ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಶಾಸಕ ಸಿ.ಬಿ. ಸುರೇಶ್ ಬಾಬು ಟೀಕೆ
ವಿಕ ಸುದ್ದಿಲೋಕ ಶಿರಾ
ಸರಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಬೇರೆ ಯಾವುದೇ ರೀತಿಯ ಹಣದ ಮೂಲಗಳನ್ನು ಹುಡುಕುವ ಬದಲಾಗಿ ಮದ್ಯ ಮಾರಾಟ ಹೆಚ್ಚಿಸಿ ಜನರನ್ನು ಬೀದಿಗೆ ತಳ್ಳಿದೆ ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಬಿ. ಸುರೇಶ್ ಬಾಬು ಆರೋಪಿಸಿದರು.
ಅವರು ಶಿರಾ ತಾಲೂಕು ಬುಕ್ಕಾಪಟ್ಟಣ ಗ್ರಾಮದ ಶ್ರೀ ಪಾತಾಳ ಲಿಂಗೇಶ್ವರ ಸ್ವಾಮಿ ಸಮುದಾಯ ಭವನದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ 2035ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿಮಾತನಾಡಿದಆವರು, ಮದ್ಯವ್ಯಸನೆ ಎಂಬುದು ಸಮಾಜಕ್ಕೆ ಅಂಟಿದ ಶಾಪವಾಗಿದೆ. ಹಿಂದೆ ಎಚ್ .ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಸಾರಾಯಿ ನಿಷೇಧ ಮಾಡುವ ಮೂಲಕ ಹಳ್ಳಿಗಳಲ್ಲಿಮದ್ಯ ವ್ಯಸನಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಿದ್ದರು. ಆದರೆ ಇತ್ತೀಚಿಗೆ ಬಂದ ಸರಕಾರಗಳು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಗುರಿಯಿಂದ ಹೆಚ್ಚಿನ ಬಾರ್ ಗಳಿಗೆ ಲೈಸೆನ್ಸ್ ನೀಡಿ ಪ್ರತಿ ಹಳ್ಳಿಯಲ್ಲಿಯೂ ಒಂದೊಂದು ಬಾರ್ ಪ್ರಾರಂಭಿಸಿ ಮದ್ಯ ಮಾರಾಟ ಹೆಚ್ಚಿಸಿ ಕುಟುಂಬಗಳನ್ನು ಬೀದಿಗೆ ತರುವ ಕೆಲಸ ಮಾಡಿವೆ ಎಂದು ಟೀಕಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಉತ್ತಮ ರೀತಿಯಲ್ಲಿಗ್ರಾಮೀಣ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುವುದು, ಕೃಷಿ ತರಬೇತಿ, ಶುದ್ಧ ಕುಡಿಯುವ ನೀರು, ಅಂಗವಿಕಲರಿಗೆ ಸಾಧನ ಸಲಕರಣೆಗಳು, ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಿಕೊಡುವುದು.. ಹೀಗೆ ಹಲವಾರು ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ಶ್ಲಾಘಿಘಿಸಿದರು.
ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಎಲೆರಾಂಪುರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಇಂದು ಸಮಾಜದಲ್ಲಿಬಡವರ, ಶ್ರಮಿಕರ, ಮಹಿಳೆಯರ ಕ್ಷೇಮಾಭಿವೃದ್ಧಿಗೋಸ್ಕರ ಶ್ರಮಿಸುತ್ತಿರುವ ಹಾಗೂ ದೇವನೊಬ್ಬ ನಾಮ ಹಲವು ಎಂಬ ವಾಕ್ಯಕ್ಕೆ ಜೀವಂತ ಅರ್ಥವನ್ನು ಒದಗಿಸಿದಂತಹ ಏಕ ಸಂಸ್ಥೆ ಎಂದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾತ್ರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿತಾಪಂ ಮಾಜಿ ಅಧ್ಯಕ್ಷ ಹಾಗೂ ಶಿಬಿರದ ಅಧ್ಯಕ್ಷ ಬಿ.ಆರ್ . ಮಂಜುನಾಥ್ , ಶಿರಾ 2 ಯೋಜನಾಧಿಕಾರಿ ರಮೇಶ್ , ಬೆಂಗಳೂರು ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ಶೀನಪ್ಪ, ಬೆಂಗಳೂರು ಜನ ಜಾಗೃತಿ ವೇದಿಕೆ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ , ತುಮಕೂರು ಜಿಲ್ಲೆನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಗುಪ್ತ, ಶಿರಾ 2 ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಆಶಾ, ಶಿಬಿರಾಧಿಕಾರಿ ನಾಗೇಂದ್ರ, ಆರೋಗ್ಯ ಸಹಾಯಕಿ ರಂಜಿತಾ, ಬೆಂಗಳೂರು ಪ್ರಾದೇಶಿಕ ವಿಭಾಗದ ಜನ ಜಾಗೃತಿ ವೇದಿಕೆ ಮೇಲ್ವಿಚಾರಕ ದರ್ಶನ್ ಎಂ.ಎಸ್ ., ಬುಕ್ಕಾಪಟ್ಟಣ ವಲಯ ಮೇಲ್ವಿಚಾರಕ ನರೇಶ್ ಸೇರಿದಂತೆ ಹಲವರು ಹಾಜರಿದ್ದರು.
15ಶಿರಾ6: ಬುಕ್ಕಾಪಟ್ಟಣ ಗ್ರಾಮದಲ್ಲಿ2035ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಶಾಸಕ ಸಿ.ಬಿ. ಸುರೇಶ್ ಬಾಬು ಉದ್ಘಾಟಿಸಿದರು.

