ಉಡುಪಿ: ಹಿರಿಯ ನಾಗರಿಕರ ರಕ್ಷಣೆಗಾಗಿ ಹಾಗೂ ಜೀವನದ ಅಂತಿಮ ಹಂತದಲ್ಲಿಇರುವವರಿಗಾಗಿ ನಾವೇನು ಮಾಡಬಹುದೆನ್ನುವ ವಿಚಾರವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದಿಂದ ಸಾಮಾಜಿಕ ಜಾಗೃತಿ ಕಾರ್ಯಕ್ರಮವನ್ನು ಮಾ. 5ರಂದು ಸಂಜೆ 5 ಗಂಟೆಗೆ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿಹಮ್ಮಿಕೊಳ್ಳಲಾಗಿದೆ.
ವಿಚಾರಗೋಷ್ಠಿಯಲ್ಲಿಬದುಕಿರುವಾಗಲೇ ತಮ್ಮ ಆಸ್ತಿಗಳನ್ನು ಮುಂದಿನ ಜನಾಂಗದವರಿಗೆ ವಿಲ್ ಮಾಡುವುದು ಹೇಗೆ ಮತ್ತು ಯಾಕೆ? ಘನತೆಯಿಂದ ಸಾಯುವ ಹಕ್ಕು ಎಂದರೆ ಏನು? ಬದುಕಿನ ಕೊನೆಯಲ್ಲಿಗೌರವಯುತವಾದ ನೋವಿಲ್ಲದ ನೆಮ್ಮದಿಯ ಮರಣವನ್ನು ಪಡೆಯುವುದು ಹೇಗೆ? ಈ ವಿಚಾರವಾಗಿ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್ ಮಾಹಿತಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

