ಓಂ ಶಕ್ತಿ ದೇವಿ ಉತ್ಸವ ಮೂರ್ತಿಯ ಮೆರವಣಿಗೆ

Contributed bysri.vknews@gmail.com|Vijaya Karnataka

ಲಕ್ಕೂರು ಗ್ರಾಮದಲ್ಲಿ ಓಂ ಶಕ್ತಿ ದೇವಿ ಉತ್ಸವ ಮೂರ್ತಿಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮಹಿಳೆಯರು ಕಳಶಗಳನ್ನು ಹೊತ್ತು, ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಓಂ ಶಕ್ತಿ ಮಾಲಾಧಾರಿಗಳು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಜನೆ ಹಾಗೂ ಪೂಜಾ ಕಾರ್ಯಕ್ರಮಗಳು 12 ಗಂಟೆಗಳ ಕಾಲ ನಡೆದವು. ನಂತರ ಕಳಶಗಳಿಂದ ದೇವಿಗೆ ಅಭಿಷೇಕ ಮಾಡಲಾಯಿತು. ಪ್ರತಿನಿತ್ಯ ಸಂಜೆ ಭಜನಾ ಕಾರ್ಯಕ್ರಮ ನಡೆಯಲಿದೆ.

grand procession of om shakti devi festival special participation of women

ಓಂ ಶಕ್ತಿ ದೇವಿ ಉತ್ಸವ ಮೂರ್ತಿಯ ಮೆರವಣಿಗೆ

ವಿಕ ಸುದ್ದಿಲೋಕ ಲಕ್ಕೂರು

ಲಕ್ಕೂರು ಗ್ರಾಮದ ಕೋಟೆ ಬೀದಿಯಲ್ಲಿರುವ ಓಂ ಶಕ್ತಿ ದೇವಾಲಯದಲ್ಲಿಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ಓಂ ಶಕ್ತಿ ದೇವಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು ಮಹಿಳೆಯರು ಕಳಶಗಳನ್ನು ಹೊತ್ತು ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಿದರು.

ಲಕ್ಕೂರು ಸೇರಿದಂತೆ ಹಲವು ಭಾಗಗಳಿಂದ ಆಗಮಿಸಿದ್ದ ಓಂ ಶಕ್ತಿ ಮಾಲಾಧಾರಿಗಳು ಗ್ರಾಮದ ಕೋಟೆ ಬೀದಿಯಲ್ಲಿರುವ ಓಂ ಶಕ್ತಿ ದೇವಾಲಯದಲ್ಲಿಜಮಾಯಿಸಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಓಂ ಶಕ್ತಿಯ ಭಜನೆ ಹಾಗೂ ಪೂಜಾ ಕಾರ್ಯಕ್ರಮವು 12 ಗಂಟೆಗಳವರೆಗೂ ನಡೆಯಿತು.

ನೂರಕ್ಕೂ ಹೆಚ್ಚು ಮಂದಿ ಓಂ ಶಕ್ತಿ ಮಾಲಾದಾರಿಗಳು ತಲೆಯ ಮೇಲೆ ಕಳಶಗಳನ್ನು ಹೊತ್ತು ದೇವಿಯ ಹಾಡುಗಳನ್ನು ಹಾಡುತ್ತಾ ಮಂಗಳವಾದ್ಯಗಳೊಂದಿಗೆ ಮುಖ್ಯರಸ್ತೆಯ ಮೂಲಕ ಬಾಲಾಜಿ ವೃತ್ತ, ಗಾಣಿಗರ ಬೀದಿ, ಬಲಜಿಗರ ಬೀದಿ, ಅಗಸರ ಬೀದಿಯ ಮೂಲಕ ಬಸ್ ನಿಲ್ದಾಣದಿಂದ ಜೆಪಿ ಕಾಲೋನಿ, ಶನಿಮಾಹಾತ್ಮ ಕಾಲೋನಿಗೆ ತೆರಳಿ ಹಲವು ದೇವಾಲಯಗಳಲ್ಲಿವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ದೇವಾಲಯಕ್ಕೆ ತೆರಳಿ ಕಳಶಗಳಿಂದ ದೇವಿಗೆ ಅಭಿಷೇಕ ಕಾರ್ಯಕ್ರಮ ನಡೆಯಿತು.

ಲಕ್ಕೂರು ಗ್ರಾಮದ ಕೋಟೆ ಬೀದಿಯಲ್ಲಿರುವ ಓಂ ಶಕ್ತಿ ದೇವಾಲಯದಲ್ಲಿರಾಜಮ್ಮ ನೇತೃತ್ವದಲ್ಲಿಪ್ರತಿನಿತ್ಯ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಓಂ ಶಕ್ತಿ ದೇವಿಗೆ ವಿಶೇಷ ಭಜನಾ ಕಾರ್ಯಕ್ರಮವು ನಡೆಯಲಿದೆ. ಭಜನಾ ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ತೀರ್ಥ, ಪ್ರಸಾದ, ಅನ್ನ ಪ್ರಸಾದ ವಿತರಣೆ ನಡೆಯಲಿದೆ.

14 ಲಕ್ಕೂರು ಪೋಟೊ 6. ಮಾಲೂರು ತಾಲೂಕಿನ ಲಕ್ಕೂರು ಗ್ರಾಮದ ಕೋಟೆ ಬೀದಿಯಲ್ಲಿರುವ ಓಂ ಶಕ್ತಿ ದೇವಾಲಯದಲ್ಲಿಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದ ಅಂಗವಾಗಿ ಓಂ ಶಕ್ತಿ ದೇವಿಯ ಉತ್ಸವ ಮೂರ್ತಿಯೊಂದಿಗೆ ಮಹಿಳೆಯರು ಕಳಶಗಳನ್ನು ಹೊತ್ತು ಮಂಗಳವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿಮೆರವಣಿಗೆ ನಡೆಸಿದರು.