ಮಹಾದಲ್ಲೂನಿರಾಣಿ ಕಾರ್ಖಾನೆ
ವಿಕ ಸುದ್ದಿಲೋಕ ಮುಧೋಳ
ನೆರೆಯ ರಾಜ್ಯ ಮಹಾರಾಷ್ಟ್ರದಲ್ಲೂನಿರಾಣಿ ಸಮೂಹ ಸಂಸ್ಥೆಯಿಂದ ಸಕ್ಕರೆ ಕಾರ್ಖಾನೆ ಮುನ್ನಡೆಸಲಾಗುತ್ತಿದೆ.
ಮಹಾರಾಷ್ಟ್ರದ ಪಾಟಸದಲ್ಲಿನ ಭೀಮಾ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಸಮೂಹ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಸಹಕಾರ ರಂಗದ ಭೀಮಾ ಕಾರ್ಖಾನೆ ಆರ್ಥಿಕ ತೊಂದರೆಗಳಿಂದ ಉತ್ಪಾದನೆ ನಿಲ್ಲಿಸಿತ್ತು. ಇದರಿಂದ ಕಾರ್ಮಿಕರು ಹಾಗೂ ರೈತರಿಗೆ ಬಹಳಷ್ಟು ತೊಂದರೆಯಾಗಿತ್ತು. ನಿರಾಣಿ ಸಮೂಹ ಸಂಸ್ಥೆ ಕಾರ್ಖಾನೆಯನ್ನು ಅಧೀನಕ್ಕೆ ಪಡೆದು ಮರು ಆರಂಭಿಸಿದೆ. ಇದರಿಂದ ಆ ಭಾಗದ ಕಬ್ಬು ಬೆಳೆಗಾರರು ಮತ್ತು ಕಾರ್ಮಿಕರಿಗೆ ನೆರವಾಗಿದೆ.
ನಿರಾಣಿ ಸಮೂಹದ ಅಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಗುಣಮಟ್ಟದ ಸಕ್ಕರೆ ಉತ್ಪಾದನೆ ಆಗುತ್ತಿರುವ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಫೋಟೊ 14 ಎಂಡಿಎಲ್ 1
ನಿರಾಣಿ ಸಮೂಹ ಸಂಸ್ಥೆಯಿಂದ ಮಹಾರಾಷ್ಟ್ರದಲ್ಲಿಆರಂಭಿಸಿರುವ ಭೀಮಾ ಸಕ್ಕರೆ ಕಾರ್ಖಾನೆ .

