ದೇವಾಲಯಗಳಲ್ಲಿಸ್ವಚ್ಛತಾ ಅಭಿಯಾನ
ಹರಪನಹಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಕರ ಸಂಕ್ರಾಂತಿ ಹಬ್ಬ ನಿಮಿತ್ತ ತಾಲೂಕಿನ 55 ಪುರಾತನ ಕಾಲದ ದೇವಾಲಯಗಳಲ್ಲಿಸ್ವಚ್ಛತಾ ಅಭಿಯಾನ ನಡೆಸಲಾಯಿತು.
ದೇವಾಲಯದ ಒಳಗೆ, ಹೊರಗೆ ಹಾಗೂ ಆವರಣದ ಸುತ್ತ ಇರುವ ಕಸಕಡ್ಡಿ, ಗಿಡಗಂಟಿಗಳನ್ನು ಊರಿನ ಸಮಸ್ತರ ಸಹಕಾರ, ದೇವಾಲಯ ಸಮಿತಿ, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಯೋಜನೆಯ ಕಾರ್ಯಕರ್ತರು ಸೇರಿ ಸ್ವಚ್ಛತೆ ಮಾಡಿದರು. ತಾಲೂಕಿನ ಯೋಜನಾ ಅಧಿಕಾರಿ ಮಾತನಾಡಿ, ಪ್ರತಿವರ್ಷ ಆ,15, ಅ.2, ಜ.14, ಜ.26 ಸೇರಿ ವಿಶೇಷ ದಿನದಂದು ತಾಲೂಕಿನ ಬೇರೆಬೇರೆ ದೇವಾಲಯಗಳಲ್ಲಿಸ್ವಚ್ಛತೆ ಕಾರ್ಯಕ್ರಮ ನಡೆಸಲಾಗುವುದು,’’ ಎಂದರು.
---
14,ಹೆಚ್ .ಆರ್ .ಪಿ.ಪೋಟೋ,03- ಹರಪನಹಳ್ಳಿ ತಾಲೂಕಿನ ಕಣವಿಹಳ್ಳಿ ಗ್ರಾಮದ ಮೈಲಾರಲಿಂಗೇಶ್ವರ ದೇವಾಲಯದಲ್ಲಿಸ್ವಚ್ಛತೆ ಮಾಡಲಾಯಿತು.

