ನವಲಗುಂದ

Contributed byhuchappabhovi@gmail.com|Vijaya Karnataka

ನವಲಗುಂದದ ಪಂಚಗೃಹ ಹಿರೇಮಠದ ಶ್ರೀಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಸಾವಿರಾರು ಭಕ್ತರು ಪ್ರತಿಭಟನೆ ನಡೆಸಿದರು. ಶ್ರೀ ಸಿದ್ದೇಶ್ವರ ಶ್ರೀಗಳು ಶಿಕ್ಷಣ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಠದ ಏಳ್ಗೆ ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಭಕ್ತರು ಆಗ್ರಹಿಸಿದರು. ಮಠದ ಪರಂಪರೆ ಹಾಗೂ ಶ್ರೀಗಳ ಸೇವೆ ಶ್ಲಾಘನೀಯವಾಗಿದೆ.

navalgunda grabs attention

13-ಎನ್ ವಿಎಲ್ -1

ಪಂಚಗೃಹ ಹಿರೇಮಠ , ಮಠದ ಶ್ರೀಗಳ ವಿರುದ್ಧದ ಅಪಪ್ರಚಾರಕ್ಕೆ ಖಂಡನೆ

ನವಲಗುಂದದಲ್ಲಿಭಕ್ತರ ಬೃಹತ್ ಪ್ರತಿಭಟನೆ

-ಈಗಿರುವ ಸಿದ್ದೇಶ್ವರ ಶ್ರೀ ಶಿಕ್ಷಣ ರಂಗಕ್ಕೆ ನೀಡಿದ ಕೊಡುಗೆ ಅಪಾರ

-ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ

ವಿಕ ಸುದ್ದಿಲೋಕ ನವಲಗುಂದ

ಸ್ಥಳೀಯ ಇತಿಹಾಸ ಪ್ರಸಿದ್ಧ ಪಂಚಗೃಹ ಹಿರೇಮಠ ಹಾಗೂ ಮಠದ ಶ್ರೀಗಳ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ, ತಾಲೂಕಿನ ಸಾವಿರಾರು ಮಠದ ಭಕ್ತರು ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿಬೃಹತ್ ಪ್ರತಿಭಟನೆ ಮಾಡಿ ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಹಿರಿಯರು ಮಾತನಾಡಿ, ಪಂಚಗೃಹ ಹಿರೇಮಠವು ಕಳೆದ ಹಲವಾರು ವರ್ಷಗಳಿಂದ ಅನ್ನ ಹಾಗೂ ಅಕ್ಷರ ದಾಸೋಹ ನಡೆಸುತ್ತಾ ಬಂದಿದ್ದು, ಭವ್ಯ ಪರಂಪರೆಯನ್ನು ಹೊಂದಿದೆ. ಸದ್ಯಕ್ಕಿರುವ ಪೀಠಾಧ್ಯಕ್ಷರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ 34 ವರ್ಷಗಳಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. 6 ಶಾಖಾ ಮಠಗಳನ್ನು ನಿರ್ಮಿಸಿ ತಾಲೂಕಿನಾದ್ಯಂತ ಅಧ್ಯಾತ್ಮ, ಪ್ರವಚನ ನೀಡುವ ಮೂಲಕ ಮನುಕುಲವನ್ನು ಮುನ್ನಡೆಸುತ್ತಾ ಬಂದಿದ್ದಾರೆ.

ತಮ್ಮ ಅನಾರೋಗ್ಯದ ದೃಷ್ಟಿಯಿಂದ ನೂತನ ಉತ್ತರಾಧಿಕಾರಿ ನೇಮಕ ಮಾಡಲು ಬಯಸಿದಂತೆ ಜಗದ್ಗುರು ಪಂಚ ಪೀಠಾಧೀಶರ ಸೂಚನೆ ಹಾಗೂ ಮಠದ ಭಕ್ತರ ಆಶಯವಂತೆ ಉತ್ತರಾಧಿಕಾರಿಗಳನ್ನು ನೇಮಕ ಮಾಡಲು ತೀರ್ಮಾನಿಸಿದ್ದು, ತಾಲೂಕಿನ ಎಲ್ಲಭಕ್ತರ ಬೆಂಬಲ ವ್ಯಕ್ತವಾಗಿದೆ. ಹೀಗಿದ್ದಾಗ್ಯೂ ಮಠದ ಏಳ್ಗೆ ಸಹಿಸದ ಕೆಲ ಹಿತಾಸಕ್ತಿಗಳು ಮಠದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಭಕ್ತರಲ್ಲಿನೋವುಂಟು ಮಾಡಿದೆ. ಅಂತಹ ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿ ಗಡಿ ಪಾರು ಮಾಡಬೇಕು. ನವಲಗುಂದ ಪಟ್ಟಣದಲ್ಲಿಶಂಕರ ಕಾಲೇಜು ನಿರ್ಮಿಸಲು ಮಠದಿಂದ 40 ಎಕರೆ ಜಮೀನನ್ನು ದಾನವಾಗಿ ನೀಡುವ ಮೂಲಕ ಲಕ್ಷಾಂತರ ಜನರ ಜ್ಞಾನಾರ್ಜನೆಗೆ ಶ್ರೀಮಠವು ಸಾಕ್ಷಿಯಾಗಿದೆ ಎಂದರು.

