ವಿಕ ಸುದ್ದಿಲೋಕ ಪುತ್ತೂರು
ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 9 ಆರೋಗ್ಯ ಮತ್ತು ಕ್ಷೇಮ ಕಟ್ಟಡ ಮಂಜೂರಾಗಿದೆ ಎಂದರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸೇವೆ ಮಾಡುವ ಸಮುದಾಯ ಆರೋಗ್ಯ ಅಧಿಕಾರಿಯನ್ನು ಸರಕಾರ ನೇಮಿಸಿದ್ದರೂ ಅವರಿಗೆ ಸೂಕ್ತ ಕಟ್ಟಡದ ವ್ಯವಸ್ಥೆ ಇರಲಿಲ್ಲ. ಇದೀಗ 9 ಕಟ್ಟಡ ಮಂಜೂರಾಗುವ ಮೂಲಕ ಬಹುಕಾಲದ ಬೇಡಿಕೆ ಈಡೇರಿದೆ.
ತಾಲೂಕಿನ ನರಿಮೊಗರು, ಬೆಟ್ಟಂಪಾಡಿ, ಬನ್ನೂರು, ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು, ಕೆಯ್ಯೂರು, ಪಡ್ನೂರು, ಕುರಿಯ ಮತ್ತು ನೆಕ್ಕಿಲಾಡಿಯಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ. ಕಟ್ಟಡಕ್ಕೆ ತಲಾ 65 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ. ಈ ಕಟ್ಟಡದಲ್ಲಿಸಮುದಾಯ ಆರೋಗ್ಯ ಅಧಿಕಾರಿ ಸೇವೆ ಒದಗಿಸಲಿದ್ದಾರೆ. ಕೇಂದ್ರದಲ್ಲಿಚಿಕಿತ್ಸೆಯ ಜೊತೆಗೆ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವೂ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.

