ಸಿಐಡಿ ತನಿಖೆಗೆ ಸಂತ್ರಸ್ತೆಯ ಕುಟುಂಬ ಸಹಕರಿಸುತ್ತಿಲ್ಲ. ಬಿಜೆಪಿ ಕಾರ್ಯಕರ್ತ ವಿವಸ್ತ್ರ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿ ಎಸ್ಪಿ ಶಾಲೂ ನೇತೃತ್ವದ ತಂಡ ತೀವ್ರಗೊಳಿಸಿದೆ. ಆದರೆ, ಕುಟುಂಬ ಸೂಕ್ತ ಸಹಕಾರ ನೀಡದ ಕಾರಣ ತನಿಖೆಗೆ ಅಡಚಣೆ ಉಂಟಾಗಿದೆ. ಸೋಮವಾರ ಮತ್ತು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಕುಟುಂಬವು ಗೈರುಹಾಜರಾಗಿದೆ.
ಸಿಐಡಿ ತನಿಖೆಗೆ ಸಂತ್ರಸ್ತೆಯ ಕುಟುಂಬದವರಿಂದ ಸಹಕಾರ ಸಿಗುತ್ತಿಲ್ಲ. ಬಿಜೆಪಿ ಕಾರ್ಯಕರ್ತ ವಿಜಯಲಕ್ಷ್ಮಿ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಐಡಿ ಎಸ್ಪಿ ಶಾಲೂ ನೇತೃತ್ವದ ತಂಡ ತೀವ್ರಗೊಳಿಸಿದೆ. ಆದರೆ, ಕುಟುಂಬದವರು ಸೂಕ್ತ ಸಹಕಾರ ನೀಡದ ಕಾರಣ ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಂತ್ರಸ್ತೆಯ ಕುಟುಂಬದವರನ್ನು ಸಿಐಡಿ ತಂಡ ಸೋಮವಾರ ವಿಚಾರಣೆಗೆ ಕರೆದಿತ್ತು. ಆದರೂ, ಅವರು ಸೂಕ್ತ ಸಹಕಾರ ನೀಡಿರಲಿಲ್ಲ. ಹೀಗಾಗಿ, ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತೆಯ ತಾಯಿ ಕಮಲವ್ವ, ಸಹೋದರಿ ವಿಜಯಲಕ್ಷ್ಮಿ, ಸಹೋದರ ಮರಿಯದಾಸ್ ಅವರಿಗೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು.ಆದರೆ, ನೋಟಿಸ್ ನೀಡಿದರೂ ಮಂಗಳವಾರವೂ ಅವರು ವಿಚಾರಣೆಗೆ ಹಾಜರಾಗಿಲ್ಲ. ತಾವು ಊರಿನಲ್ಲಿಲ್ಲ, ಹೊರಗಡೆ ಇದ್ದೇವೆ ಎಂದು ಹೇಳಿ ವಿಚಾರಣೆಗೆ ಬರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಸಿಐಡಿ ತನಿಖೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.