14ಎಎಫ್ ಝಡ್ 1 ಚಿತ್ರ:ಅಫಜಲಪುರ ಪಟ್ಟಣದ ತಹಸಿಲ್ ಕಚೇರಿಯಲ್ಲಿತಾಲೂಕ ಆಡಳಿತ ವತಿಯಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತೋತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
***
ಶರಣ ಜೀವನ ನಮಗೆ ದಾರಿದೀಪ
ವಿಕ ಸುದ್ದಿಲೋಕ ಅಫಜಲಪುರ
ಪಟ್ಟಣದ ತಹಸಿಲ್ ಕಚೇರಿಯಲ್ಲಿತಾಲೂಕ ಆಡಳಿತ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಹಸೀಲ್ದಾರ್ ಸಂಜೀವಕುಮಾರ ದಾಸರ ಮಾತನಾಡಿ, ಶಿವಯೋಗಿ ಸಿದ್ಧರಾಮೇಶ್ವರರು ಕೇವಲ ಮನುಷ್ಯರನ್ನು ಮಾತ್ರವಲ್ಲ,ಪ್ರಾಣಿ-ಪಕ್ಷಿಗಳನ್ನೂ ಸಮಾನವಾಗಿ ಪ್ರೀತಿಸಿದ ಮಹಾನ್ ಕಾಯಕಜೀವಿ. ಅವರ ಶರಣ ಜೀವನ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದರು.
ಭೋವಿ ಸಮುದಾಯದ ಶೈಕ್ಷಣಿಕ ಮಟ್ಟ ಇನ್ನೂ ಸುಧಾರಿಸಬೇಕಿರುವ ಅಗತ್ಯವಿದೆ ಎಂದು ಸೂಚಿಸಿ, ಸಮಾಜದ ಉನ್ನತಿಗೆ ಶಿಕ್ಷಣವೇ ಮೂಲ.ಸಮಾಜಬಂಧುಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ವಿದ್ಯಾಭ್ಯಾಸ ಕೊಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿಪಂಚ ಗ್ಯಾರಂಟಿ ಯೋಜನೆಗಳ ತಾಲೂಕ ಸಮಿತಿ ಅಧ್ಯಕ್ಷ ಪ್ರಕಾಶ ಜಮಾದಾರ ಹಾಗೂ ಜನಪರ ಹೋರಾಟಗಾರ ಶ್ರೀಮಂತ ಬಿರಾದಾರ ಮಾತನಾಡಿ,ಶಿವಯೋಗಿ ಸಿದ್ದರಾಮೇಶ್ವರರು ಜನಜೀವನಕ್ಕೆ ನೀರಾವರಿ ನೀಡುವ ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದಾರೆ.ಆದರೆ ನಾವು ಇಂದಿನ ದಿನಗಳಲ್ಲಿಗುಡಿ ಕಟ್ಟುವತ್ತ ಹೆಚ್ಚು ಗಮನ ಕೊಡುತ್ತಿದ್ದೇವೆ.ಮಕ್ಕಳ ಭವಿಷ್ಯ ಉಜ್ವಲವಾಗಬೇಕಾದರೆ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು.ಸಿದ್ದರಾಮೇಶ್ವರರು ಹಾಗೂ ಶರಣರ ಜೀವನ ಚರಿತ್ರೆ ಮತ್ತು ವಚನ ಸಾಹಿತ್ಯವನ್ನು ಓದಿಸುವ ಮೂಲಕ ಮಕ್ಕಳಲ್ಲಿಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಬಸವರಾಜ ಚಾಂದಕವಟೆ ಮಾತನಾಡಿ,ಶಿವಯೋಗಿ ಸಿದ್ದರಾಮೇಶ್ವರರ ಬಾಲ್ಯ ಜೀವನ,ಸಮಾಜಮುಖಿ ಕಾರ್ಯಗಳು ಹಾಗೂ ಅವರ ಸಾಧನೆಗಳ ಕುರಿತು ವಿವರಿಸಿದರು.