ವಿಕೆ ಅಚೀವರ್ಸಗೆ ಒಂದು ಪೇಜ್ ಜಾಹೀರಾತು

Contributed byganeshbyd143@gmail.com|Vijaya Karnataka

ಬ್ಯಾಡಗಿ ತಾಲೂಕಿನ ಜನಪ್ರಿಯ ಆಯುಷ್‌ ವೈದ್ಯ ಡಾ. ಎ.ಎಂ. ಸೌದಾಗರ ಅವರು ಮೂರು ದಶಕಗಳಿಂದ ಜನಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಸೇವೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಔಷಧಿ ವ್ಯಾಪಾರಸ್ಥರ ಸಂಘ, ರೋಟರಿ, ಅಂಜುಮನ್‌ ಸಂಸ್ಥೆಗಳ ಮೂಲಕ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕೋವಿಡ್‌ ಸಂದರ್ಭದಲ್ಲಿಯೂ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅವರ ಜನಪರ ಕಾರ್ಯಗಳು ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿವೆ.

dr am saudagar three decades of remarkable achievement in healthcare services

ಬ್ಯಾಡಗಿಯ ಜನಪ್ರಿಯ ಆಯುಷ್ ವೈದ್ಯ ಡಾ.ಎ.ಎಂ.ಸೌದಾಗರ

*ಮೂರು ದಶಕಗಳ ಸೇವಾ ಪಯಣಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

-

ವೈದ್ಯಕೀಯ ಸೇವೆಯನ್ನು ವೃತ್ತಿಯಷ್ಟೇ ಅಲ್ಲ, ಸಮಾಜಸೇವೆಯ ಸಾಧನವೆಂದು ಪರಿಗಣಿಸಿ ಮೂರು ದಶಕಗಳ ಕಾಲ ನಿರಂತರವಾಗಿ ಜನರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿರುವ ಡಾ. ಎ.ಎಂ. ಸೌದಾಗರ ಅವರು ಬ್ಯಾಡಗಿ ತಾಲೂಕಿನ ಜನಮಾನಸದಲ್ಲಿವಿಶ್ವಾಸಾರ್ಹ ವೈದ್ಯರಾಗಿಯೂ, ಸಕ್ರಿಯ ಸಮಾಜಸೇವಕರಾಗಿಯೂ ಹೆಸರು ಗಳಿಸಿದ್ದಾರೆ. ಆಯುಷ್ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ವೈದ್ಯಕೀಯ ಕ್ಷೇತ್ರದೊಂದಿಗೆ ಹಲವು ಸಂಘ-ಸಂಸ್ಥೆಗಳ ಮೂಲಕ ಸಾಮಾಜಿಕ ಕಾರ್ಯಗಳಲ್ಲಿತೊಡಗಿ ಮಾದರಿಯಾಗಿದ್ದಾರೆ.

ಸೇವಾ ಪರಂಪರೆಯ ಕುಟುಂಬದಲ್ಲಿಜನನ:

05-05-1972ರಂದು ಜನಿಸಿದ ಡಾ.ಸೌದಾಗರ ಅವರು ಆರೋಗ್ಯ ಸೇವೆಯ ಪರಂಪರೆಯನ್ನೇ ಕುಟುಂಬದಿಂದ ಪಡೆದುಕೊಂಡವರು. ತಾಯಿ ಜೈತುನಬಿ ಸೌದಾಗರ ಅವರು 1983-84 ರಲ್ಲಿಆರೋಗ್ಯ ಇಲಾಖೆಯಿಂದ ತರಬೇತಿ ಪಡೆದ ದಾಯಿಯಾಗಿ ಗ್ರಾಮೀಣ ಭಾಗಗಳಲ್ಲಿಅನೇಕ ತಾಯಂದಿರಿಗೆ ಮತ್ತು ಶಿಶುಗಳಿಗೆ ಸೇವೆ ಸಲ್ಲಿಸಿದ್ದಾರೆ. ಸುಮಾರು 30 ಸಾವಿರಕ್ಕೂ ಹೆಚ್ಚು ಸರಳ ಹೆರಿಗೆಯನ್ನು ಸುಲಲಿತವಾಗಿ ಮಾಡಿಸಿದ ಕೀರ್ತಿ ಅವರದ್ದು. ಅನೇಕ ಸಂಘ, ಸಂಸ್ಥೆಗಳಿಂದ ಪ್ರಶಸ್ತಿ, ಸನ್ಮಾನಗಳನ್ನು ಸಹ ಅವರು ಪಡೆದಿದ್ದಾರೆ.

