ಸಂಸ್ಕಾರ ಕಲಿಸುವುದೇ ನಿಜವಾದ ಶಿಕ್ಷಣ

Contributed byckganappanavar@gmail.com|Vijaya Karnataka

ಮುಂಡರಗಿ ಜ.ತೋಂಟದಾರ್ಯ ಸಿಬಿಎಸ್‌ಇ ಶಾಲೆಯ ೨೧ನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಗದಗ ಡಂಬಳ ಜ.ಡಾ.ತೋಂಟದ ಸಿದ್ದರಾಮ ಸ್ವಾಮಿಗಳು ಸಂಸ್ಕಾರ ಕಲಿಸುವುದೇ ನಿಜವಾದ ಶಿಕ್ಷಣ ಎಂದು ಹೇಳಿದರು. ಮಕ್ಕಳಿಗೆ ಬದುಕಿನ ಮೌಲ್ಯಗಳನ್ನು ಕಲಿಸಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಪ್ರೊ.ಎಸ್‌.ವಿ.ಸಂಕನೂರ ಅವರು ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗಳಿಗಾಗಿ ಪ್ರೋತ್ಸಾಹಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕ್ರೀಡಾ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

true education is instilling values sharda school annual day

ಜ.ತೋಂಟದಾರ್ಯ ಸಿಬಿಎಸ್ ಇ ಶಾಲೆಯ ವಾರ್ಷಿಕೋತ್ಸವ ಸಮಾರಂಭ

ಸಂಸ್ಕಾರ ಕಲಿಸುವುದೇ ನಿಜವಾದ ಶಿಕ್ಷಣ

ವಿಕ ಸುದ್ದಿಲೋಕ ಮುಂಡರಗಿ

ಶಿಕ್ಷಣ ಎಂದರೆ ಕೇವಲ ಅಕ್ಷರಭ್ಯಾಸ, ಓದು ಕಲಿಕೆಯಲ್ಲವಿದ್ಯಾರ್ಥಿಗಳಿಗೆ ಬದುಕಿನಲ್ಲಿಸ್ವಾವಲಂಬನೆ ಬದುಕುವ ರೀತಿ ಹಾಗೂ ಮಾನವೀಯ ಮೌಲ್ಯ, ಸಂಸ್ಕಾರ ಕಲಿಸಿಕೊಡುವುದಾಗಿದೆ ಎಂದು ಗದಗ ಡಂಬಳ ಜ.ಡಾ.ತೋಂಟದ ಸಿದ್ದರಾಮ ಸ್ವಾಮಿಗಳು ಹೇಳಿದರು.

ಪಟ್ಟಣದ ಜ.ತೋಂಟದಾರ್ಯ ಸಿಬಿಎಸ್ ಇ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಕ್ಕಳ ಬೌದ್ಧಿಕ ಮಾನಸಿಕ ಶಕ್ತಿ ತುಂಬುವ ಜತೆಗೆ ಕೈ, ಬಾಯಿ ಪರಿಶುದ್ಧತೆಯ ಜತೆಗೆ ಇಂದ್ರೀಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಮಾಜಕ್ಕೆ ಒಳ್ಳೆಯ ನಾಗರಿಕರಾಗಿ ಬಾಳಬೇಕು. ಇದರಿಂದ ನೈತಿಕತೆಯ ಮೇಲೆ ಜೀವನ ನಡೆಸಲು ಪೂರಕ ವಾತಾವರಣ ಕಲ್ಪಿಸಿಕೊಟ್ಟಂತಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್ .ವಿ.ಸಂಕನೂರ ಮಾತನಾಡಿ, ಇಂದು ಜ್ಞಾನ, ಕೌಶಲ ಹೊಂದಿದವರಿಗೆ ಹೆಚ್ಚಿನ ಪ್ರಾಶಸ್ತ್ಯ ಇದ್ದು, ಪ್ರತಿ ವಿದ್ಯಾರ್ಥಿಯಲ್ಲಿಯೂ ವಿಶೇಷ ಕಲೆ ಶಕ್ತಿ ಇದ್ದೇ ಇರುತ್ತದೆ. ಎಂತಹ ಪ್ರತಿಭೆ ಇದ್ದರೂ ಕೌಶಲಯುತ ಜ್ಞಾನವೇ ಸ್ವಾವಲಂಬನೆ ಬದುಕಿಗೆ ಆಸರೆ. ಪಾಲಕರು ತಮ್ಮ ಮಕ್ಕಳನ್ನು ಕೇವಲ ಎಂಜಿನಿಯರ್ , ಡಾಕ್ಟರ್ ಹುದ್ದೆಗೆ ಸೀಮಿತಗೊಳಿಸದೆ ಉನ್ನತ ಹುದ್ದೆಗಳಾದ ಐಎಎಸ್ , ಕೆಎಎಸ್ , ಐಪಿಎಸ್ , ಐಎಫ್ ಎಸ್ ಪರೀಕ್ಷೆ ತಯಾರಿಸುವುದಕ್ಕೆ ಪ್ರೋತ್ಸಾಹಿಸಬೇಕು. ಇದಕ್ಕೆ ವಿದ್ಯಾರ್ಥಿಗಳ ಶ್ರಮ, ಶ್ರದ್ಧೆ ಮತ್ತು ಗುರಿ ಇರಬೇಕಾಗುತ್ತದೆ ಎಂದರು.

