ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುವೆ
*ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿಕೆ
ಮರಿಯಮ್ಮನಹಳ್ಳಿ : ‘‘ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತೇನೆ,’’ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಸಮೀಪದ ಹಂಪಿನಕಟ್ಟೆ ಗ್ರಾಮದಲ್ಲಿಸ.ಹಿ.ಪ್ರಾ ಶಾಲೆಗೆ ನೂತನ ಕಟ್ಟಡ ಮತ್ತು ಗ್ರಂಥಾಲಯ ಕೊಠಡಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘‘ಗ್ರಾಮಗಳಲ್ಲಿರೈತರ ಮತ್ತು ಬಡವರ ಮಕ್ಕಳು ಸರಕಾರಿ ಶಾಲೆಯನ್ನು ಹೆಚ್ಚು ಅವಲಂಬಿಸಿದ್ದಾರೆ. ಉತ್ತಮ ವಿದ್ಯಾಭ್ಯಾಸಕ್ಕೆ ಕೊಠಡಿ, ಗ್ರಂಥಾಲಯ ಸೇರಿ ಮೂಲ ಸೌಲಭ್ಯ ಒದಗಿಸುವಲ್ಲಿಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜತೆಗೆ ಹಳ್ಳಿಗಳ ರಸ್ತೆ ಅಭಿವೃದ್ಧಿಗೂ
ಪ್ರಾಧಾನ್ಯತೆ ನೀಡಲಾಗುವುದು,’’ ಗ್ರಾಮದ ಅಂಬರೀಶ್ ಗೌಡ, ಕಡ್ಡಿ ಹನುಮಂತಪ್ಪ,
ಶ್ರೀರಾಮ, ಲಕ್ಷ್ಮಣ, ಮುಖಂಡರಾದ ಪಾಂಡುರಂಗ ಶೆಟ್ಟಿ, ವೈ.ಮಲ್ಲಿಕಾರ್ಜುನ, ಈಡಿಗರ ಫಕೀರಪ್ಪ, ತಂಗರಾಜ ಇದ್ದರು.
---
14 ಮಮಹಳ್ಳಿ 2: ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟಿ ಗ್ರಾಮದಲ್ಲಿಸ.ಹಿ.ಪ್ರಾ ಶಾಲೆಗೆ ನೂತನ ಕಟ್ಟಡ ಹಾಗೂ ಗ್ರಂಥಾಲಯ ಕಾಮಗಾರಿಗೆ ಶಾಸಕ ಕೆ ನೇಮಿರಾಜ್ ನಾಯ್ಕ ಭೂಮಿ ಪೂಜೆ ನೆರವೇರಿಸಿದರು.