1983-84ರಲ್ಲಿಅಂದಿನ ಕೇಂದ್ರ ಸರಕಾರದಿಂದ ಜಾರಿಗೆ ತರಲಾದ ಕುಟುಂಬ ಕಲ್ಯಾಣ ಯೋಜನೆಯ ಬಗ್ಗೆ ಜನರಿಗೆ ವಿಶೇಷವಾಗಿ ಮಹಿಳೆಯರಿಗೆ ಅರಿವು ಮೂಡಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿಮಹತ್ವದ ಪಾತ್ರ ವಹಿಸಿದ್ದರು. ಮುಂದೆ ರಾಷ್ಟ್ರೀಯ ಪಲ್ಸ್ ಪೊಲೀಯೋ ಅಭಿಯಾನದ ಅನುಷ್ಠಾನದಲ್ಲೂದುಡಿದಿದ್ದಾರೆ.

ಇನ್ನು, ಸೌದಾಗರ್ ಅವರ ತಂದೆ ಮತ್ತು ಅಜ್ಜ ಸಹ ಆಯುಷ್ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತಾಯಿಯ ಈ ಸೇವಾಭಾವ ಬಾಲ್ಯದಲ್ಲಿಯೇ ಡಾ.ಸೌದಾಗರ ಅವರ ಮನಸ್ಸಿನಲ್ಲಿಮಾನವೀಯ ಮೌಲ್ಯಗಳನ್ನು ಬೆಳೆಸಿತು.

ಪತ್ನಿ ರೆಹಾನಾಬಾನು ಸೌದಾಗರ ಅವರು ಔಷಧಿ ವ್ಯಾಪಾರ ಕ್ಷೇತ್ರದಲ್ಲಿತೊಡಗಿಸಿಕೊಂಡಿದ್ದು, ಆರೋಗ್ಯ ಸೇವೆಯಲ್ಲಿಕುಟುಂಬದ ಸಂಪೂರ್ಣ ಬೆಂಬಲ ದೊರಕುತ್ತಿದೆ. ಐದು ಮಕ್ಕಳ ತಂದೆಯಾದ ಅವರು, ಮಕ್ಕಳನ್ನೂ ಆರೋಗ್ಯ ಕ್ಷೇತ್ರದತ್ತ ಪ್ರೇರೇಪಿಸಿದ್ದಾರೆ. ಇಬ್ಬರು ಪುತ್ರರು ವೈದ್ಯರಾಗಿದ್ದು, ಇನ್ನು ಇಬ್ಬರು ಪುತ್ರರು ಹಾಗೂ ಒಬ್ಬ ಮಗಳು ಫಾರ್ಮಾಸಿಷ್ ್ಟಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಟುಂಬದ ಈ ಆರೋಗ್ಯಪರ ಹಿನ್ನೆಲೆ ಡಾ.ಸೌದಾಗರ ಅವರ ಸೇವಾ ದಾರಿಯನ್ನು ಮತ್ತಷ್ಟು ಬಲಪಡಿಸಿದೆ.

1993ರಿಂದ ನಿರಂತರ ವೈದ್ಯಕೀಯ ಸೇವೆ:

