ಜಗದ್ಗುರು ವೀರಸೋಮೇಶ್ವರ ಪ್ರಶಸ್ತಿ ಪ್ರದಾನ

Contributed byjamkhandikar.sushant080@gmail.com|Vijaya Karnataka

ಬೆಂಗಳೂರಿನ ಸಮರ್ಥನಂ ಸಭಾ ಭವನದಲ್ಲಿ ಜಗದ್ಗುರು ವೀರಸೋಮೇಶ್ವರರ 70ನೇ ಜನ್ಮದಿನೋತ್ಸವ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದಿಂದ ನೀಡುವ 'ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ' ಪ್ರಶಸ್ತಿಯನ್ನು ಅಂಧರ ಕ್ರಿಕೆಟ್‌ ವಿಶ್ವಕಪ್‌ ವಿಜೇತ ಭಾರತ ತಂಡದ ಆಟಗಾರ್ತಿಯರು ಮತ್ತು ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಡಾ. ಮಹಾಂತೇಶ ಜೆ.ಕೆ ಅವರಿಗೆ ಪ್ರದಾನ ಮಾಡಲಾಯಿತು. ಗಣ್ಯರು ಉಪಸ್ಥಿತರಿದ್ದರು.

jagadguru veerasomeshwara award 2023 presented in the presence of key personalities

ವಿಕ ಸುದ್ದಿಲೋಕ ಚಿಕ್ಕೋಡಿ ಬೆಂಗಳೂರಿನ ಸಮರ್ಥನಂ ಸಭಾ ಭವನದಲ್ಲಿಇತ್ತೀಚೆಗೆ ನಡೆದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ 70 ನೇ ಜನ್ಮದಿನೋತ್ಸವ ಸಮಾರಂಭದಲ್ಲಿಹುಕ್ಕೇರಿ ಹಿರೇಮಠ ಶ್ರೀ ಗುರುಶಾಂತೇಶ್ವರ ಸಂಸ್ಥಾನದಿಂದ ನೀಡುವ ‘ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂಧರ ಕ್ರಿಕೆಟ್ ಮಹಿಳಾ ಟೀಂ- 20 ವಿಶ್ವಕಪ್ ವಿಜೇತ ಭಾರತ ತಂಡದ ಆಟಗಾರ್ತಿಯರಾದ ಕರ್ನಾಟಕದ ದೀಪಿಕಾ ಡಿ.ಸಿ., ಕಾವ್ಯ ವಿ., ಕಾವ್ಯ ಎನ್ .ಆರ್ . ಹಾಗೂ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮತ್ತು ಸಮರ್ಥನಂ ಟ್ರಸ್ಟ್ ನ ಸಂಸ್ಥಾಪಕ ಡಾ. ಮಹಾಂತೇಶ ಜೆ.ಕೆ ಅವರಿಗೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು 25 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಹೊಸದಿಲ್ಲಿಯ ಅಖಿಲ ಭಾರತ ಹಿರಿಯ ನಾಗರಿಕರ ಮಹಾಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಮಹಾಂತೇಶ ಹಿರೇಮಠ, ಅಂಕಣಕಾರ ರವಿ ಹಂಜಿ, ಡಾ. ಕೆ. ಭೀಮ, ದಕ್ಷಿಣ ಆಫ್ರಿಕದ ಡಾ. ಜಾಜ್ ರ್ ಯಾಕೂಬ್ , ನ್ಯಾಯಾಧೀಶೆ ಅನುರಾಧಾ ಯಾಕೂಬ್ , ಪ್ರಾಚಾರ್ಯ ಡಾ. ಸಂಜಯ ಜೈನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.