ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ನೂತನ ಗೋಶಾಲೆಗೆ ಗೋವುಗಳ ಪ್ರವೇಶ

Contributed byprasadsarali@gmail.com|Vijaya Karnataka

ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗೋವಿಂದ ಪುಣ್ಯಕೋಟಿ ಗೋಶಾಲೆಗೆ ಗೋವುಗಳ ಪ್ರವೇಶ ನಡೆಯಿತು. ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ, ಅರ್ಚಕರ ನೇತೃತ್ವದಲ್ಲಿ ಗೋಶಾಲೆಗೆ ಬರಮಾಡಿಕೊಳ್ಳಲಾಯಿತು. ಗೋ ಪೂಜೆ ಮತ್ತು ಗೋಗ್ರಾಸ ನೀಡಲಾಯಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನೆಕ್ರಾಜೆ ಗೋವುಗಳನ್ನು ಉದಾರವಾಗಿ ನೀಡಿದ್ದರು. ಊರಿನ ಹಾಗೂ ಪರವೂರ ಭಗವದ್ಭಕ್ತರ ಸಹಕಾರದಿಂದ ಗೋಶಾಲೆ ನಿರ್ಮಿಸಲಾಗಿದೆ.

new cows enter the new gaushala of nekraje sri santana gopalakrishna temple

ಬದಿಯಡ್ಕ : ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ವಸುದೈವ ಕುಟುಂಬಕಂ ಗೋ ಪ್ರಿಯರು ಗೋವಿಂದ ಪುಣ್ಯಕೋಟಿ ಗೋ ಶಾಲೆ ಪ್ರವೇಶೋತ್ಸವ ಬುಧವಾರ ಬೆಳಗ್ಗೆ ಜರುಧಿಗಿತು.

ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿಗೋವುಗಳಿಗೆ ಪೂಧಿಜೆಯನ್ನು ಸಲ್ಲಿಸಿ ಅರ್ಚಕರ ನೇತೃತ್ವದಲ್ಲಿಪ್ರದಕ್ಷಿಣೆಯೊಂದಿಗೆ ಗೋವುಗಳನ್ನು ಗೋ ಶಾಲೆಗೆ ಶ್ರದ್ಧಾ ಭಕ್ತಿಯಿಂದ ಬರಮಾಡಿಕೊಳ್ಳಲಾಯಿತು. ಗೋ ಪೂಜೆಯನ್ನು ಸಲ್ಲಿಸಿ ಗೋಗ್ರಾಸ ನೀಡಲಾಯಿತು. ಪ್ರಮುಖರಾದ ಗೋಪಾಲಧಿಕೃಷ್ಣ ಪೈ ಬದಿಯಡ್ಕ, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಆಡಳಿತ ಮೊಕ್ತೇಸರ ಪ್ರತಾಪ್ ರೈ ನೆಕ್ರಾಜೆ, ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನೆಕ್ರಾಜೆ, ಪ್ರಧಾನ ಕಾರ್ಯದರ್ಶಿ ಗಣೇಶ ವತ್ಸ ನೆಕ್ರಾಜೆ, ಕೋಶಾಧಿಕಾರಿ ಬಾಲಕೃಷ್ಣ ನಾಯ್ ್ಕ ಕೊಡಾಕೊಳ್ಳು, ಉಪಾಧ್ಯಕ್ಷ ನಿತ್ಯಾನಂದ ನೆಲ್ಲಿತ್ತಲ, ಗೋಶಾಲೆ ಸಮಿತಿಯ ಗೌರವಾಧ್ಯಕ್ಷ ರಾಮಚಂದ್ರ ಬಲ್ಲಾಳ್ ನೆಕ್ರಾಜೆ, ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ ನೆಕ್ರಾಜೆ, ಕೋಶಾಧಿಕಾರಿ ರಮೇಶ್ ಮಾವಿನಕಟ್ಟೆ ಪಾಲ್ಗೊಂಡಿದ್ದರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರದ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನೆಕ್ರಾಜೆ ಗೋವುಗಳನ್ನು ಉದಾರವಾಗಿ ನೀಡಿದ್ದರು. ಊರಿನ ಹಾಗೂ ಪರವೂರ ಭಗವದ್ಭಕ್ತರ ಹಾಗೂ ಗೋ ಪ್ರೇಮಿಗಳ ಸಹಕಾರದೊಂದಿಗೆ ಗೋ ಶಾಲೆ ನಿರ್ಮಿಸಲಾಯಿತು.

ಚಿತ್ರ: 04 ಬಿಎ ನೆಕ್ರಾಜೆ