ಕ್ವಾಂಟಮ್ ಭೌತಶಾಸ್ತ್ರ ಇಂದು ವಿಚಾರ ಸಂಕಿರಣ

Contributed bymaheshbadiger05@gmail.com|Vijaya Karnataka

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕ್ವಾಂಟಮ್‌ ಭೌತಶಾಸ್ತ್ರ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಜ.16ರಿಂದ ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಕ್ವಾಂಟಮ್‌ ಭೌತಶಾಸ್ತ್ರದ 100 ವರ್ಷಗಳ ಬೆಳವಣಿಗೆಗಳು ಮತ್ತು ಅದರ ಅನ್ವಯಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವರು. ಇದು ಭೌತಶಾಸ್ತ್ರ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಲಿದೆ.

new developments in quantum physics seminar discussions

15ಮಹೇಶ3

ಕ್ವಾಂಟಮ್ ಭೌತಶಾಸ್ತ್ರ ಇಂದು ವಿಚಾರ ಸಂಕಿರಣ

ವಿಕ ಸುದ್ದಿಲೋಕ ಧಾರವಾಡ

ಕರ್ನಾಟಕ ವಿಶ್ವವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿಜ.16ರಂದು ಬೆಳಗ್ಗೆ 9.30ಕ್ಕೆ ಕ್ವಾಂಟಮ್ ಭೌತಶಾಸ್ತ್ರದ 100 ವರ್ಷಗಳು, ಬೆಳವಣಿಗೆಗಳು ಮತ್ತು ನಾವೀನ್ಯ ಭೌತಿಕತೆಯಲ್ಲಿಬಹುಶಿಸ್ತೀಯ ಅನ್ವಯಿಕೆಗಳು ಎಂಬ ವಿಷಯದ ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಉದ್ಘಾಟಿಸುವರು. ಗುಲಬರ್ಗಾ ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಗೌರವಾನ್ವಿತ ಪ್ರಾಧ್ಯಾಪಕ ಪ್ರೊ.ಎಸ್ .ಉಮಾಪತಿ ದಿಕ್ಸೂಚಿ ಭಾಷಣ ಮಾಡುವರು. ಕವಿವಿ ಕುಲಪತಿ ಪ್ರೊ.ಎ.ಎಂ.ಖಾನ್ ಅಧ್ಯಕ್ಷತೆ ವಹಿಸುವರು.

ಮುಖ್ಯ ಭಾಷಣಕಾರರಾಗಿ ಪ್ರೊ.ಎಸ್ .ಎಂ.ಶಿವಪ್ರಸಾದ್ , ಪ್ರೊ.ಆರ್ .ಪ್ರಭು, ಪ್ರೊ.ಗಿರಿಧರ ಕುಲಕರ್ಣಿ, ಪ್ರೊ.ಎನ್ .ಎಸ್ . ವಿದ್ಯಾಧಿರಾಜಾ, ಪ್ರೊ.ಉಷಾದೇವಿ, ಪ್ರೊ.ಬಿ.ಎ.ಕಾಗಲಿ, ಪ್ರೊ.ಎಂ.ಕೆ.ರಬಿನಾಳ, ಪ್ರೊ.ವಿ.ಎಂ.ಜಾಲಿ ಹಾಗೂ ಪ್ರೊ.ಎಂ.ಎಸ್ . ಜೋಗದ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.