ಜೈವಿಕ ಗೊಬ್ಬರ ಬಳಸಿ ಸಿರಿಧಾನ್ಯ ಬೆಳೆಯಿರಿ
ರೈತರಿಗೆ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ಅಧ್ಯಾಪಕ ವೆಂಕಟೇಶಪ್ಪ ಕೆ.ಸಿ. ಸಲಹೆ
ವಿಕ ಸುದ್ದಿಲೋಕ ಶ್ರೀನಿವಾಸಪುರ
ರೈತರು ಜೈವಿಕ ಗೊಬ್ಬರ ಬಳಸಿ ಸಿರಿಧಾನ್ಯ ಬೆಳೆದರೆ ಉತ್ತಮ ಆದಾಯ ಗಳಿಸಬಹುದೆಂದು ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ಅಧ್ಯಾಪಕ ವೆಂಕಟೇಶಪ್ಪ ಕೆ.ಸಿ. ಹೇಳಿದರು.
ತಾಲೂಕಿನ ಹೋಳೂರು ಹೋಬಳಿ ವ್ಯಾಪ್ತಿಯ ನುಕ್ಕನಹಳ್ಳಿ ಗ್ರಾಮದಲ್ಲಿಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ-2 ಯೋಜನಾ ಕಚೇರಿಯಿಂದ ರೈತರಿಗೆ ಆಯೋಜಿಸಿದ್ದ ಕೃಷಿ ತರಬೇತಿ ಮತ್ತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿಕರು ಇತ್ತೀಚಿನ ದಿನಗಳಲ್ಲಿಹಣದ ಸಂಪಾದನೆಗೆ ಒತ್ತು ಕೊಟ್ಟು ರಾಸಾಯನಿಕ ಗೊಬ್ಬರಗಳನ್ನು ಬಳಸಿ ಬೆಳೆ ಬೆಳೆಯುತ್ತಿದ್ದಾರೆ. ಈ ಆಹಾರ ಪದಾರ್ಥಗಳಲ್ಲಿಮನುಷ್ಯನಿಗೆ ಅಗತ್ಯವಾಗಿ ಬೇಕಾಗಿರುವ ಪೌಷ್ಟಿಕಾಂಶಗಳು ಸಿಗುತ್ತಿಲ್ಲ. ಆಯ್ದ ಕೆಲವು ರೈತರು ಮಾತ್ರ ಜೈವಿಕ ಹಸಿರು ಗೊಬ್ಬರ ತಯಾರಿಸಿ ಬಳಸುತ್ತಿದ್ದಾರೆ. ಹಿತ್ತಲು ಗೊಬ್ಬರ, ಹಸಿರೆಲೆ ಗೊಬ್ಬರ ಸೇರಿದಂತೆ ನಾನಾ ರೀತಿಯ ಗೊಬ್ಬರಗಳನ್ನು ತಯಾರಿಸಿ ಬೆಳೆಗಳಿಗೆ ಕೊಡುವುದರಿಂದ ಆಹಾರ ಧಾನ್ಯ, ಕಾಯಿ ಪಲ್ಯೆಗಳಲ್ಲಿಉತ್ತಮ ರೀತಿಯಲ್ಲಿಪೌಷ್ಟಿಕಾಂಶ ಇರುತ್ತದೆ. ಇತ್ತೀಚೆಗೆ ಕೆಲವು ರೈತರು ಈ ರೀತಿಯ ಜೈವಿಕ ಗೊಬ್ಬರ ಬಳಸಿ ಬೆಳೆದ ಸಿರಿಧಾನ್ಯಗಳನ್ನು ಹೆಚ್ಚಿನ ಬೆಲೆಗೆ ಮಾರಟ ಮಾಡಿ ದುಪ್ಪಟ್ಟು ಹಣ ಗಳಿಸುವ ಮಾರ್ಗ ಕಂಡುಕೊಂಡಿದ್ದಾರೆ ಎಂದು ತಿಳಿಸಿದರು.
ಕೃಷಿ ಮೇಲ್ವಿಚಾರಕ ಶರತ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ರಸಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಭೂಮಿ ವಿಷಮಯವಾಗಿ ಸವಕಲಾಗುತ್ತಿದೆ. ಯಾವುದೇ ಬೆಳೆ ಬೆಳೆದರೂ ಸತ್ವರಹಿತವಾಗಿರುತ್ತದೆ. ಕುಟುಂಬ ಜೀವನ ನಿರ್ವಹಣೆಗೆ ಆರ್ಥಿಕ ಸಂಪನ್ನರಾಗಲು ಸಾವಯವ ಹಸಿರೆಲೆ, ಸಗಣಿ, ತ್ಯಾಜ್ಯವನ್ನು ಕೊಳೆಸಿ ಜೈವಿನ ಗೊಬ್ಬರ ತಯಾರಿಸಿ ಕೃಷಿಯಲ್ಲಿಬಳಸಿದರೆ ಆಹಾರ ಪದಾರ್ಥಗಳು ಪೌಷ್ಟಿಕಾಂಶಯುಕ್ತವಾಗಿರುತ್ತದೆ ಎಂದರು.
ಒಕ್ಕೂಟದ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿಹಲವು ರೈತರು ಕುರಿ, ಮೇಕೆ ಮತ್ತು ಕೋಳಿಗಳ ಗೊಬ್ಬರ ಬಳಸುತ್ತಿದ್ದು ಈ ಕೃಷಿ ಸಮರ್ಪಕವಾದ ರೀತಿಯಲ್ಲಿಜನರ ಆರೋಗ್ಯಕ್ಕೆ ಲಾಭದಾಯಕವಾಗಿದೆ. ಸರಿಯಾದ ಕ್ರಮದಲ್ಲಿಗೊಬ್ಬರ ತಯಾರಿಸಿ ಬಳಸಿದರೆ ಖಂಡಿತವಾಗಿಯೂ ಆದಾಯ ವೃದ್ಧಿಯಾಗಿ ಆರ್ಥಿಕ ಸಬಲತೆ ಉತ್ತಮ ಮಾರ್ಗವಾಗುತ್ತದೆ ಎಂದು ತಿಳಿಸಿದರು.
ಸೇವಾ ಪ್ರತಿನಿಧಿ ಮಾಲತಿ ಮತ್ತು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
13 ಶ್ರೀನಿವಾಸಪುರ 1: ನುಕ್ಕನಹಳ್ಳಿ ಗ್ರಾಮದಲ್ಲಿನಡೆದ ಕೃಷಿ ತರಬೇತಿ ಮತ್ತು ರೈತ ಕ್ಷೇತ್ರ ಪಾಠಶಾಲೆಗೆ ವೆಂಕಟೇಶಪ್ಪ ಕೆ.ಸಿ. ಚಾಲನೆ ನೀಡಿ ಮಾತನಾಡಿದರು.