ತಾಪಂ ಇಒ ವಿಶ್ವನಾಥ ಹೊಸಮನಿ ಮಾತನಾಡಿ, ಮಕ್ಕಳಲ್ಲಿಸಾಂಸ್ಕೃತಿಕ ಮನೋಭಾವನೆ ಇದ್ದರೆ ಅದು ಪಠ್ಯಕ್ಕೆ ಸಹಾಯವಾಗುತ್ತದೆ ಎಂದರು.

ಮಾಜಿ ಸಚಿವ ಶಾಲಾ ಸಮಿತಿ ಅಧ್ಯಕ್ಷ ಎಸ್ .ಎಸ್ .ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸ್ಥಾನಿಕ ಸಮಿತಿ ಸದಸ್ಯರಾದ ನಾಗೇಶ ಹುಬ್ಬಳ್ಳಿ, ಹೇಮಗಿರೀಶ ಹಾವಿನಾಳ, ದೃವಕುಮಾರ ಹೊಸಮನಿ, ಈಶ್ವರಪ್ಪ ಬೆಟಗೇರಿ, ಕೊಟ್ರೇಶ ಅಂಗಡಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಪೃಥ್ವಿ ದೇಸಾಯಿ ಹಾಗೂ ಯಶೋಧ ಮೇಟಿ ಉಪಸ್ಥಿತರಿದ್ದರು.

ಪ್ರಾ.ಶರಣಕುಮಾರ ಬುಗಟಿ ವರದಿ ವಾಚಿಸಿದರು. ಜೆ.ಟಿ.ವಿದ್ಯಾಪೀಠ ಕಾರ್ಯದರ್ಶಿ ಎಸ್ .ಎಸ್ .ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವಿ ದಂಡಿನ ಸ್ವಾಗತಿಸಿದರು. ಮುಸ್ಕಾನ್ ಬೆಳಗಟ್ಟಿ, ಉಮ್ಮಿಜ್ವನ್ ದಿಬ್ಬದಹಳ್ಳಿ ನಿರೂಪಿಸಿದರು. ಶಂಕರ ಕುರಿಯವರ ವಂದಿಸಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿಕ್ರೀಡೆಗಳಲ್ಲಿಸಾಧನೆ ಮಾಡಿದ ಅನೇಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪೋಟೊ: 13 ಎಂಡಿಆರ್ 1:

ಮುಂಡರಗಿ ಜ.ತೋಂಟದಾರ್ಯ ಸಿಬಿಎಸ್ ಇ ಶಾಲೆಯ 21ನೇ ವಾರ್ಷಿಕೋತ್ಸವ ಸಮಾರಂಭವನ್ನು ಗದಗ, ಡಂಬಳ ತೋಂಟದಾರ್ಯ ಮಠದ ಜ.ಡಾ.ತೋಂಟದ ಸಿದ್ದರಾಮ ಸ್ವಾಮಿಗಳು ಉದ್ಘಾಟಿಸಿದರು.