ಮಕ್ಕಳ ಮೇಲೆ ಪೋಷಕರು ನಿಗಾ ಇಡಿ

Contributed byvenki_dhreporter@rediffmail.com|Vijaya Karnataka

Parents are urged to actively monitor their children. The DYSP Lakshmaiah stressed the importance of guiding the youth away from drugs. He emphasized that while schools provide education, parents are responsible for teaching culture and distinguishing right from wrong. School authorities also called for parental involvement in discussing children's behavior to ensure they stay on the correct path.

parents must supervise children dsp lakshtrmayyas message at the school event

ಮಕ್ಕಳ ಮೇಲೆ ಪೋಷಕರು ನಿಗಾ ಇಡಿ

ವಿಕ ಸುದ್ದಿಲೋಕ ಕೆಜಿಎಫ್

ಸಮಾಜದಲ್ಲಿಯುವ ಪೀಳಿಗೆಯು ಡ್ರಗ್ಸ್ ಎಂಬ ಪೀಡುಗಿಗೆ ಬಲಿಯಾಗಿ ಹಾದಿ ತಪ್ಪುತ್ತಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಮಾಗದರ್ಶಕರಾಗಿ ಇರಬೇಕು ಮತ್ತು ಅವರ ಮೇಲೆ ನಿಗಾ ಇಡಬೇಕು. ಮಕ್ಕಳ ಮೇಲಿನ ಅತಿಯಾದ ಪ್ರೀತಿಯನ್ನು ಕೈಬಿಟ್ಟು, ಮಕ್ಕಳನ್ನು ಸರಿ ದಾರಿಯಲ್ಲಿಸಾಗುವಂತೆ ಮನವರಿಕೆ ಮಾಡಿಕೊಡಬೇಕೆಂದು ಡಿವೈಎಸ್ ಪಿ.ಲಕ್ಷತ್ರ್ಮಯ್ಯ ಹೇಳಿದರು.

ನಗರದ ಕಿಂಗ್ ಜಾಜ್ ರ್ ಹಾಲ್ ಸಭಾಂಗಣದಲ್ಲಿಅಯೋಜಿಸಲಾಗಿದ್ದ, ಗ್ರಾಂಡ್ ರಿಯಾನ್ ರೈನ್ಸ್ ಶಾಲಾ ವಾರ್ಷಿಕೋತ್ಸವ ಕಾರ ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

8ನೇ ತರಗತಿಯವರೆಗೂ ಮಕ್ಕಳಲ್ಲಿಅಂತಹ ಜ್ಞಾನವನ್ನು ಹೊಂದಿರುವುದಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಬಿಟ್ಟರೆ ಶಿಕ್ಷಕರು ನೋಡಿಕೊಳ್ಳುತ್ತಾರೆ ಎಂದು ಶಾಲಾ ಆಡಳಿತ ಮಂಡಳಿ ಮೇಲೆ ಒತ್ತಡ ಹಾಕಬಾರದು. ಏಕೆಂದರೆ ಶಾಲೆಯಲ್ಲಿಮಕ್ಕಳಿಗೆ ವಿಧ್ಯೆಯನ್ನು ನೀಡುತ್ತಾರೆ. ಮನೆಯಲ್ಲಿಪೋಷಕರು ಮಕ್ಕಳಿಗೆ ಸಂಸ್ಕೃತಿ ಕಲಿಸುವುದು ಪೋಷಕರ ಹೊಣೆಯಾಗಿದ್ದು, ಯಾವುದು ಸರಿ ಯಾವುದು ತಪ್ಪು ಎಂಬದನ್ನು ಮಕ್ಕಳಿಗೆ ಮನವರಿಕೆ ಮಾಡಕೊಡಬೇಕೆಂದು ಪೋಷಕರಿಗೆ ಕಿವಿ ಮಾತು ಹೇಳಿದರು.

ಶಾಲಾ ಆಡಳಿತ ಮಂಡಳಿಯ ತ್ಯಾಗರಾಜ್ ಮಾತನಾಡಿ ನಮ್ಮ ಶಾಲೆಯಲ್ಲಿವಿಧ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನೇ ಹೆಚ್ಚಳವಾಗುತ್ತಿದೆ. ಅದಕ್ಕೆ ತಕ್ಕಂತೆ ಆಡಳಿತ ಮಂಡಳಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಮಾಣಿಕವಾದ ಪ್ರಯತ್ನವನ್ನು ನಮ್ಮ ಶಾಲೆಯ ಶಿಕ್ಷಕರು ಹಾಗೂ ಆಡಳಿತಮಂಡಳಿಯವರು ಮಾಡುತ್ತಿರುವುದಾಗಿ ತಿಳಿಸಿದರು.

ಪೋಕಷರು ಮಕ್ಕಳನ್ನು ಶಾಲೆಗೆ ಕಳುಹಿಸಿ ಕೈಕಟ್ಟಿ ಕುಳಿತುಕೊಳ್ಳದೆ ಮಕ್ಕಳ ನಡೆವಣಿಕೆಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿ ಮಕ್ಕಳನ್ನು ಸರಿ ದಾರಿಗೆ ತರುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.

ಇದೇ ವೇಳೆ ಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

1ಕೆಜಿಎಫ್ 4

ಶಾಲಾ ವಾರ್ಷಿಕೋತ್ಸವ ಕಾರ ್ಯಕ್ರಮವನ್ನು ಉದ್ಘಾಟಿಸಿದ ಡಿವೈಎಸ್ಪಿ, ಲಕ್ಷತ್ರ್ಮಯ್ಯ, ಬಿಜೆಪಿ ಮುಖಂಡ ಸುರೇಶ್ ನಾರಾಯಣ್ ಕುಟ್ಟಿ ಹಾಗೂ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ತ್ಯಾಗರಾಜ್ .