ಜಾಹಿರಾತು ವಿಭಾಗದ ಸುದ್ದಿ
ಜೀಜಾಬಾಯಿ, ವಿವೇಕಾನಂದ ಜಯಂತಿ
ವಿಕ ಸುದ್ದಿಲೋಕ ವಿಜಯಪುರ
ನಗರದ ಶಿವಾಜಿ ಮಹಾರಾಜ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿರಾಜಮಾತಾ ಜೀಜಾಬಾಯಿ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಶಂಕರ ಕನಸೆ ಅವರು ಜೀಜಾಬಾಯಿ ಹಾಗೂ ವಿವೇಕಾನಂದರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಪೂಜೆ ನೆರವೇರಿಸಿದರು.
ಸಂಘದ ಉಪಾಧ್ಯಕ್ಷ ಸಂಜಯ ಜಂಬೂರೆ ಮಾತನಾಡಿ, ‘‘1598ರ ಜ.12ರಂದು ಮಹಾರಾಷ್ಟ್ರದ ಸಿಂಧಖೇಡ ಬಳಿಯ ದೇವಲಗಾಂವನಲ್ಲಿಜೀಜಾಬಾಯಿ ಜನಿಸಿದರು. ತಮ್ಮ ವೀರಪುತ್ರ ಛತ್ರಪತಿ ಶಿವಾಜಿ ಮಹಾರಾಜರ ಮನದಲ್ಲಿಮರಾಠಾ ಸಾಮ್ರಾಜ್ಯ ಸ್ಥಾಪನೆಯ ಕನಸು ತುಂಬಿ, ಹಿಂದವೀ ಸಾಮ್ರಾಜ್ಯ ಸ್ಥಾಪನೆಗೆ ಭದ್ರ ಬುನಾದಿ ಹಾಕಿದರು. ಸ್ವಾಮಿ ವಿವೇಕಾನಂದ ಜನ್ಮದಿನ ನಿಮಿತ್ತ ದೇಶಾದ್ಯಂತ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿವೇಕಾನಂದರ ಆದರ್ಶಮಯವಾದ ಜೀವನ ಹಾಗೂ ವಿಚಾರಗಳು ಇಂದಿನ ಯುವಕರು ಪ್ರೇರಣೆಯ ಶಕ್ತಿ,’’ ಎಂದರು.
ಸರಕಾರಿ ಜೀಜಾಮಾತಾ ಶಾಲೆಯಲ್ಲಿನ ರಾಜಮಾತಾ ಜೀಜಾವು ಅವರ ಕಂಚಿನ ಪುತ್ಥಳಿಗೆ ಸಂಘದ ನಿರ್ದೇಶಕರಾದ ಮಹಾದೇವ ಪವಾರ ಹಾಗೂ ಪ್ರವೀಣ ಬೋಡಕೆ, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಸಂಘದ ಪ್ರಧಾನ ವ್ಯವಸ್ಥಾಪಕ ಸಂಜಯ ಜಾಧವ ಮಾಲಾರ್ಪಣೆ ಮಾಡಿ ಪೂಜೆ ನೆರವೇರಿಸಿದರು.
ಸಂಘದ ಆಡಳಿತ ಮಂಡಳಿ ಸದಸ್ಯರಾದ ರಾಮಚಂದ್ರ ಚೌಹಾಣ್ , ಭಾರತ ದೇವಕುಳೆ, ರವಿ ಮದಭಾವಿ, ಪಾಂಡುರಂಗ ರೋಹಿಟೆ, ಸರೋಜನಿ ನಿಕ್ಕಮ್ , ಅಂಬುತಾಯಿ ಜಾಧವ, ಸುರೇಖಾ ಕದಂ, ವ್ಯವಸ್ಥಾಪಕ ಚಂದ್ರಕಾಂತ ಜಾಧವ, ಅಂಬಾದಾಸ ಚೌಹಾಣ್ ಹಾಗೂ ಸಿಬ್ಬಂದಿ, ಪಿಗ್ಮಿ ಏಜೆಂಟರು ಇದ್ದರು.
ಶಿವಾಜಿ-ಬಿಜೆಪಿ13
ವಿಜಯಪುರದ ಶಿವಾಜಿ ಮಹಾರಾಜ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿರಾಜಮಾತಾ ಜೀಜಾಬಾಯಿ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.

