ಮೀನುಗಾರ ಸಾವು

Contributed byjohn.dsouza@timesofindia.com|Vijaya Karnataka

A fisherman died tragically while at sea. Jagannatha Kharvi, 43, experienced chest pain during fishing operations off the coast of Gangolli. Fellow fishermen rushed him ashore and to Kundapura Government Hospital. Despite medical attention, he passed away on Sunday. A case has been registered at the Gangolli police station following a complaint by his brother.

fisherman dies in kundapura chest pain at sea during fishing

ಕುಂದಾಪುರ: ಮೀನುಗಾರಿಕೆ ವೇಳೆ ಎದೆನೋವು ಕಾಣಿಸಿಕೊಂಡು ಮೀನುಗಾರ ಮೃತಪಟ್ಟ ಘಟನೆ ಗಂಗೊಳ್ಳಿಯಲ್ಲಿನಡೆದಿದೆ. ಇಲ್ಲಿನ ನಿವಾಸಿ ಜಗನ್ನಾಥ ಖಾರ್ವಿ(43) ಮೃತಪಟ್ಟವರು. ಶ್ರೀಗಣಮಣಿಪ್ರಸಾದ್ ನಾಡದೋಣಿಯಲ್ಲಿಕೆಲಸ ಮಾಡಿಕೊಂಡಿರುವ ಅವರು ಫೆ.27ರಂದು ಗಂಗೊಳ್ಳಿ ದಾಕುಹಿತ್ಲುವಿನಿಂದ 5 ಮಾರು ದೂರ ಅರಬ್ಬೀ ಸಮುದ್ರಕ್ಕೆ ಸಾಗಿ ದೋಣಿಯಲ್ಲಿಮೀನುಗಾರಿಕೆ ಮಾಡುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೆ ಸಹ ಮೀನುಗಾರರು ಅವರನ್ನು ದಡಕ್ಕೆ ತಂದು ಅಂಬ್ಯುಲೆನ್ಸ್ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿದ್ದಾರೆ. ಮೃತರ ಸಹೋದರ ರಾಜೇಶ್ ಖಾರ್ವಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಓದಲೇ ಬೇಕಾದ ಸುದ್ದಿ