1993ರಲ್ಲಿವೈದ್ಯಕೀಯ ವೃತ್ತಿ ಪ್ರಾರಂಭಿಸಿದ ಡಾ.ಸೌದಾಗರ ಅವರು ಗ್ರಾಮೀಣ ಪ್ರದೇಶದ ಜನರಿಗೆ ಲಭ್ಯವಾಗದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿಕೆಲಸ ಮಾಡಿದರು. ವಿಶೇಷವಾಗಿ ಸಾಂಕ್ರಾಮಿಕ ಕಾಯಿಲೆಗಳ ಉಲ್ಬಣದ ಸಂದರ್ಭದಲ್ಲಿದಿನರಾತ್ರಿ ಪರಿಗಣಿಸದೆ ರೋಗಿಗಳ ಚಿಕಿತ್ಸೆಯಲ್ಲಿತೊಡಗಿದರು. ಡೆಂಗೆ, ವೈರಲ್ ಜ್ವರ, ಚರ್ಮ ಸಂಬಂಧಿ ರೋಗಗಳು ಸೇರಿದಂತೆ ವಿವಿಧ ಸಮಸ್ಯೆಗಳ ಸಂದರ್ಭದಲ್ಲಿಅವರ ಕ್ಲಿನಿಕ್ ಜನರಿಗೆ ಆಶ್ರಯ ಸ್ಥಳವಾಯಿತು.

ಆಯುಷ್ ಚಿಕಿತ್ಸಾ ವಿಧಾನಗಳ ಮೂಲಕ ಕಡಿಮೆ ವೆಚ್ಚದಲ್ಲಿಪರಿಣಾಮಕಾರಿ ಚಿಕಿತ್ಸೆ ನೀಡುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನೆರವಾದರು. ಹಲವಾರು ಸಂದರ್ಭಗಳಲ್ಲಿಉಚಿತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಸಂಘಟನೆ ಬಲವರ್ಧನೆ:

2007ರಿಂದ 2014ರವರೆಗೆ ಬ್ಯಾಡಗಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ ಸುಮಾರು ಏಳು ವರ್ಷ ಸೇವೆ ಸಲ್ಲಿಸಿದ ಡಾ.ಸೌದಾಗರ ಅವರು ಸಂಘಟನೆ ಬಲಪಡಿಸುವಲ್ಲಿಪ್ರಮುಖ ಪಾತ್ರವಹಿಸಿದರು. ಔಷಧಿಗಳ ಸರಬರಾಜು, ನಕಲಿ ಔಷಧಿಗಳ ನಿಯಂತ್ರಣ, ವ್ಯಾಪಾರಸ್ಥರ ಸಮಸ್ಯೆಗಳ ಪರಿಹಾರ ಹಾಗೂ ಸಾರ್ವಜನಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಈ ಅವಧಿಯಲ್ಲಿನೂರಾರು ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡಿದರು. ಗ್ರಾಮೀಣ ಭಾಗಗಳಲ್ಲಿಆರೋಗ್ಯ ಅರಿವು ಮೂಡಿಸುವ ಅಭಿಯಾನಗಳು ವ್ಯಾಪಕ ಮೆಚ್ಚುಗೆ ಪಡೆದವು. ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಇವರ ಅವಧಿಯಲ್ಲಿನೂರಾರು ಬಡ ರೋಗಿಗಳಿಗೆ ನಡೆಸಿದ್ದು ಇಂದಿಗೂ ಮಾದರಿಯಾಗಿದೆ.

ರೋಟರಿ ಅಧ್ಯಕ್ಷರಾಗಿ ಸಮಗ್ರ ಸೇವೆ:

2019-20ರಲ್ಲಿರೋಟರಿ ಇಂಟರನ್ಯಾಷನಲ್ ಸಂಸ್ಥೆಯ ಸ್ಥಳೀಯ ಘಟಕದ ಅಧ್ಯಕ್ಷರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ಇದೇ ಅವಧಿಯಲ್ಲಿಕೋವಿಡ್ ವಕ್ಕರಿಸಿತು. ಈ ವೇಳೆ ಜನರಲ್ಲಿಕೋವಿಡ್ ಬಗ್ಗೆ ಅರಿವು ಮೂಡಿಸುವುದು, ಬಡ ರೋಗಿಗಳಿಗೆ ಚಿಕಿತ್ಸೆಗೆ ಸಹಾಯ ಮಾಡುವುದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆ ಉಚಿತ ಮಾಸ್ಕ್ ವಿತರಣೆ ಮೊದಲಾದ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ.