ಈ ಹಿಂದೆ ಪಂಚಪೀಠದ ಜಗದ್ಗುರುಗಳು ಸೂಚಿಸಿದ ದಿನಾಂಕದಂದು ಶ್ರೀಮಠಕ್ಕೆ ನೂತನ ಉತ್ತರಾಧಿಕಾರಿಗಳನ್ನು ನೇಮಕ ಮಾಡಲು ಸೇರಿದ ಜನರೆಲ್ಲಸರ್ವಾನುಮತದಿಂದ ಕೈ ಎತ್ತುವ ಮೂಲಕ ಒಪ್ಪಿಗೆ ಸೂಚಿಸಿದರು.

ಅಂದಾನಯ್ಯ ಹಿರೇಮಠ, ಅಣ್ಣಪ್ಪ ಬಾಗಿ, ವೀರೇಶ ಸೊಬರದಮಠ, ಶ್ರೀಶೈಲ ಮೂಲಿಮನಿ, ಉಸ್ಮಾನ ಬಬರ್ಚಿ, ವಿ.ಟಿ.ಕರಿಸಕ್ರಣ್ಣವರ, ಲೋಕನಾಥ ಹೆಬಸೂರ ಮಾತನಾಡಿದರು.

ಪಾಂಡಪ್ಪ ಕೋನರಡ್ಡಿ, ಎಂ.ಡಿ.ಕುಲಕರ್ಣಿ, ಸಿದ್ದಲಿಂಗಯ್ಯ ಹಿರೇಮಠ, ಶರ್ಮಾ ಹಿರೇಮಠ, ಶಿವಪ್ಪ ದುತಾರಿ, ಮರಿತಮ್ಮಪ್ಪ ಹಳ್ಳದ, ದೇವೇಂದ್ರಪ್ಪ ಹಳ್ಳದ, ಕೊಟ್ರೇಶ್ ಹಿರೇಮಠ, ಅಪ್ಪಣ್ಣ ಹಿರಗಣ್ಣವರ, ಯಲ್ಲಪ್ಪ ಭೋವಿ, ಮಲ್ಲಿಕಾರ್ಜುನ ಜಲಾದಿ, ಅಂದಾನಯ್ಯ ಕುಲಕರ್ಣಿ, ಬಾಬಾಜಾನ ಮುಲ್ಲಾ, ಸೈಫುದ್ದೀನ ಅವರಾದಿ, ಅಬ್ಬಾಸ ದೇವರಿಡು, ಪುರಸಭೆ ಅಧ್ಯಕ್ಷರು.ಸದಸ್ಯರು ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳ ಭಕ್ತರು, ಮಹಿಳೆಯರು ಮೆರವಣಿಗೆಯಲ್ಲಿಪಾಲ್ಗೊಂಡಿದ್ದರು.

ಪೊಟೊ-13-ಎನ್ ವಿಎಲ್ -1

ನವಲಗುಂದ ಪಂಚಗ್ರಹ ಹಿರೇಮಠ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ಶ್ರೀಮಠದ ಭಕ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಪೊಟೊ-13-ಎನ್ ವಿಎಲ್ -1ಎ

ನವಲಗುಂದ ಹಿರೇಮಠದ ವಿರುದ್ಧದ ಅಪಪ್ರಚಾರ ಖಂಡಿಸಿ ಸಾವಿರಾರು ಭಕ್ತರು ಬೃಹತ್ ಪ್ರತಿಭಟನೆ ನಡೆಸಿದರು.