ವಿಕ ಸುದ್ದಿಲೋಕ ಬಾವನಸೌಂದತ್ತಿ ಹಿಂದೂ ಧರ್ಮ ಮತ್ತೊಬ್ಬರಿಗೆ ನೋವು ಕೊಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಂಡು ಸಹಾಯ ಮಾಡುವವನೇ ನಿಜವಾದ ಹಿಂದೂ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳಗಾವಿ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ ಹೇಳಿದರು. ಚಿಂಚಲಿಯಲ್ಲಿಹಿಂದೂ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘‘ನಾಮ ಹಚ್ಚಿಕೊಳ್ಳುವವನು, ಜನಿವಾರ ಹಾಕುವವನು, ರುದ್ರಾಕ್ಷಿ ಹಾಕಿದ ಮಾತ್ರಕ್ಕೆ ಹಿಂದೂ ಎನ್ನಲಾಗದು. ಸಕಲ ಜೀವಜಾತಗಳ ಕ್ಷೇಮ ಬಯಸುವಿಕೆಯಲ್ಲಿಹಿಂದುತ್ವವಿದೆ. ಹಿಂದೂ ಸಂಸ್ಕೃತಿಯ ಮೇಲೆ ಅದೆಷ್ಟು ದಾಳಿಗಳು ನಡೆದರೂ ಜಗ್ಗದೆ ಅದು ಬಲಿಷ್ಠವಾಗಿ ನಿಂತಿದೆ. ಪ್ರಸ್ತುತ ಧರ್ಮದಲ್ಲಿಒಡಕು ಮೂಡಿಸುವ ಕೆಲಸವಾಗುತ್ತಿದ್ದು ಎಲ್ಲರೂ ಒಗ್ಗಟ್ಟಿನಿಂದಿರಬೇಕು,’’ ಎಂದರು. ಭರತೇಶ ಬನವಣೆ ಮಾತನಾಡಿ, ‘‘ಹಿಂದೂ ಪರಂಪರೆಗೆ ಅಗಾಧ ಶಕ್ತಿ ಇದೆ. ಇದು ಇಂದು- ನಿನ್ನೆಯದಲ್ಲ. ಹಿಂದೂ ಪರಂಪರೆಯನ್ನು ಗೌರವಿಸಬೇಕು. ಹಿಂದೂ ಧರ್ಮದ ಹಬ್ಬಗಳ ಆಚರಣೆಯಲ್ಲಿಪ್ರಕೃತಿಯೂ ಒಳಗೊಂಡಿದ್ದು, ನಾವು ಪ್ರಕೃತಿಯನ್ನು ಪ್ರೀತಿಸಬೇಕು,’’ ಎಂದರು. ಚಿಂಚಲಿಯ ವೇದಾಂತ ಕೇಸರಿ ಮಲ್ಲಿಕಾರ್ಜುನ ಗುರುದೇವ ಆಶ್ರಮದ ಶ್ರೀ ಸಿದ್ಧಪ್ರಸಾದ ಸ್ವಾಮೀಜಿ, ಪರಮಾನಂದ ವಾಡಿಯ ಬ್ರಹ್ಮಾನಂದಾಶ್ರಮದ ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಅಲಖನೂರಿನ ಬಸಯ್ಯಾ ಸಾಮೀಜಿ, ಶಾಸಕ ಡಿ.ಎಂ. ಐಹೊಳೆ, ಶಿರಗೂರದ ಅಭಿನವ ಕಲ್ಮೇಶ್ವರ ಮಹಾರಾಜರು, ವೈಭವಿ ಕುಲಕರ್ಣಿ,
ಮಹೇಶ ಕರಮಡಿ, ರಾಜೇಂದ್ರ ಖನದಾಳೆ, ರಮೇಶ ತೇಲಿ, ವೆಂಕಟೇಶ ದೇಶಪಾಂಡೆ, ಡಾ. ಸಚಿನ್ ಮಣಗುತ್ತಿ, ಅಂಕುಶ ಜಾಧವ ಮತ್ತಿತರರಿದ್ದರು. ಓಂಕಾರ ದಿವಟೆ ಸ್ವಾಗತಿಸಿದರು. ಸಚಿನ್ ಮಣಗುತ್ತೆ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಕುಲಗುಡೆ ನಿರೂಪಿಸಿದರು.

