ಪ್ರಾದೇಶಿಕ ಅಸಮತೋಲನ; ಉ.ಕ.ಕ್ಕೆ ದೊಡ್ಡ ಸವಾಲು
ಪ್ರಾಂಶುಪಾಲ ಡಾ.ಕೆ.ಸತೀಶ ಹೇಳಿಕೆ | ದತ್ತಿ ಉಪನ್ಯಾಸ ಕಾರ್ಯಕ್ರಮ
ವಿಕ ಸುದ್ದಿಲೋಕ ಹೂವಿನಹಡಗಲಿ
‘‘ ಉತ್ತರ ಕರ್ನಾಟಕ ಪ್ರಾದೇಶಿಕ ಅಸಮತೋಲನವನ್ನು ನಿರಂತರವಾಗಿ ಎದುರಿಸುತ್ತಿದ್ದು, ಇದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ,’’ ಎಂದು ಹರಪನಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸತೀಶ ಹೇಳಿದರು.
ತಾಲೂಕಿನ ಮಹಾಜನದಹಳ್ಳಿಯ ತಿಗರಿ ಕರಿಯಪ್ಪ ಸರಕಾರಿ ಪ್ರೌಢಶಾಲೆಯಲ್ಲಿಕಸಾಪ ತಾಲೂಕು ಹಾಗೂ ಇಟ್ಟಿಗಿ ಹೋಬಳಿ ಘಟಕದ ಸಹಯೋಗದಲ್ಲಿಏರ್ಪಡಿಸಿದ್ದ ಪಾಟೀಲ್ ಅನ್ನದಾನಗೌಡರ, ಪಾಟೀಲ್ ಚನ್ನನಗೌಡರ ಸ್ಮಾರಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ , ವಿಧಾನ ಪರಿಷತ್ ಮಾಜಿ ಸದಸ್ಯ ದಿ.ಟಿ.ಎಸ್ . ಮೃತ್ಯುಂಜಯಪ್ಪ, ಮುದ್ದಿ ನಿಂಗಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ‘ಉತ್ತರ ಕರ್ನಾಟಕ ಅಭಿವೃದ್ಧಿಯ ಸ್ಥಿತಿಗತಿಗಳು’ ವಿಷಯದ ಕುರಿತು ಮಾತನಾಡಿದರು.
ಡಾ.ನಂಜುಂಡಪ್ಪ ಮತ್ತು ಗೋವಿಂದರಾವ್ ವರದಿಯಂತೆ ಉತ್ತರ ಕರ್ನಾಟಕದ ಅಭಿವೃದ್ಧಿ ಸ್ಥಿತಿಗತಿ ಮಿಶ್ರವಾಗಿದೆ. ಒಂದು ಪ್ರದೇಶ ಮೂಲ ಸೌಲಭ್ಯ ಮತ್ತು ತಾಂತ್ರಿಕ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದ್ದರೆ, ಮತ್ತೊಂದೆಡೆ ಅಭಿವೃದ್ಧಿ ಕಾಣದೇ ಪ್ರಾದೇಶಿಕ ಅಸಮತೋಲನದ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಈ ಸಮಸ್ಯೆ ನಿವಾರಣೆ ಯಕ್ಷ ಪ್ರಶ್ನೆಯಾಗಿದೆ,’’ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕ ಸಿ.ಗುರುಬಸವರಾಜ ಮಾತನಾಡಿ, ‘‘ವಿದ್ಯಾರ್ಥಿಗಳು ಸಾಹಿತ್ಯ , ಸಾಂಸ್ಕೃತಿಕ ಚಟುವಟಿಕೆಗಳತ್ತ ಒಲವು ಹೊಂದಿ ಬೌದ್ಧಿಕ ಜ್ಞಾನ ಬೆಳೆಸಿಕೊಳ್ಳಬೇಕು,’’ ಎಂದು ಸಲಹೆ ನೀಡಿದರು.
ಸಾಹಿತಿ ಕಾರ್ತಿಕ ಆಚಾರ್ಯ, ಎಂ.ನಿಂಗರಾಜ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಇಟ್ಟಿಗಿ ಹೋಬಳಿ ಕಸಾಪ ಅಧ್ಯಕ್ಷ ಜಿ.ಬಿ.ವಿನಯರಾಜ, ವಿಜ್ಞಾನ ಶಿಕ್ಷಕ ಎಂ.ಕೊಟ್ರೇಶ, ಸರ್ವಮಂಗಳಾ, ಗುರು ಬಸವರಾಜ ಸೇರಿ ಮತ್ತಿತರರು ಇದ್ದರು.
ಫೋಟೋ ಕ್ಯಾಪ್ಷನ್ : ವಿಎನ್ ಆರ್ 3ಎಚ್ ಡಿಎಲ್ ಪಿ4
ಹೂವಿನಹಡಗಲಿ ತಾಲೂಕಿನ ಮಹಾಜನದಹಳ್ಳಿಯ ತಿಗರಿ ಕರಿಯಪ್ಪ ಸರಕಾರಿ ಪ್ರೌಢಶಾಲೆಯಲ್ಲಿಏರ್ಪಡಿಸಿದ್ದ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿಪ್ರಾಂಶುಪಾಲ ಡಾ.ಕೆ.ಸತೀಶ ಮಾತನಾಡಿದರು.

