15 ಎಎಲ್ಡಿ 1
ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿಆಳಂದ-ಕಲಬುರಗಿ ನೂತನ ಬಸ್ ಸಂಚಾರಕ್ಕೆ ಶಾಸಕ ಬಿ.ಆರ್ .ಪಾಟೀಲ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್ , ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಇದ್ದರು.
ಆಳಂದ-ಕಲಬುರಗಿ ನೂತನ 2 ಬಸ್ ಸಂಚಾರಕ್ಕೆ ಶಾಸಕ ಬಿ.ಆರ್ .ಪಾಟೀಲ್ ಚಾಲನೆ
ಬಸ್ ಸಂಚಾರ ಸೇವೆ ಹೆಚ್ಚಳಕ್ಕೆ ಪ್ರಯತ್ನ
ವಿಕ ಸುದ್ದಿಲೋಕ ಆಳಂದ
ಜಿಲ್ಲಾಕೇಂದ್ರ ಕಲಬುರಗಿಗೆ ಸಂಚರಿಸಲು ವ್ಯಾಪಾರಿಗಳು, ರೈತರು, ವಿದ್ಯಾರ್ಥಿಗಳ, ಶಕ್ತಿ ಯೋಜನೆ ಮಹಿಳೆಯರಿಗೂ, ಪ್ರಯಾಣಿಕರ ದಿನನಿತ್ಯ ಸಂಚಾರ ಅನುಕೂಲಕ್ಕೆ ಬಸ್ ಸೇವೆ ಅಗತ್ಯವಾಗಿದೆ. ಜನರ ಬೇಡಿಕೆ ಮನಗಂಡು ಹೊಸ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ನೀತಿ ಹಾಗೂ ಯೋಜನಾ ಆಯೋಗ ಉಪಾಧ್ಯಕ್ಷ, ಶಾಸಕ ಬಿ.ಆರ್ .ಪಾಟೀಲ್ ಹೇಳಿದರು.
ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿಗುರುವಾರ ಆಳಂದ-ಕಲಬುರಗಿ 2 ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಾದಂತೆ ಬಸ್ ನಿಲ್ದಾಣಕ್ಕೆ ಬಸ್ ಗಳು ಬಂದು ಹೋಗುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಗತ್ಯ ಬಿದ್ದರೆ ಸರಕಾರದ ಗಮನ ಸೆಳೆದು ಇನ್ನೂ ಬಸ್ ಸಂಚಾರ ಸೇವೆ ಹೆಚ್ಚಳಕ್ಕೆ ಪ್ರಯತ್ನಿಸಲಾಗುವುದು. ಈಗಾಗಲೇ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಮಂದಗತಿಯಲ್ಲಿಸಾಗಿದ್ದು ಕಾಮಗಾರಿ ವೇಗ ಹೆಚ್ಚಳ ಮಾಡುವಂತೆ ಮತ್ತು ಬಸ್ ನಿಲ್ದಾಣ ಕಾಮಗಾರಿ ಮುಗಿಯುವ ತನಕ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆ ಮಾಡುವಂತೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ನಂತರ ಅವರು ಬಸ್ ನಿಲ್ದಾಣ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದರು. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಇವರು ಬಸ್ ಸಂಚಾರ ವೇಳಾಪಟ್ಟಿಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್ , ಪುರಸಭೆ ಮಾಜಿ ಸದಸ್ಯ ಮಲ್ಲಪ್ಪ ಹತ್ತರಕಿ, ಚಂದ್ರಕಾಂತ ಹತ್ತರಕಿ, ಘಟಕದ ಮೇಲ್ವಿಚಾರಕ ಮಹ್ಮದ್ ಖಾನ್ , ವೈದ್ಯಕುಮಾರ ತೇಲ್ಕರ್ , ಮಶಾಕ ಪಟೇಲ್ , ಶ್ರೀಶೈಲ್ ನೀಲೆಗಾರ, ಸಂಗಮೇಶ, ಜಗದೇವಪ್ಪ, ಬಿ.ಎಸ್ .ಆಲೂರ, ಮುಖಂಡ ಶ್ರೀಶೈಲ್ ಹತ್ತರಕಿ, ಸಿದ್ದು ವೇದಶಟ್ಟಿ, ಮಹೇಶ ಹಿರೋಳಿ, ಶರಣಬಸಪ್ಪ ವಾಗೆ, ಪಿಂಟು ಸ್ವಾಮಿ, ಬಾಬುರಾವ ಮಡ್ಡೆ, ದಿಲೀಪ ಕ್ಷೀರಸಾಗರ, ಧರ್ಮಾ ಬಂಗರಗಿ, ವಿಕ್ರಮ ಅನ್ಸಾರಿ, ಸುಲೇಮಾನ ಮುಗುಟ, ರಾಜಕುಮಾರ ಚವ್ಹಾಣ, ಗೌಡಪ್ಪ ಗೌಡೆ ಸೇರಿ ವಿವಿಧ ಗ್ರಾಮಗಳ ಮುಖಂಡರು,ಪ್ರಯಾಣಿಕರು ಪಾಲ್ಗೊಂಡಿದ್ದರು.

