ವಿಕ ಸುದ್ದಿಲೋಕ ಕಳಸ
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಇಲ್ಲಿನ ಐತಿಹಾಸಿಕ ಶ್ರೀ ಕಲಶೇಶ್ವರ ದೇವಸ್ಥಾನದಲ್ಲಿಭಕ್ತರಿಗೆ ಎಳ್ಳು-ಬೆಲ್ಲವನ್ನು ವಿತರಿಸಲಾಯಿತು.
ಹಿಂದೂ ಧರ್ಮದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯು ರಾಜ್ಯದ ಎಲ್ಲಾಅಧಿಸೂಚಿತ ದೇವಾಲಯಗಳಲ್ಲಿಮಕರ ಸಂಕ್ರಾಂತಿ ದಿನದಂದು ಕಡ್ಡಾಯವಾಗಿ ಎಳ್ಳು-ಬೆಲ್ಲವಿತರಿಸಲು ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿಭಕ್ತರಿಗೆ ಎಳ್ಳು-ಬೆಲ್ಲವಿತರಿಸಲಾಗಿದೆ.
ಪ್ರತಿ ಹಬ್ಬವೂ ಒಂದಲ್ಲಾಒಂದು ಕಾರಣ ಹೊಂದಿದೆ. ಸಂಪ್ರದಾಯ, ಆಚರಣೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿಜನರಲ್ಲಿಅರಿವು ಮೂಡಿಸಲು ಎಳ್ಳು-ಬೆಲ್ಲವಿತರಿಸಲು ನಿರ್ಧಾರ ಕೈಗೊಂಡಿದ್ದು ಶ್ಲಾಘನೀಯ ಎಂದು ದೇವಸ್ಥಾನದ ಅರ್ಚಕರು ತಿಳಿಸಿದರು.
ಪೊಟೋ
15ಕಳಸ3 ಕಳಸದ ಕಲಶೇಶ್ವರ ದೇವಸ್ಥಾನದಲ್ಲಿಮಕರ ಸಂಕ್ರಾಂತಿ ಅಂಗವಾಗಿ ಭಕ್ತರಿಗೆ ಎಳ್ಳು ಬೆಲ್ಲಹಂಚಲಾಯಿತು.

