ಅಂತರ್ ರಾಜ್ಯ ಮಹಿಳೆಯರ ವಾಲಿಬಾಲ್ ಪಂದ್ಯಾಟ : ಎಸ್ ಡಿಎಂ ಕಾಲೇಜಿಗೆ ಪ್ರಶಸ್ತಿ

Contributed byaravindahebbar1971@gmail.com|Vijaya Karnataka

ಧಾರವಾಡದ ನವಲೂರಿನಲ್ಲಿ ನಡೆದ ಅಂತರ್‌ ರಾಜ್ಯ ಮಟ್ಟದ ಮಹಿಳೆಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ. ಪ್ರಿಯಾಂಕ ಉತ್ತಮ ಅಟ್ಯಾಕರ್ ಪ್ರಶಸ್ತಿ ಪಡೆದರೆ, ಐಶ್ವರ್ಯಾ ಬೆಸ್ಟ್ ಲಿಬ್ರೊ ಪ್ರಶಸ್ತಿ ಗಳಿಸಿದ್ದಾರೆ. ತಂಡದ ಸಾಧನೆಗೆ ಶಿಕ್ಷಣ ಸಂಸ್ಥೆಗಳು ಅಭಿನಂದನೆ ಸಲ್ಲಿಸಿವೆ. ಈ ವಿಜಯವು ಕಾಲೇಜಿಗೆ ಹೆಮ್ಮೆಯ ತಂದಿದೆ.

sdm college womens volleyball victory triumphs

ಬೆಳ್ತಂಗಡಿ: ಧಾರವಾಡ ಜಿಲ್ಲೆಯ ನವಲೂರಿನಲ್ಲಿಶ್ರೀ ಬನಶಂಕರಿ ದೇವಿ ಜಾತ್ರೆಯ ಅಂಗವಾಗಿ ನಡೆದ ಅಂತರ್ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಮಹಿಳೆಯರ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿಉಜಿರೆಯ ಎಸ್ ಡಿಎಂ (ಸ್ವಾಯತ್ತ) ಕಾಲೇಜಿನ ತಂಡವು ಪ್ರಥಮ ಸ್ಥಾನ ಗಳಿಸಿದೆ.

ಪಂದ್ಯಾಟದಲ್ಲಿಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿನಿ ಪ್ರಿಯಾಂಕ ಉತ್ತಮ ಅಟ್ಯಾಕರ್ , ವಿದ್ಯಾರ್ಥಿನಿ ಐಶ್ವರ್ಯಾ ಬೆಸ್ಟ್ ಲಿಬ್ರೋ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು. ತಂಡದಲ್ಲಿವಿದ್ಯಾರ್ಥಿಗಳಾದ ರಕ್ಷಿತಾ, ಶ್ರಿಯಾ, ಸಂಗೀತ , ಜಸ್ಲಿನ್ , ಇಂಚರ, ಸಾಕ್ಷಿ, ಸ್ಮಿತಾ, ಲಾಸ್ಯ, ಅಪೂರ್ವ, ತನು ಮತ್ತು ಅಂಜಲಿ ಪಾಲ್ಗೊಂಡಿದ್ದರು. ತಂಡಕ್ಕೆ ಎಸ್ ಡಿಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್ . ತರಬೇತಿ ನೀಡಿದ್ದಾರೆ.

ವಿಜೇತ ತಂಡಕ್ಕೆ ಎಸ್ ಡಿಎಂ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ., ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ವಿಶ್ವನಾಥ್ ಪಿ., ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ , ದೈಹಿಕ ಶಿಕ್ಷಣ ಉಪನ್ಯಾಸಕ ಮತ್ತು ವಾಲಿಬಾಲ್ ತರಬೇತುದಾರ ಸುದೀನ್ ಪೂಜಾರಿ, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

12ಎಂಜೆ ವಾಲಿಬಾಲ್

ಚಿತ್ರ ವಿವರ-

ಪ್ರಥಮ ಸ್ಥಾನ ಗಳಿಸಿದ ಉಜಿರೆಯ ಎಸ್ ಡಿಎಂ ತಂಡ.