿದೆ. ಮುಂಗಾರಿಯಲ್ಲಿಕಳೆದ ಸಾಲಿನಲ್ಲಿಪ್ರತಿ ಕ್ವಿಂ.ಗೆ 2700 ರೂ.ನಂತೆ ಮಾರಾಟ ಮಾಡಿದ್ದ ರೈತರು ಹಿಂಗಾರಿನಲ್ಲಿಕಣ್ಣೀರು ಹಾಕುವಂತಾಗಿದೆ.
ಬೆಲೆ ಕುಸಿತಕ್ಕೆ ನಾನಾ ಕಾರಣ?:
ಈಗಾಗಲೇ ಬೆಂಗಳೂರು, ಶಿರಾ, ಕೊಪ್ಪಳ, ದಾವಣಗೆರೆ ಸೇರಿ ನಾನಾ ಕಂಪನಿಗಳು ಅಗತ್ಯಕ್ಕಿಂತಲೂ ಹೆಚ್ಚು ದಾಸ್ತಾನು ಮಾಡಿದ್ದು, ಬೇಡಿಕೆ ತಗ್ಗಿದೆ. ಬೇಡಿಕೆ ಕುಸಿದಂತೆ ಬೆಲೆಯೂ ಕುಸಿದಿದೆ. ಅಲ್ಲದೆ ರಾಜ್ಯದ ನಾನಾ ಪೌಲ್ಟಿ್ರ ಫಾಮ್ ರ್ ಗಳಲ್ಲಿಯೂ ಭಾರಿ ಪ್ರಮಾಣದ ದಾಸ್ತಾನಿದ್ದು, ಸದ್ಯಕ್ಕೆ ಬೇಡವಾಗಿದೆ.
ಏನಾಗಬೇಕಿದೆ?:
ಮುಸುಕಿನ ಜೋಳದ ಖರೀದಿಗೆ ಕೆಎಂಎಫ್ ಷರತ್ತುಗಳಿಗೆ ರೈತರು ಕಂಗಾಲಾಗಿದ್ದಾರೆ. ಸರಕಾರ ತುರ್ತು ಕ್ರಮವಾಗಿ ನೇರ ಖರೀದಿ ಕೇಂದ್ರಗಳನ್ನು ಆರಂಭಿಸಿ, ಗೋದಾಮು ಹಾಗೂ ಶೀತಗೃಹ ಸೌಲಭ್ಯಗಳನ್ನು ಹೆಚ್ಚಿಸಬೇಕು. ಬಡ್ಡಿರಹಿತ ಸಾಲ ಸೌಲಭ್ಯ ತುರ್ತು ಅಗತ್ಯವಾಗಿದೆ. ಮೌಲ್ಯವರ್ಧನೆ ಘಟಕಗಳು ಮತ್ತು ಪಶು ಆಹಾರ ಕಾರ್ಖಾನೆಗಳಿಗೆ ನೇರ ಸಂಪರ್ಕ ಕಲ್ಪಿಸಿದರೆ ಸ್ಥಳೀಯ ಮಟ್ಟದಲ್ಲೇ ಬೇಡಿಕೆ ಹೆಚ್ಚಿಸಿ ಬೆಲೆ ಸ್ಥಿರತೆ ಶಾಶ್ವತವಾಗಲಿದೆ.
ಬಾಕ್ಸ್
ನಾನಾ ತಾಲೂಕುಗಳ ಎಪಿಎಂಸಿಯಲ್ಲಿಮಾಸಿಕ ಆವಕ
(ಫೆ.1ರಿಂದ ಮಾ.1ವರೆಗೆ)
ಹಗರಿಬೊಮ್ಮನಹಳ್ಳಿ - ಆವಕ 96168 ಕ್ವಿಂ., ದರ- ಕನಿಷ್ಠ 1600ರೂ.
ಹೂವಿನಹಡಗಲಿ - ಆವಕ 187486 ಕ್ವಿಂ. ಕನಿಷ್ಠ ದರ- 1600 ರೂ.
ಕೊಟ್ಟೂರು - ತಿಂಗಳ ಆವಕ 222891 ಕ್ವಿಂ. ಕನಿಷ್ಠ ದರ - 1261ರೂ.
ಕೂಡ್ಲಿಗಿ - ಆವಕ 62360 ಕ್ವಿಂ. , ಕನಿಷ್ಠ ದರ- 1700ರೂ.
ಹರಪನಹಳ್ಳಿ - ಆವಕ 177529, ಕನಿಷ್ಠ ದರ - 1305ರೂ.
ಜಿಲ್ಲೆಯ ನಾನಾ ಎಪಿಎಂಸಿಗಳಲ್ಲಿಸೇರಿ ಒಟ್ಟು 74,6,452 ಕ್ವಿಂಟಾಲ್ ಆವಕವಾಗಿದೆ.
ಕೋಟ್ -
ಮೆಕ್ಕೆಜೋಳ ಹೋದ ವರ್ಷ ಹಿಂಗಾರು ಟೈಮಿನಲ್ಲಿಸತತವಾಗಿ 2.300ರೂ.ರೇಟ್ ಇತ್ತು. ಈ ಸರ್ತಿ ಬರೀ 1600 ರೂ.ಅಂದ್ರ ನಮ್ಮ ಪರಿಸ್ಥಿತಿ ಯಾರಿಗೇ ಹೇಳಬೇಕೋ ತಿಳಿವಲ್ದು. ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಈಗಲೇ ಮೆಕ್ಕೆಜೋಳ ಬೆಂಬಲ ಖರೀದಿ ಕೇಂದ್ರ ಶುರು ಮಾಡಬೇಕು.
-ಮೈನಳ್ಳಿ ಕೊಟ್ರೇಶಪ್ಪ, ಮುಸುಕಿನ ಜೋಳದ ಬೆಳೆಗಾರ, ಬನ್ನಿಗೋಳ ಗ್ರಾಮ.
ಕೋಟ್ -
ಬೆಂಬಲ ಬೆಲೆ ಖರೀದಿ ಕೇಂದ್ರ ಫೆ.13ರಂದು ಅವಧಿ ಮುಗಿದಿದ್ದು, ಈ ಅವಧಿಯನ್ನು
ವಿಸ್ತರಿಸಬೇಕು. ಪ್ರತಿ ರೈತರಿಗೆ ಕನಿಷ್ಠ 100 ಕ್ವಿಂಟಾಲ್ ನಷ್ಟು ಖರೀದಿ ಮಾಡಬೇಕು. ಈ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
-ಸಿದ್ದೇಶ್ ಉತ್ತಂಗಿ, ರಾಜ್ಯಾಧ್ಯಕ್ಷರು, ರಾಜ್ಯ ಈರುಳ್ಳಿ ಬೆಳೆಗಾರರ ಸಂಘ.
---
ವಿಎನ್ ಆರ್ 28ಎಚ್ ಬಿಎಚ್ 1
ಹಗರಿಬೊಮ್ಮಹಳ್ಳಿ ಪಟ್ಟಣದ ಚಿಂತ್ರಪಳ್ಳಿಯಲ್ಲಿಬೆಲೆ ಕುಸಿತದಿಂದಾಗಿ ಮೆಕ್ಕೆಜೋಳ
ಒಕ್ಕಣೆಯಾಗದ ಸ್ಥಿತಿ.

