ವಿಕ ಸುದ್ದಿಲೋಕ ಮುಳಬಾಗಲು
ಯಾವ ಸಮುದಾಯದಲ್ಲಿಒಗ್ಗಟ್ಟು ಮತ್ತು ವಿದ್ಯಾಭ್ಯಾಸ ಇರುತ್ತದೊ ಅಂತಹ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ ಹೇಳಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿಹಮ್ಮಿಕೊಂಡಿದ್ದ ಸಮಿತಾ ಮಹರ್ಷಿಗಳ ಜಯಂತಿ ಕಾರ್ಯಕ್ರಮದಲ್ಲಿಮಾತನಾಡಿದರು. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿಆರ್ಥಿಕ, ರಾಜಕೀಯವಾಗಿ ಹಲವಾರು ರೀತಿಯ ಸೌಲಭ್ಯಗಳು ಹಾಗೂ ಅನುದಾನಗಳನ್ನು ಪಡೆದುಕೊಳ್ಳಲು ಮೊದಲಿಗೆ ಒಗ್ಗಟ್ಟು ಪ್ರದರ್ಶನ ತುಂಬಾ ಮುಖ್ಯ. ಈ ನಿಟ್ಟಿನಲ್ಲಿಸವಿತಾ ಸಮುದಾಯದ ಜನಾಂಗದವರು ತಮ್ಮ ಒಗ್ಗಟ್ಟು ತೋರಿಸಿದ್ದಾರೆ ಎಂದರು.
ಸವಿತಾ ಸಮುದಾಯ ಜನಾಂಗದವರಿಗೆ ಸಮುದಾಯ ಭವನ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿಶೀಘ್ರವಾಗಿ ಸಮುದಾಯ ಭವನಕ್ಕೆ ಸ್ಥಳವನ್ನು ಗುರುತಿಸಲಾಗುತ್ತದೆ. ಇದಕ್ಕೆ ಅನುದಾನವನ್ನು ಬಿಡುಗಡೆ ಮಾಡಿಸಿ ಸುಸಜ್ಜಿತವಾದ ಭವನದ ಕಟ್ಟಡವನ್ನು ನಿರ್ಮಿಸಲು ಶ್ರಮಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸವಿತಾ ಸಮುದಾಯ ಅಭಿವೃದ್ಧಿ ನಿಗಮ ಮಂಡಳಿಯಲ್ಲಿಈಗಾಗಲೇ 14 ಕೋಟಿ ಹಣ ಇದೆ, ಮುಳಬಾಗಿಲಿನಲ್ಲಿನಿರ್ಮಾಣ ಮಾಡುವ ಸಮುದಾಯದ ಭವನಕ್ಕೆ ನಿಗಮದಿಂದ ಹಾಗೂ ಶಾಸಕರ ನಿಧಿಯಿಂದ ಅನುದಾನವನ್ನು ಬಿಡುಗಡೆ ಮಾಡಿಸಿ ಮುಂದಿನ ದಿನಗಳಲ್ಲಿಉತ್ತಮ ರೀತಿಯಲ್ಲಿಸಮುದಾಯ ಜನಾಂಗದವರಿಗೆ ಭವನ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಮುಂಜಾನೆ ಮಂಗಳ ವಾದ್ಯಗಳ ಮೂಲಕ ದೇವರನ್ನು ಎಬ್ಬಿಸುವ ಕೆಲಸ ಸವಿತಾ ಸಮುದಾಯ ಮಾಡುವ ಕೀರ್ತಿ ಇದೆ. ಆದ್ದರಿಂದ ಈ ಸಮುದಾಯಕ್ಕೆ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರ ಕೊಡುಗೆ ಇದೆ. ಈ ಜಯಂತಿಯನ್ನು ಆಚರಣೆ ಮಾಡಲು ಕುಮಾರಸ್ವಾಮಿ ಅವರೇ ಮುಖ್ಯ ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
2024-25ನೇ ಸಾಲಿನಲ್ಲಿಎಸ್ಸೆಸಸೆಲ್ಸಿ ಪರೀಕ್ಷೆಯಲ್ಲಿಉತ್ತೀರ್ಣರಾದ ಸಮುದಾಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವಿ.ನಟರಾಜ್ ಅವರಿಗೆ ಸನ್ಮಾನ ಮಾಡಿ ಅಭಿನಂಧಿಸಲಾಯಿತು. ಡೋಲು ವಾದ್ಯ ಮತ್ತು ನಾದಸ್ವರ, ಮಹಿಳೆಯರಿಂದ ಕೋಲಾಟ ಸೇರಿದಂತೆ ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀ ಸವಿತಾ ಮಹರ್ಷಿ ಜಯಂತಿ ಆಚರಣಾ ಸಮಿತಿ, ಸವಿತಾ ಕಲಾವಿದರ ಸಂಘ, ಸವಿತಾ ಸಮಾಜ ವಿನಾಯಕ ಯುವಕರ ಬಳಗ, ಸವಿತಾ ಮಹಿಳಾ ಸಂಘದ ಕಾರ್ಯಕರ್ತರು ಕಾರ್ಯಕ್ರಮದಲ್ಲಿಹಲವಾರು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದರು.
ಸವಿತಾ ಸಮಾಜ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಮುತ್ತುರಾಜು, ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ವಿ.ರಾಮಚಂದ್ರಪ್ಪ, ವಿ.ನಟರಾಜ್ , ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್ .ಮುರಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ ಸಮಾಜ ಸೇವಕ ನಗವಾರ ಸತ್ಯಣ್ಣ ಮತ್ತಿತರರು ಇದ್ದರು.
4 ಎಂ.ಬಿ.ಎಲ್ ಪೋಟೋ 2 ಮುಳಬಾಗಲು ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿಹಮ್ಮಿಕೊಂಡ ಸಮಿತಾ ಮಹರ್ಷಿಗಳ ಜಯಂತಿ ಕಾರ್ಯಕ್ರಮದಲ್ಲಿಶಾಸಕ ಸಮೃದ್ಧಿ ವಿ.ಮಂಜುನಾಥ್ ಮಾತನಾಡುತ್ತಿರುವುದು.

