ಬದಿಯಡ್ಕ: ಪುತ್ತಿಗೆ ಪಂಚಾಯಿತಿ ಮಟ್ಟದಲ್ಲಿ ಮಾ.8 ರಂದು ಸೂರಂಬೈಲಿನ ಶ್ರೀ ಸಾಯಿರಾಮ್ ಭಟ್ ನಗರದಲ್ಲಿಜರಗಲಿರುವ ವಿರಾಟ್ ಹಿಂದೂ ಸಂಗಮದ ಅಂಗವಾಗಿ ಭಾನುವಾರ ಧ್ವಜ ದಿನಾಚರಣೆ ಮತ್ತು ಬೈಕ್ ರಾರ ಯಲಿ ನಡೆಯಿತು.
ಧರ್ಮತ್ತಡ್ಕದಿಂದ ಆರಂಭಗೊಂಡ ಬೈಕ್ ರಾರ ಯಲಿಯನ್ನು ವನವಾಸಿ ಕಲ್ಯಾಣ ಯೋಜನೆಯ ಕಾರ ್ಯಕರ್ತ ಸುಕುಮಾರನ್ ಅನಂತಪುರ ಓಂಕಾರ ಧ್ವಜವನ್ನು ಕಾರ ್ಯಕ್ರಮದ ರಕ್ಷಾಧಿಕಾರಿ, ಪುತ್ತಿಗೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ ಅವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಲಾಯಿತು. ಪ್ರಸಾದ್ ಮಾಸ್ತರ್ ಮುಗು, ಬಾಲಕೃಷ್ಣ ರೈ ಮುಗು, ಜನಾರ್ದನ ಕಣ್ಣೂರು, ಸುನಿಲ್ ಅನಂತಪುರ, ಸ್ವಾಗತ್ ಸೀತಾಂಗೋಳಿ, ಭುಜಂಗ ಬೇರ್ಯ, ಅವಿನಾಶ್ ಕಾರಂತ ಅನಂತಪುರ, ಗಣೇಶ್ ಪೆರ್ಲ, ಸುದರ್ಶನ್ ಅನಂತಪುರ ಉಪಸ್ಥಿತರಿದ್ದರು.
ಬಳಿಕ ಪೆರ್ಮುದೆ, ಅಂಗಡಿಮೊಗರು, ಪುತ್ತಿಗೆ ಸೀತಾಂಗೋಳಿ ಮೂಲಕ ಸಂಚರಿಸಿದ ರಾರ ಯಲಿಯು ಕಾರ್ಯಕ್ರಮ ನಡೆಯಲಿರುವ ಸೂರಂಬೈಲ್ ನ ಮೈದಾನದಲ್ಲಿ ಸಮಾಪ್ತಿಯಾಯಿತು.
ಬಳಿಕ ಹಿಂದು ಏಕತಾ ಸಮಿತಿಯ ರಕ್ಷಾಧಿಕಾರಿಗಳಲ್ಲಿ ಒಬ್ಬರಾದ ನಿವೃತ್ತ ಅಧ್ಯಾಪಕ, ಹಿರಿಯ ಸ್ವಯಂಸೇವಕ ಬಾಬು ಮಾಸ್ತರ್ ಸಿದ್ಧಿ ಬೈಲು ಧ್ವಜಾರೋಹಣ ನೆರವೇರಿಸಿದರು. ರಕ್ಷಾಧಿಕಾರಿಗಳಲ್ಲಿಒಬ್ಬರಾದ ಅಶೋಕ ಮಾಸ್ತರ್ ಬಾಡೂರು ಮಾತನಾಡಿದರು. ಮಾ.8ರಂದು ನಡೆಯುವ ವಿರಾಟ್ ಹಿಂದೂ ಸಂಗಮ ಕಾರ ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಒಮ್ಮತದಿಂದ ಕಾರ ್ಯಪ್ರವೃತರಾಗಬೇಕು. ಪ್ರತಿ ಮನೆ ಮನೆಗೂ ಕಾರ ್ಯಕ್ರಮದ ಸಂದೇಶ ಮುಟ್ಟಬೇಕು. ಪ್ರತೀ ಮನೆಯಿಂದಲೂ ಜನರು ಬರುವಂತಾಗಬೇಕು ಎಂದವರು ಹೇಳಿದರು.
ಇತರ ರಕ್ಷಾಧಿಕಾರಿಗಳಾದ ಶ್ರೀಪತಿ ಭಟ್ ಮುಂಗಿಲ, ಬಾಲಸುಬ್ರಹ್ಮಣ್ಯ ಭಟ್ , ನೇತಾರರಾದ ಮುರಳೀಕೃಷ್ಣ ಹಳೆಮನೆ, ಪ್ರಸಾದ್ ಮಾಸ್ತರ್ , ಅವಿನಾಶ್ ಅನಂತಪುರ, ಸುನಿಲ್ ಅನಂತಪುರ, ಜನಾರ್ದನ ಕಣ್ಣೂರು, ಕೇಶವ ಮುಗು, ಗಂಗಾಧರ ಮುಗು, ಭುಜಂಗ ಬೇರ್ಯ, ಸುದರ್ಶನ್ ಅನಂತಪುರ, ಪುರುಷೊತ್ತಮ ದೇರಡ್ಕ ನೇತೃತ್ವ ವಹಿಸಿದ್ದರು.
ಚಿತ್ರ: 02 ಬಿಎ ಪುತ್ತಿಗೆ