ವಿದ್ಯಾರ್ಥಿಗಳಿಗೆ ಇ-ಲನಿಂರ್ ಗ್ ಕಿಟ್ ವಿತರಣೆ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿನಿಯರಿಗೆ ಆರೋಗ್ಯ ಕಾಳಜಿಯ ಬಗ್ಗೆ ಜಾಗೃತಿ ಮೊದಲಾದ ಕಾರ್ಯಗಳನ್ನು ನಡೆಸಿದ್ದಾರೆ. ಅವರ ಅಧ್ಯಕ್ಷತೆಯಲ್ಲಿಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕುರಿತಂತೆ ಹಲವು ಕಾರ್ಯಕ್ರಮಗಳು ಜಾರಿಗೆ ಬಂದವು.

ಗ್ರಾಮೀಣ ಶಾಲೆಗಳಲ್ಲಿವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿ ವಿತರಣೆ, ಆರೋಗ್ಯ ತಪಾಸಣಾ ಶಿಬಿರಗಳು, ರಕ್ತದಾನ ಶಿಬಿರಗಳು ಹಾಗೂ ಸ್ವಚ್ಛತಾ ಅಭಿಯಾನಗಳು ನಡೆದವು. ಸಂಘಟನೆಯನ್ನು ಚುರುಕುಗೊಳಿಸಿದ ಅವರ ಸೇವೆ ಗುರುತಿಸಿ 2019-20 ಸಾಲಿನ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿಗೆ ಭಾಜನರಾದರು.

ಅಂಜುಮನ್ ಸಂಸ್ಥೆಗೆ ಸೇವೆ:

ಅಂಜುಮನ್ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ.ಸೌದಾಗರ್ ಅವರು ಈ ಸಂದರ್ಭದಲ್ಲಿಭಾವೈಕ್ಯತೆಯನ್ನು ಬೆಳೆಸಲು ಒತ್ತು ನೀಡಿದರು. ಯಾವುದೇ ಧರ್ಮದ ಹಬ್ಬದ ಸಂದರ್ಭದಲ್ಲಿಶಾಂತಿ ಸಭೆಗಳನ್ನು ನಡೆಸಿ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಲು ಪ್ರಮುಖ ಪಾತ್ರ ವಹಿಸಿದರು. ಅಲ್ಲದೇ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿಶಾಸಕರ ಅನುದಾನದಿಂದ 40 ಲಕ್ಷ ರೂ. ವೆಚ್ಚದಲ್ಲಿಈದ್ಗಾ ಮೈದಾನದ ಅಭಿವೃದ್ಧಿ, ಶಾದಿ ಮಹಲ್ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಇಬ್ಬರು ಅನಾಥ ಹೆಣ್ಣು ಮಕ್ಕಳ ವಿವಾಹ ಕಾರ್ಯ ನೆರವೇರಿಸಿದ್ದು ಇವರ ಹೆಗ್ಗಳಿಕೆ. ಅಲ್ಲದೇ ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿಅಂಜುಮನ್ ಸಂಸ್ಥೆಯ ಸಭೆ ನಡೆಸಲು ಸುಮಾರು 6 ಲಕ್ಷ ವೆಚ್ಚದಲ್ಲಿಕಚೇರಿ ನಿರ್ಮಿಸಿದ್ದಾರೆ.

ಕೋವಿಡ್ ಸಂಕಷ್ಟದಲ್ಲಿಅಮೂಲ್ಯ ಸೇವೆ:

ಕೋವಿಡ್ ಮಹಾಮಾರಿಯ ಸಮಯದಲ್ಲಿಡಾ.ಸೌದಾಗರ ಅವರು ನಿಸ್ವಾರ್ಥ ಸೇವೆ ಸಲ್ಲಿಸಿದರು. ರಾಜ್ಯ ಸರಕಾರದ ಹಾಗೂ ಆರೋಗ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ರೋಗಿಗಳಲ್ಲಿಜಾಗೃತಿ ಮೂಡಿಸುವುದು, ಪ್ರಾಥಮಿಕ ಹಂತದ ಚಿಕಿತ್ಸೆ ನೀಡುವುದು, ತಪಾಸಣೆ ಕಾರ್ಯಗಳಲ್ಲಿಸಹಕರಿಸುವುದು ಸೇರಿದಂತೆ ಅನೇಕ ಕಾರ್ಯಗಳಲ್ಲಿತೊಡಗಿದರು. ಉಚಿತ ಮಾಸ್ಕ್ ವಿತರಣೆ, ಸ್ಯಾನಿಟೈಸರ್ ಗಳ ವಿತರಣೆ ಹಾಗೂ ಮನೆ ಮನೆಗೆ ತೆರಳಿ ಆರೋಗ್ಯ ಅರಿವು ಮೂಡಿಸುವ ಕಾರ್ಯಗಳನ್ನು ಕೈಗೊಂಡರು. ವಿದ್ಯಾರ್ಥಿಗಳ ಶಿಕ್ಷಣ ವ್ಯತ್ಯಯವಾಗದಂತೆ ಲರ್ನಿಂಗ್ ಕಿಟ್ ಗಳನ್ನು ವಿತರಿಸಿದರು.

ಅಪೌಷ್ಟಿಕತೆ ವಿರುದ್ಧ ಹೋರಾಟ:

ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಐದು ಮಕ್ಕಳನ್ನು ದತ್ತು ಪಡೆದು ಅವರ ಪೋಷಣೆ ಹಾಗೂ ಚಿಕಿತ್ಸೆ ಜವಾಬ್ದಾರಿ ಹೊತ್ತರು. ಇವರಲ್ಲಿಒಬ್ಬ ಮಗುವಿಗೆ ಸಮರ್ಪಕ ಚಿಕಿತ್ಸೆ ನೀಡಿ ಆರೋಗ್ಯಕರ ಜೀವನದತ್ತ ಮರಳಿಸಿದ ಘಟನೆ ಸಮಾಜದಲ್ಲಿಮೆಚ್ಚುಗೆ ಪಡೆದಿದೆ.

ವಿವಿಧ ಹುದ್ದೆಗಳಲ್ಲಿಜನಪರ ಕಾರ್ಯ:

2017ರಿಂದ 2022ರವರೆಗೆ ಹಾವೇರಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸಮುದಾಯದ ಆಸ್ತಿ ಪಾಸ್ತಿ ಹಾಗೂ ಕಲ್ಯಾಣ ಕಾರ್ಯಗಳಲ್ಲಿಪಾಲ್ಗೊಂಡರು. ರೈಲ್ವೆ ಕ್ಷೇಮಾಭಿವೃದ್ಧಿ ಕಾರ್ಯದರ್ಶಿಯಾಗಿ ಧಾರವಾಡ, ಮೈಸೂರು, ವಿಜಯಪುರ ಹಾಗೂ ಮಂಗಳೂರು ಮಾರ್ಗಗಳಲ್ಲಿರೈಲು ನಿಲುಗಡೆಗಾಗಿ ಹೋರಾಟ ನಡೆಸಿ ಯಶಸ್ಸು ಸಾಧಿಸಿದರು.

ಬ್ಯಾಡಗಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ನಿರ್ದೇಶಕರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿ, ಆಸ್ಪತ್ರೆಯ ಮೂಲ ಸೌಕರ್ಯ ಹಾಗೂ ರೋಗಿ ಸೇವೆಗಳ ಸುಧಾರಣೆಗೆ ಶ್ರಮಿಸಿದರು. ಅಂಜುಮನ್ ಸಂಸ್ಥೆಗೆ ಎರಡು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಒಂದು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ದಿಕ್ಕು ನೀಡಿದರು.

ಸಮಾಜಮುಖಿ ಚಿಂತನೆ, ಮಾನವೀಯತೆ:

ಡಾ.ಸೌದಾಗರ ಅವರ ಕಾರ್ಯಗಳಲ್ಲಿವೈದ್ಯಕೀಯ ಸೇವೆಯ ಜೊತೆಗೆ ಮಾನವೀಯತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಬಡವರ ಸಂಕಷ್ಟಗಳಿಗೆ ಸ್ಪಂದಿಸುವುದು, ಯುವಜನರಿಗೆ ಮಾರ್ಗದರ್ಶನ ನೀಡುವುದು, ಧಾರ್ಮಿಕ ಮತ್ತು ಸಾಮಾಜಿಕ ಏಕತೆ ಬೆಳೆಸುವ ಕಾರ್ಯಕ್ರಮಗಳಲ್ಲಿಭಾಗವಹಿಸುವುದು ಇವರ ವೈಶಿಷ್ಟ್ಯವಾಗಿದೆ.