ಇಂದಿನ ಇಂಜಿನಿಯರಿಂಗ್ ತಂತ್ರಜ್ಞಾನ ಇಲ್ಲದ ಕಾಲದಲ್ಲೇ ಅವರು ಕೆರೆ, ಬಾವಿಗಳನ್ನು ನಿರ್ಮಿಸಿ ಮನುಷ್ಯರು ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳ ದಾಹವನ್ನೂ ನೀಗಿಸಿದ್ದಾರೆ.ಬಡವರು ದೀನ ದಲಿತರು ಹಾಗೂ ಶೋಷಿತರ ಪರ ನಿಂತಿದ್ದುದಕ್ಕೆ ಅವರ ವಚನಗಳೇ ಸಾಕ್ಷಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ,ಸಿದ್ದರಾಮೇಶ್ವರ ತಾಲೂಕಾಧ್ಯಕ್ಷ ಪ್ರಮೋದ ಗಾಡಿ ವಡ್ಡರ,ಪುರಸಭೆ ಸದಸ್ಯ ಸೈಪನ್ ಚಿಕ್ಕಳಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು,ಸಂಘಟನೆಗಳ ಮುಖಂಡರು,ಭೋವಿ ಸಮಾಜದ ಹಿರಿಯರು ಯುವಕರು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
****
14ಎಎಫ್ ಝಡ್ 2 ಚಿತ್ರಸುದ್ದಿ
ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಬಿಜೆಪಿ ಪಕ್ಷದ ಮುಖಂಡ ವಸಂತರಾಯ್ ಚಲಗೇರಿ ಬಿಜೆಪಿ ತೊರೆದು ಶಾಸಕ ಎಂ.ವೈ.ಪಾಟೀಲ…, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಸಮ್ಮುಖದಲ್ಲಿಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಶಿವಪುತ್ರಪ್ಪ ಜಿಡ್ಡಗಿ,ವಿಜಯಕುಮಾರ ಪ್ರಧಾನಿ,ರೋವಿದಾಸ್ ಚೌವ್ಹಾಣ…, ನಿಂಗರಾಜ್ ಪಾಟೋಳಿ, ಪಂಡಿತ್ ನಾವಿ, ಚನ್ನು ದೇಶೆಟ್ಟಿ, ದೇವಾನಂದ್ ಜಿಡ್ಗಿಗಿ, ಶಿವಾನಂದ ನಂದಿ, ಚಂದು ಖೇಡಗಿ ಇತರರಿದ್ದರು.
**
14ಎಎಫ್ ಝಡ್ 3 ಚಿತ್ರಸುದ್ದಿ
ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ಭೀಮಾನದಿಯಲ್ಲಿಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ಶ್ರೀ ದತ್ತಾತ್ರೇಯ ದೇವಸ್ಥಾನದ ಅರ್ಚಕರು ರುದ್ರಪಾದ ತೀರ್ಥತೀರದಲ್ಲಿಪರ್ವಕಾಲ ಸ್ನಾನ ಮಾಡಿದರು.ಈ ಸಂದರ್ಭದಲ್ಲಿನಿರ್ಗುಣ ಮಠದ ಕಾರ್ಯದರ್ಶಿ ಪ್ರಿಯಾಂಕ ಪೂಜಾರಿ, ಪ್ರಖ್ಯಾತ ಪೂಜಾರಿ,ನರಹರಿ ಪೂಜಾರಿ,ಅವಧೂತ ಪೂಜಾರಿ, ಕಿರಣ್ ಪೂಜಾರಿ, ಪ್ರದುಮ್ನ ಪೂಜಾರಿ, ಅವಧೂತ ಪೂಜಾರಿ, ಸರ್ವೇಶ್ ಪೂಜಾರಿ, ಗುಂಡು ಪೂಜಾರಿ, ಕುಶಲ್ ಪೂಜಾರಿ ಸೇರಿದಂತೆ ಇತರರಿದ್ದರು.

