ವಿಕ ಸುದ್ದಿಲೋಕ ಮಂಡ್ಯ
ಕಂದಾಯ ಇಲಾಖೆ ಯಲ್ಲಿನ ಇ-ಪೌತಿ ಖಾತಾ ಆಂದೋಲನದಲ್ಲಿಮಂಡ್ಯ ಜಿಲ್ಲೆಯು ರಾಜ್ಯದಲ್ಲಿಪ್ರಥಮ ಸ್ಥಾನದಲ್ಲಿದೆ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಉತ್ತವ ಕಾರ ್ಯನಿರ್ವಹಣೆಯಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಶ್ಲಾಘಿಘಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿನಡೆದ ಕಂದಾಯ ಇಲಾಖೆಯ ಕುಂದುಕೊರತೆÜ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘‘ಕಂದಾಯ ಇಲಾಖೆಯ ನೌಕರರ ಕಾರ್ಯಕ್ಷಮತೆ ಶ್ಲಾಘನೀಯ. ಅವರ ಪರಿಶ್ರಮದಿಂದ ಇಂದು ಇ-ಪೌತಿ ಖಾತಾ ಆಂದೋಲನದಲ್ಲಿಮೊದಲ ಸ್ಥಾನದಲ್ಲಿದ್ದೇವೆ,’’ಎಂದು ಹೇಳಿದರು.
‘‘ಸಾರ್ವಜನಿಕ ಹಿತದೃಷ್ಟಿಯಿಂದ ಇ-ಪೌತಿ ಖಾತೆ, ಸಕಾಲ ಅರ್ಜಿಗಳು, ಬೆಳೆ ಸಮೀಕ್ಷೆ ಹಾಗೂ ಎಲ್ಲಾವಿಷಯಗಳಲ್ಲಿಗುರಿ ನಿಗದಿಪಡಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತ್ವರಿತವಾಗಿ ಕೆಲಸ ಮಾಡಿಕೊಟ್ಟಂತಾಗುತ್ತಿದೆ. ಈ ಸಂದರ್ಭದಲ್ಲಿಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಪೌತಿ ಖಾತೆ ಆಂದೋಲನದ ಕೆಲಸವನ್ನು ಕಾನೂನುಬದ್ಧವಾಗಿ ಸರಕಾರ ನಿಗದಿಪಡಿಸಿರುವ ನಿಯಮಗಳ ಅನುಸಾರ ಮಾಡಬೇಕು,’’ ಎಂದು ತಿಳಿಸಿದರು.
‘‘ಜಿಲ್ಲೆಯಲ್ಲಿಕಂದಾಯ ಇಲಾಖೆಯಲ್ಲಿಖಾಲಿ ಹುದ್ದೆಗಳ ನೇರ ನೇಮಕಾತಿ ಸರಕಾರದ ಮಟ್ಟದಲ್ಲಿದೆ. ಸರಕಾರದಕ್ಕೆ ಈ ಸಂಬಂಧ ಪ್ರಸ್ತಾವನೆ ಕಳುಹಿಸಲಾಗಿದ್ದು, ನೇಮಕಾತಿ ಶೀಘ್ರವೇ ನೇಮಕಾತಿ ಪ್ರಕ್ರಿಯೆ ಸರಕಾರದಿಂದ ಆಗುತ್ತದೆ. ಕಂದಾಯ ಇಲಾಖೆಯ ನೌಕರರಿಗೆ ಕಾಲ ಮಿತಿ ವೇತನ ಬಡ್ತಿ ಪ್ರಕ್ರಿಯೆ ಪ್ರೊಬೇಷÜನರಿ ಘೋಷÜಣೆ ವಿಳಂಬ ಆಗದಂತೆ ತುರ್ತಾಗಿ ಮಾಡಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು,’’ ಎಂದು ತಿಳಿಸಿದರು.
‘‘ತುರ್ತು ಸಂದರ್ಭದಲ್ಲಿಅಧಿಕಾರಿಗಳು ನೌಕರರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡಬೇಕು. ವೇತನ ಪಾವತಿ ಪ್ರತಿ ತಿಂಗಳು ತಡ ಆಗದಂತೆ ಮಾಡಲು ಬಟವಾಡೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಕಂದಾಯ ಇಲಾಖೆಯಲ್ಲಿನೌಕರರ ಮೇಲೆ ಇಲಾಖಾ ವಿಚಾರಣೆಗಳನ್ನು ಬಾಕಿ ಇದ್ದು ನಿಗದಿತ ಅವಧಿಯೊಳಗೆ ತುರ್ತಾಗಿ ವಿಚಾರಣೆಯನ್ನು ಪೂರ್ಣಗೊಳಿಸಬೇಕು,’’ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಮಂಡ್ಯ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ , ಜಿಲ್ಲಾಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣಗೌಡ, ಜಿಲ್ಲಾಗ್ರಾಮಾಡಳಿತಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್ ಹಾಗೂ ಎಲ್ಲಾತಾಲೂಕುಗಳ ತಹಸೀಲ್ದಾರ್ ಭಾಗವಹಿಸಿದ್ದರು.
ಕೋಟ್ ..
ಗ್ರಾಮ ಸಹಾಯಕರು ಸೇವಾ ಅವಧಿಯಲ್ಲಿಮೃತಪಟ್ಟಲ್ಲಿಅವರ ಕುಟುಂಬಸ್ಧರಿಗೆ ಅನುಕಂಪದ ನೇಮಕಕ್ಕೆ ಕ್ರಮ ವಹಿಸಲಾಗಿದೆ. ಈ ಪ್ರಕ್ರಿಯೆಯು ವಿಳಂಬವಾಗದಂತೆ ಅವರ ಕುಟುಂಬಕ್ಕೆ ಅನುಕೂಲವಾಗುವಂತೆ ತುರ್ತಾಗಿ ನೇಮಕಾತಿ ಮಾಡಿಕೊಳ್ಳುವಂತೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು.
-ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ
ಸಾರ್ವಜನಿಕರ ಕೆಲಸವನ್ನು ಮಾಡಲು ಅಧಿಕಾರಿಗಳು ವಿಳಂಬವಾಗದಂತೆ ತುರ್ತಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಿಗದಿತ ಅವಧಿಯೊಳಗೆ ಸಾರ್ವಜನಿಕರ ಕೆಲಸವನ್ನು ಮಾಡಬೇಕು.
-ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾಧಿಕಾರಿ, ಮಂಡ್ಯ

