ವಿಕ ಸುದ್ದಿಲೋಕ ಯಳಂದೂರು
ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಮಹಿಳಾ ಗ್ರಾಮ ಸಭೆ ನಡೆಯಿತು.
ಗ್ರಾ.ಪಂ. ಆವರಣದಲ್ಲಿಆಯೋಜಿಸಿದ್ದ ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ ಉದ್ಘಾಟಿಸಿದರು.
ನಾರಿ ಸ್ಕಿಲ್ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.ಒಟ್ಟು 91 ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿಅನುಕೂಲ ಇರುವಂಥ ಕೆಲ ಮಂದಿಯನ್ನು ಕೈಬಿಡಲಾಯಿತು. ಉಳಿದಂತ ನಿರ್ಗತಿಕರು ಇದ್ದರೂ ಅಂಥವರನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಅಂಥವರು ಸಭೆಯಲ್ಲಿಬಂದು ದೂರು ನೀಡಿದರು. ನಂತರ ಸಭೆಯಲ್ಲಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಗತಿಕರನ್ನು ಆಯ್ಕೆ ಮಾಡುವಂತೆ ಸೂಚಿಸಿದರು. ನಂತರ ಸುಮಾರು 30 ಕ್ಕೂ ಹೆಚ್ಚು ಮಂದಿಯ ಅರ್ಜಿಯನ್ನು ಪಡೆದುಕೊಂಡರು.
ವಿವಾಹವಾಗದೆ ಇರುವವರು, ವಿಶೇಷಚೇತನರು, ನಿರ್ಗತಿಕರು, ಮನೆ ಇಲ್ಲದವರ ಹೆಸರನ್ನು ಸಭೆಯಲ್ಲಿನೋಂದಣಿಮಾಡಿಕೊಳ್ಳಲಾಯಿತು. ಮನೆಯಲ್ಲಿಟಿವಿ ಇರಬಾರದು, ಮನೆ ಆರ್ ಸಿಸಿ ಇರಬಾರದು, ದ್ವಿಚಕ್ರವಾಹನಗಳು, ಮಕ್ಕಳು ಇರಕೂಡದು, ಸಾಲ ಪಡೆದಿರಬಾರದು, ಸರಕಾರಿ ನೌಕರರು ಇರಬಾರದು ಅಂಥಹ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಉಳಿದಂತ ಫಲಾನುಭವಿಗಳನ್ನು ಕೈಬಿಡಲಾಯಿತು.
ಯೋಜನಾಧಿಕಾರಿ ಸುರೇಶ್ ಮಾತನಾಡಿ,‘‘ ನಮ್ಮ ಸಿಬ್ಬಂದಿ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಮೊಬೈಲ್ , ದ್ವಿಚಕ್ರವಾಹನ, ಮಕ್ಕಳಿದ್ದರೆ, ಹಾಗೂ ಆಸ್ತಿ ಇರುವುದು ಕಂಡು ಬಂದರೆ ಅಂಥಹ ಫಲಾನುಭವಿಗಳನ್ನು ಕೈಬಿಡಲಾಗುವುದು,’’ ಎಂದು ತಿಳಿಸಿದರು.
ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್ , ನೋಡಲ್ ಅಧಿಕಾರಿ ಅಮೃತೇಶ್ , ಪಿಡಿಒ ಕಾವ್ಯಾ, ಕಾರ್ಯದರ್ಶಿ ಸುನೀಲ್ , ಗ್ರಾ.ಪಂ ಸದಸ್ಯ ಮಂಜುನಾಥ್ , ಸಾವಿತ್ರಿರಾಮು, ಚಂದ್ರಮೌಳಿ, ಕೆಂಪರಾಜು, ದುಂಡಯ್ಯ, ನಾರಿ ಸ್ಕಿಲ್ ಸಿಬ್ಬಂದಿ, ಗ್ರಾ.ಪಂ ಸಿಬ್ಬಂದಿ, ಸಾರ್ವಜನಿಕರು, ಫಲಾನುಭವಿಗಳು ಹಾಜರಿದ್ದರು.
ಸಿಹೆಚ್ ಎನ್ 10ವೈಎಲ್ ಡಿ
ಪೋಟೊಕ್ಯಾಪ್ಸನ್ 3
ಯಳಂದೂರು ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಮಹಿಳಾ ಗ್ರಾಮ ಸಭೆ ನಡೆಯಿತು.