ಸಾರ್ವಜನಿಕರಿಂದ ಕೃತಜ್ಞತೆ:

ಬ್ಯಾಡಗಿ ತಾಲೂಕಿನ ಜನರು ಡಾ.ಎ.ಎಂ.ಸೌದಾಗರ ಅವರನ್ನು ಕೇವಲ ವೈದ್ಯರಾಗಿ ಅಲ್ಲ, ವಿಶ್ವಾಸಾರ್ಹ ಮಾರ್ಗದರ್ಶಕರಾಗಿ ಕಾಣುತ್ತಾರೆ. ಸಂಕಷ್ಟದ ಸಂದರ್ಭಗಳಲ್ಲಿಅವರ ನೆರವು ಅನೇಕ ಕುಟುಂಬಗಳಿಗೆ ಆಧಾರವಾಗಿದೆ. ಆರೋಗ್ಯ ಮತ್ತು ಸಮಾಜ ಸೇವೆಯ ಸಮನ್ವಯದ ಮೂಲಕ ಅವರು ಮುಂದುವರಿಸುತ್ತಿರುವ ಸೇವಾ ಪಯಣವು ಯುವ ವೈದ್ಯರಿಗೆ ಹಾಗೂ ಸಮಾಜ ಸೇವಕರಿಗೆ ಪ್ರೇರಣೆಯಾಗಿದೆ.

ಮೂರು ದಶಕಗಳ ಅನುಭವ, ಸಂಘಟನಾ ನಾಯಕತ್ವ ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಡಾ.ಸೌದಾಗರ ಅವರು ಬ್ಯಾಡಗಿ ಕ್ಷೇತ್ರದಲ್ಲಿವಿಶಿಷ್ಟ ಸ್ಥಾನ ಗಳಿಸಿದ್ದು, ಮುಂದಿನ ದಿನಗಳಲ್ಲಿಯೂ ಇದೇ ಸಮರ್ಪಣಾ ಭಾವದಿಂದ ಜನಸೇವೆಯಲ್ಲಿತೊಡಗಿರಲಿದ್ದಾರೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿವ್ಯಕ್ತವಾಗುತ್ತಿದೆ.

ಆರೋಗ್ಯ ರಕ್ಷಾ ಸಮಿತಿ:

ಎರಡು ಅವಧಿಗೆ ಆರೋಗ್ಯ ರಕ್ಷಾ ಸಮಿತಿ ಸದಸ್ಯನಾಗಿ ಅಪೂರ್ವ ಸೇವೆಯನ್ನು ಡಾ.ಸೌದಾಗರ್ ಸಲ್ಲಿಸಿದ್ದಾರೆ. 100 ಹಾಸಿಗೆ ಆಸ್ಪತ್ರೆಯ ಉದ್ಘಾಟನೆ, 2 ಹೊಸ ಡಯಾಲಿಸಿಸ್ ಘಟಕಗಳ ಸ್ಥಾಪನೆ, ತಾಲೂಕು ಆಸ್ಪತ್ರೆಯ ಅತ್ಯುತ್ತಮ ನಿರ್ವಹಣೆ, ಅಭಿವೃದ್ಧಿ, ಪ್ರಯೋಗಾಲಯಕ್ಕೆ ಹೊಸ ವೈದ್ಯಕೀಯ ಸಲಕರಣೆಗಳ ಖರೀದಿ ಡಾ.ಸೌದಾಗರ್ ಅವರ ಸಹಯೋಗದಲ್ಲಿನಡೆದಿದೆ.

