ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆ ಪ್ರಗತಿಗೆ ವಿನೂತನ ಕಾರ್ಯಕ್ರಮ

Contributed bysathyabudikote@gmail.com|Vijaya Karnataka

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಶಿಕ್ಷಣ ಇಲಾಖೆ ಹೊಸ ಕಾರ್ಯಕ್ರಮವನ್ನು ಆರಂಭಿಸಿದೆ. ಖಾಸಗಿ ಶಾಲೆಗಳ ವ್ಯಾಮೋಹ ತಡೆಯಲು, ಸರ್ಕಾರಿ ಶಾಲೆಗಳ ಸೌಲಭ್ಯಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲಾಗುತ್ತಿದೆ. ಮಕ್ಕಳು ಮನೆಯಲ್ಲಿ ಪಾಠವನ್ನು ಹೇಗೆ ಅಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಹುದುಕುಳ ಗ್ರಾಮದಲ್ಲಿ ಈ ಪ್ರಯೋಗ ಆರಂಭವಾಗಿದೆ. ಪೋಷಕರ ಸಹಕಾರ ಕೋರಲಾಗಿದೆ.

new educational method for sslc students

ವಿಕ ಸುದ್ದಿಲೋಕ ಬಂಗಾರಪೇಟೆ

ಇತ್ತೀಚಿನ ದಿನಗಳಲ್ಲಿಪೋಷಕರಿಗೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿಓದಿಸಬೇಕು ಎಂಬ ವ್ಯಾಮೋಹ ಹೆಚ್ಚಾಗಿ ಸಾಲಸೋಲ ಮಾಡಿ ಓದಿಸುತ್ತಿದ್ದಾರೆ. ಆದರೆ ಮಕ್ಕಳು ಬುದ್ಧಿವಂತರಾಗುತ್ತಿಲ್ಲಬದಲಾಗಿ ಪೋಷಕರ ಹಣ ದುಂದುವೆಚ್ಚವಾಗುತ್ತಿದೆ ಎಂದು ಶಾಸಕ ಎಸ್ .ಎನ್ .ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಹುದುಕುಳ ಗ್ರಾಮದಲ್ಲಿಎಸ್ಸೆಸ್ಸೆಲ್ಸಿ ಮಕ್ಕಳ ಕಲಿಕೆಯ ಪ್ರಗತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮದಲ್ಲಿಮಾತನಾಡಿದರು. ಮಕ್ಕಳು ತರಗತಿಗಳಲ್ಲಿಕಲಿತ ಪಾಠಗಳನ್ನು ಮನೆಗಳಲ್ಲಿಅದನ್ನು ಮತ್ತೆ ಹೇಗೆ ಅಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ವಿಶೇಷ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮಗಳಲ್ಲಿಮಕ್ಕಳ ಪೋಷಕರನ್ನು ಭೇಟಿ ಮಾಡಿ, ಮಕ್ಕಳ ಕಲಿಕೆ ಯಾವ ರೀತಿ ಇದೆ. ಮುಂದಿನ ಶೈಕ್ಷಣಿಕ ಪ್ರಗತಿಗೆ ಯಾವ ರೀತಿಯಲ್ಲಿಪ್ರೋತ್ಸಾಹ ನೀಡಬೇಕು. ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿವಿದ್ಯಾಭ್ಯಾಸ ಮಾಡಿದರೆ ಮುಂದೆ ಜೀವನದಲ್ಲಿಹೇಗ ಇರುತ್ತಾರೆ ಎಂಬುದನ್ನು ಮನವರಿಕೆ ಮಾಡಲು ಜತೆಗೆ ಸರಕಾರಿ ಶಾಲೆಗಳಿಗೆ ಹೆಚ್ಚಾಗಿ ಮಕ್ಕಳನ್ನು ಸೇರಿಸಲು ಗ್ರಾಮಗಳಿಗೆ ಭೇಟಿ ನೀಡಲಾಗುತ್ತಿದೆ ಎಂದರು.

ಗ್ರಾಮೀಣ ಭಾಗದಲ್ಲಿಪೋಷಕರು ಪ್ರತಿಷ್ಠೆಗೆ ಕಟ್ಟುಬಿದ್ದು, ಬಡ್ಡಿಗೆ ಹಣ ತಂದು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡುತ್ತಿದ್ದಾರೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿಸರಕಾರದಿಂದ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳನ್ನು ಅರಿವು ಮೂಡಿಸಿ ಖಾಸಗಿ ಶಾಲೆಗಳಿಂದ ಮತ್ತೆ ಸರಕಾರಿ ಶಾಲೆಗಳಿಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮಕ್ಕಳ ಕಲಿಕೆಯನ್ನು ಖುದ್ದಾಗಿ ಪರೀಕ್ಷಿಸಲು ಅಧಿಕಾರಿಗಳು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹುದುಕುಳ ಗ್ರಾಮದಲ್ಲಿಪ್ರಾಯೋಗಿಕವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮುಂದೆ ನಿಗದಿ ಮಾಡಿದ ಗ್ರಾಮ ಮತ್ತು ಮಗುವಿನ ಮನೆಗೆ ಹೋಗಿ ಮಗು ಶಾಲೆಯಲ್ಲಿಮಾಡಿದ ಪಾಠವನ್ನು ಅಭ್ಯಾಸ ಮಾಡುತ್ತಿದೆಯೋ ಅಥವಾ ಆಟವಾಡುತ್ತಾ, ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದೆಯೋ ಎಂಬುದನ್ನು ಪರಿಶೀಲಿಸಿ, ಮಗುವಿಗೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಆಸಕ್ತಿ ಬರುವ ರೀತಿಯಲ್ಲಿಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಈ ವಿನೂತನ ಕಾರ್ಯಕ್ರಮಕ್ಕೆ ಮಕ್ಕಳ ಪೋಷಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಡಿಡಿಪಿಐ ಆಲ್ಮಾಸ್ ಫವೀರ್ ನ್ ತಾಜ್ , ತಹಸೀಲ್ದಾರ್ ಕೆಎನ್ .ಸುಜಾತಾ, ಬಿಇಒ ಶಶಿಕಲಾ, ಮುಖಂಡರಾದ ಚಂದ್ರಶೇಖರ್ , ಶ್ರೀರಾಮ, ಮುನಿರಾಜು ಮುಂತಾದವರು ಹಾಜರಿದ್ದರು.

13 ಬಂಗಾರಪೇಟೆ: ತಾಲ್ಲೂಕಿನ ಹುದುಕುಳ ಗ್ರಾಮದಲ್ಲಿಶಾಸಕ ಎಸ್ .ಎನ್ .ನಾರಾಯಣಸ್ವಾಮಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆಯ ಪ್ರಗತಿ ವೀಕ್ಷಿಸಿದರು.