ನಾಳೆಯಿಂದ ಬ್ರಿಲಿಯಂಟ್ ಕಲಾ ವೈಭವ
ತಾಳಿಕೋಟೆ: ಮೈಲೇಶ್ವರದ ಬ್ರಿಲಿಯಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕಲಾ ವೈಭವ ಕಾರ್ಯಕ್ರಮ ಜ. 16 ಮತ್ತು 17ರಂದು ನಡೆಯಲಿದೆ.
16ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹಾಗೂ ಕೊಲ್ಹಾರದ ಪಟ್ಟದೇವರು ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ವಹಿಸುವರು. ಮುದ್ದೇಬಿಹಾಳದ ಬಿಇಒ ಬಿ.ಎಸ್ . ಸಾವಳಗಿ ಉದ್ಘಾಟಿಸುವರು. ಸರ್ವಜ್ಞ ವಿದ್ಯಾಪೀಠದ ಸಿದ್ದನಗೌಡ ಮಂಗಳೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಾರುತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್ .ಬಿ. ನಡುವಿನಮನಿ ಅಧ್ಯಕ್ಷತೆ ವಹಿಸುವರು. ಗಣ್ಯರು ಉಪಸ್ಥಿತಿರುವರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. 17ರಂದು ಬೆಳಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಜಾಲಹಳ್ಳಿ ಸಂಸ್ಥಾನ ಬ್ರಹನ್ಮಠದ ಜಯಶಾಂತಲಿಂಗೇಶ್ವರ ಶಿವಾಚಾರ್ಯರು, ಸಿದ್ದಲಿಂಗ ದೇವರು ವಹಿಸುವರು. ತೆಲಸಂಗದ ಜ್ಞಾನಭಾರತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ.ಭರಮಣ್ಣ ಕಾಮನ್ ಉದ್ಘಾಟಿಸುವರು. ಕಾರ್ಕಳದ ಉಪನ್ಯಾಸಕಿ ಅಕ್ಷಯಾ ಗೋಖಲೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಗಣ್ಯರು ಉಪಸ್ಥಿತರಿರುವರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