ರೈಲ್ವೇ ನಿಲುಗಡೆಗೆ ಹೋರಾಟ:

ರೈಲ್ವೇ ಅಭಿವೃದ್ಧಿ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಡಾ.ಸೌದಾಗರ್ ಅವರು, ಹುಬ್ಬಳ್ಳಿ-ಬೆಂಗಳೂರು ಇಂಟರ್ ಸಿಟಿ ರೈಲನ್ನು ಬ್ಯಾಡಗಿಯಲ್ಲಿನಿಲುಗಡೆ ಮಾಡಲು 10 ವರ್ಷ ಸತತ ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ. ಅಲ್ಲದೇ ವಿಜಯಪುರ- ಮಂಗಳೂರು ಹಾಗೂ ಧಾರವಾಡ -ಮೈಸೂರು ರೈಲುಗಳ ನಿಲುಗಡೆಯಲ್ಲೂಪಾತ್ರ ವಹಿಸಿದ್ದಾರೆ. ವಾಸ್ಕೋ -ಬೆಂಗಳೂರು, ಚಾಲುಕ್ಯ ದಾದರ್ ಎಕ್ಸಪ್ರೆಸ್ ರೈಲುಗಳ ನಿಲುಗಡೆಗೆ ಹೋರಾಟ ನಡೆಸಿದ್ದಾರೆ.

ರಾಜಕೀಯ ಕ್ಷೇತ್ರ:

ಡಾ.ಸೌದಾಗರ್ ಅವರ ತಾಯಿ ಜೈತುನಬಿ ಅವರು 1985-86ರಲ್ಲಿಬ್ಯಾಡಗಿ ಪುರಸಭೆ ಚುನಾವಣೆಗೆ ನಿಂತು ಆಯ್ಕೆಯಾದರು. ಜೈತುನಬಿ ಅವರು ಒಟ್ಟು ಮೂರು ಬಾರಿ ಬ್ಯಾಡಗಿ ಪುರಸಭೆ ಸದಸ್ಯರಾಗಿದ್ದರು. ತಾಯಿಯ ಚುನಾವಣಾ ಪ್ರಚಾರದಲ್ಲೂಸೌದಾಗರ್ ಅವರು ಸಕ್ರಿಯವಾಗಿ ತೊಡಗಿಕೊಳ್ಳುತ್ತಿದ್ದರು. ಹಾಗಾಗಿ ರಾಜಕೀಯ ಕ್ಷೇತ್ರವೂ ಸೌದಾಗರ್ ಅವರಿಗೆ ಬಾಲ್ಯದಿಂದಲೇ ಆಕರ್ಷಿಸಿತ್ತು. ರಾಜಕೀಯ ಎಸ್ .ಆರ್ . ಪಾಟೀಲರ ಜತೆ ಪುರಸಭೆ ಚುನಾವಣೆಗಳಲ್ಲಿಕೆಲಸ ಮಾಡಿದರು. ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣವರ ವಿಧಾನಸಭಾ ಚುನಾವಣೆಗಳಲ್ಲಿಸಕ್ರಿಯವಾಗಿ ತೊಡಗಿಸಿಕೊಂಡರು. ಪ್ರಸ್ತುತ ಹಾವೇರಿ ಜಿಲ್ಲಾ ಕಾಂಗ್ರೆಸ್ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

-

ಕೋಟ್

ಬಡವರು, ನಿರ್ಗತಿಕರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುವ ಗುರಿ ಹೊಂದಿದ್ದು ಈ ನಿಟ್ಟಿನಲ್ಲಿಈಗಾಗಲೇ ಕಾರ್ಯಾರಂಭ ಮಾಡಿದ್ದೇನೆ. ಕೇವಲ ಸರಕಾರದ ಆರೋಗ್ಯ ಸೇವೆಯೊಂದರಿಂದಲೇ ಎಲ್ಲಬಡವರನ್ನು ತಲುಪಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿನನ್ನ ಸಾಮಾಜಿಕ ಜವಾಬ್ದಾರಿ ಎಂದು ಭಾವಿಸಿದ್ದೇನೆ. ಐಶ್ವರ್ಯದಿಂದ ಬದುಕು ನಡೆಯದು, ಹಾರೈಕೆಯಿಂದ ಮಾತ್ರ ಜೀವನ ಸಾಧ್ಯ.

-ಡಾ.ಎ.ಎಂ.ಸೌದಾಗರ್ , ಆಯುಷ್ ವೈದ್ಯ ಬ್ಯಾಡಗಿ