ಬಂಡಿಯಲ್ಲಿ ಅರವಟಿಗೆಗೆ ಚಾಲನೆ
ವಿಕ ಸುದ್ದಿಲೋಕ ಯಲಬುರ್ಗಾ
ತಾಲೂಕಿನ ಬಂಡಿ ಗ್ರಾಮದ ನೆವರ್ ಎಂಡಿಂಗ್ ಗೆಳೆಯರ ಬಳಗದಿಂದ ಅರಟವಟಿಗೆ ಪ್ರಾರಂಭಿಸಲಾಯಿತು.
ಕರವೇ ಮುಖಂಡ ಮಾಹಂತೇಶ ಶೆಟ್ಟರ ಮಾತನಾಡಿ, ‘‘ಬೇಸಿಗೆ ವೇಳೆಯಲ್ಲಿ ನೀರಿನ ದಾಹ ಹೆಚ್ಚಾಗುತ್ತದೆ. ಅರವಟಿಗೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೆವರ್ ಎಂಡಿಂಗ್ ಗೆಳೆಯರ ಬಳಗ ಉತ್ತಮ ಕೆಲಸ ಮಾಡಿದೆ,’’ ಎಂದು ಹೇಳಿದರು.
ನೆವರ್ ಎಂಡಿಂಗ್ ಗೆಳೆಯರ ಬಳಗದ ಸದಸ್ಯರಾದ ರಮೇಶಗೌಡ ನಿಂಬನಗೌಡ್ರ, ಪ್ರವೀಣ ಬೇವಿನಕಟ್ಟಿ , ಕಲ್ಲಪ್ಪ ಕಳ್ಳಿ, ರವಿ, ಹೊರಪೇಟಿ, ಚನ್ನಬಸನಗೌಡ ನಿಂಬನಗೌಡ್ರ ಕಾಡಪ್ಪ ಕಾಡಪ್ಪನವರ , ಸಂತೋಷ ನೇಲಾಗಣಿ, ಮಲ್ಲಿಕಾರ್ಜುನ ಭದ್ರಗೌಡ್ರ ಇದ್ದರು.
4ವೈಎಲ್ ಬಿಪೋಟೋ02 ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ನೆವರ್ ಎಂಡಿಂಗ್ ಗೆಳೆಯರ ಬಳಗದಿಂದ ಅರವಟಿಗೆ ಪ್ರಾರಂಭಿಸಲಾಯಿತು.

