ನಾಗೇರ್ತಿ: ಜಾತ್ರಾ ಮಹೋತ್ಸವ ಸಂಪನ್ನ

Contributed bysanthoshshetty48@gmail.com|Vijaya Karnataka

ಗೋಳಿಯಂಗಡಿ: ಆವರ್ಸೆ ಗ್ರಾಮದ ನಾಗೇರ್ತಿ ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬುಧವಾರ ಸಂಪನ್ನಗೊಂಡಿತು. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತುಲಾಭಾರ ಸೇವೆ, ಮಹಾಪೂಜೆ, ಭಜನೆ, ಯಕ್ಷಗಾನ ಬಯಲಾಟ ಗಮನ ಸೆಳೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಉತ್ಸವ ಯಶಸ್ವಿಯಾಗಿ ಜರುಗಿತು.

akila jatra mahotsav 2023 spectacular celebration in nagerti

ಗೋಳಿಯಂಗಡಿ: ಆವರ್ಸೆ ಗ್ರಾಮದ ನಾಗೇರ್ತಿ ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದಲ್ಲಿನಾನಾ ಧಾರ್ಮಿಕ, ಸಾಂಸ್ಕೃತಿಕಾ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವವು ಬುಧವಾರ ಸಂಪನ್ನಗೊಂಡಿದೆ.

ಬೆಳಗ್ಗೆ ನಾನಾ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಸಂಜೆ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ನಾಗೇರ್ತಿ ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಶ್ರೀಸಾಲಿಗ್ರಾಮ ಮೇಳದವರಿಂದ ಷಣ್ಮುಖ ಪ್ರಿಯ ಯಕ್ಷಗಾನ ಬಯಲಾಟ ನಡೆಯಿತು.

ಮೊಕ್ತೇಸರ ವಿಜಯ ಶೆಟ್ಟಿ ಇಸಾರ್ ಮಕ್ಕಿ ಆವರ್ಸೆ, ಕಾರ್ಯದರ್ಶಿ ಅನಂದ ಶೆಟ್ಟಿ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ, ಮಂಜುನಾಥ ಹೆಗ್ಡೆ ಆವರ್ಸೆ, ಸೋಮಯ್ಯ ಶೆಟ್ಟಿ ಆವರ್ಸೆ, ನೀಲಕಂಠ ಅಡಿಗ, ಸಂತೋಷ ಶೆಟ್ಟಿ ಕೊಣ್ಣೆಮಕ್ಕಿ, ಸೂರ್ಯಪ್ರಕಾಶ್ ದಾಮ್ಲೆಸಬ್ಬಾಗಿಲು, ವೆಂಕಟೇಶ್ ಕುಲಾಲ ಚೋರಾಡಿ, ಅರ್ಚಕ ಉಮೇಶ ಅಡಿಗ ಕಿರಾಡಿ ಹಾಗೂ ಸಹ ಅರ್ಚಕ ವೃಂದವರು, ಊರ ಪರವೂರ ಸಾವಿರಾರೂ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಪೋಟೋ ಫೈಲ್ ನೇಮ್ :15 ಗೋಳಿಯಂಗಡಿ 1 ನಾಗೇರ್ತಿ

ಆವರ್ಸೆ ಗ್ರಾಮದ ನಾಗೇರ್ತಿ ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದಲ್ಲಿನಾನಾ ಧಾರ್ಮಿಕ, ಸಾಂಸ್ಕೃತಿಕಾ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವವು ಬುಧವಾರ ಸಂಪನ್ನಗೊಂಡಿದೆ.