11ಮಹೇಶ7
ಧಾರವಾಡ ಲಯನ್ಸ್ ಸಂಸ್ಥೆಯಿಂದ ಅನ್ನದಾಸೋಹ
ಹಸಿವು ಮುಕ್ತ ಅಭಿಯಾನಕ್ಕೆ ಕೈ ಜೋಡಿಸಿ
ವಿಕ ಸುದ್ದಿಲೋಕ ಧಾರವಾಡ
ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯು ಹಸಿವು ಮುಕ್ತ ಅಭಿಯಾನದ ಅಡಿಯಲ್ಲಿಜ.3ರಿಂದ 11ರ ವರೆಗೆ ಜಗತ್ತಿನಾದ್ಯಂತ ಆಹಾರ ಧಾನ್ಯ ಅಭಿಯಾನ, ಸಮುದಾಯ ಭೋಜನ ಹಾಗೂ ಹಸಿವು ಪರಿಹಾರದ ಕಿಟ್ ಗಳನ್ನು ನೀಡುತ್ತಿದೆ ಎಂದು ಕಲಕೇರಿ ಸಂಗೀತ ವಿದ್ಯಾಲಯದ ಸಾರ್ವಜನಿಕ ಸಂಪರ್ಕ ನಿರ್ದೇಶಕ ವೀರಣ್ಣ ಪತ್ತಾರ ಹೇಳಿದರು.
ತಾಲೂಕಿನ ಕಲಕೇರಿ ಸಂಗೀತ ವಿದ್ಯಾಲಯದಲ್ಲಿಶನಿವಾರ ಧಾರವಾಡ ಲಯನ್ಸ್ ಸಂಸ್ಥೆಯು ನಡೆಸಿದ ಅನ್ನದಾಸೋಹ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಹಸಿವು ಮುಕ್ತ ಅಭಿಯಾನಕ್ಕೆ ಪ್ರತಿಯೊಬ್ಬ ನಾಗರಿಕರು ಕೈ ಜೋಡಿಸುವ ಅಗತ್ಯವಿದೆ ಎಂದರು.
ಸಂಗೀತ ಶಿಕ್ಷಕ ಕೃಷ್ಣ ಸುತಾರ ನೇತೃತ್ವದಲ್ಲಿಮಕ್ಕಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಂತರ 255 ವಿದ್ಯಾರ್ಥಿಗಳು ಅನ್ನದಾಸೋಹದ ಪ್ರಯೋಜನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ, ಲಯನ್ಸ್ ಕಾರ್ಯದರ್ಶಿ ಸುರೇಶ ಗುದಗನವರ, ಮುಖ್ಯ ಶಿಕ್ಷಕಿ ರೂಪಾಲಿ, ಶೈಲಾ ಕರಗುದರಿ, ಶ್ರೀಕಾಂತ ದೇವಗಿರಿ, ಯಶವಂತ ಶಿಂಧೆ, ಗಿರಿಧರ ದೇಸಾಯಿ, ಅರವಿಂದ ಹೆಬಸೂರ, ಡಾ. ಅನಿರುಧ್ ಕುಲಕರ್ಣಿ, ಶ್ರೀಕಾಂತ ಸಿ.ಕೆ., ಉಷ್ಮಾ ದೇಸಾಯಿ, ನಂದಿನಿ ಬಾಗಿ, ಶುಭದಾ ಮುಧೋಳಕರ, ಮೀರಾ ರಾವ್ , ವನಿತಾ ಹೆಬಸೂರ, ನಮ್ರತಾ ಪಾಟೀಲ, ಅನುರಾಧಾ ಕುಲಕರ್ಣಿ, ನೀತಾ ಕೊಪ್ಪಿಕರ, ರಾಜಶ್ರೀ ಗುದಗನವರ, ರಶ್ಮೀ ಭಾರದ್ವಾಜ್ , ವೈಶಾಖ ಸೇರಿದಂತೆ ಇತರರು ಇದ್ದರು.
ಫೊಟೊ: 11ಮಹೇಶ7
ಧಾರವಾಡ ಕಲಕೇರಿ ಸಂಗೀತ ವಿದ್ಯಾಲಯದಲ್ಲಿಶನಿವಾರ ಧಾರವಾಡ ಲಯನ್ಸ್ ಸಂಸ್ಥೆಯವರು ಅನ್ನದಾಸೋಹ ಕಾರ್ಯಕ್ರಮ ನಡೆಸಿದರು.

