** (ಧಿಸ್ಟೋಧಿರಿ) ಪರ್ಯಾಯ ಮಧಿಹೋಧಿತ್ಸಧಿವಕ್ಕೆ ಪೊಲೀಸ್ ಕಣ್ಗಾವಲು

Contributed byajitha.m@timesofindia.com|Vijaya Karnataka

ಉಡುಪಿಯಲ್ಲಿ ಶ್ರೀಕೃಷ್ಣ ಪೂಜಾ ಕೈಂಕರ್ಯಕ್ಕಾಗಿ ಶ್ರೀಸರ್ವಜ್ಞ ಪೀಠಾರೋಹಣ ನಡೆಯಲಿದೆ. ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವಕ್ಕೆ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಸುರಕ್ಷತೆಗಾಗಿ 1200ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶೋಭಾಯಾತ್ರೆ ನಡೆಯಲಿದೆ. ಬಿಗು ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

security measures for the peaceful alternate madhihodithsadhiv in udupi

ಅಜಿತ್ ಆರಾಡಿ ಉಡುಪಿ

a್ಜಜಿಠಿha.ಞಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಶ್ರೀಕೃಷ್ಣ ಪೂಜಾ ಕೈಂಕರ್ಯಕ್ಕಾಗಿ ಶ್ರೀಸರ್ವಜ್ಞ ಪೀಠಾರೋಹಣ ಮಾಡಿ ಶ್ರೀಮಧ್ವಾಚಾರ್ಯರ ಸತ್ಸಂಪ್ರದಾಯಂತೆ ದ್ವೈವಾರ್ಷಿಕ ಪರ್ಯಾಯವನ್ನು ಆರಂಭಿಸಿರುವ ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವಕ್ಕೆ ಇಡೀ ಉಡುಪಿಯೇ ಸಜ್ಜಾಗಿದೆ. ಲಕ್ಷಕ್ಕೂ ಅಧಿಧಿಕ ಸಂಖ್ಯೆಯಲ್ಲಿಭಾಗವಹಿಸುವ ಭಕ್ತಾಧಿಗಳು, ಪ್ರವಾಸಿಗರು, ಗಣ್ಯಾತಿ ಗಣ್ಯರ ಸುರಕ್ಷತೆಗಾಗಿ ಖಾಕಿ ಕಾವಲಿದ್ದು, 1200 ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದೆ.

ಉಡುಪಿ ಶ್ರೀಕೃಷ್ಣಮಠದಲ್ಲಿಜ.17 ಮತ್ತು 18 ರಂದು ನಡೆಯುವ ಪರ್ಯಾಯ ಮಹೋತ್ಸವದ ಅಂಗವಾಗಿ ಕಾನೂನು ಸುವ್ಯವಸ್ಥೆ, ಅಹಿತಕರ ಘಟನೆ ತಡೆಯುವ ನಿಟ್ಟಿನಲ್ಲಿಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದು, ಬಿಗು ಪೊಲೀಸ್ ಬಂದೋಬಸ್ ್ತ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ 1100 ಕ್ಕೂ ಪೊಲೀಸರನ್ನು ನಿಯೋಜಿಸಲಾಗಿದೆ.

ಜ.17ರ ಸಂಜೆಯಿಂದಲೇ ಉಡುಪಿಯಲ್ಲಿನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಜೋಡುಕಟ್ಟೆಯಿಂದ ಅದ್ಧೂರಿಯ ಶೋಭಾಯಾತ್ರೆ ನಡೆಯಲಿದೆ. ಪರ್ಯಾಯ ಮೆರವಣಿಗೆ ವೀಕ್ಷಿಸುವುದಕ್ಕೆ ದೇಶ, ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿಭಕ್ತರು ಆಗಮಿಸುತ್ತಾರೆ. ಕಾಧಿರ್ಯಧಿಕ್ರಧಿಮಧಿಗಳು ಸುಧಿಸೂಧಿತ್ರಧಿವಾಗಿ ನಧಿಡೆಧಿಯುಧಿವಂತಾಧಿಗಧಿಲು ಪೊಲೀಸ್ ಪಡೆ ಸಧಿಕಲ ಸಿಧಿದ್ಧಧಿತೆಧಿಯನ್ನು ಮಾಧಿಡಿಧಿಕೊಂಡಿದೆ.

ಎಸ್ಪಿ, ಎಎಸ್ಪಿ ಸಹಿತ 1200 ಕ್ಕೂ ಅಧಿಕ ಸಿಬ್ಬಂದಿ: ಉಡುಪಿ ಜಿಲ್ಲೆಯ ಪೊಲೀಸರ ಜತೆಗೆ ಹೊರ ಜಿಲ್ಲೆಯಿಂದಲೂ ಪೊಲೀಸರನ್ನು ಭದ್ರತೆ ದೃಷ್ಟಿಯಿಂದ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗುತ್ತಿದೆ. ಜಿಲ್ಲಾಸಶಸ್ತ್ರ ಮೀಸಲು ಪಡೆಯ ಜತೆಗೆ ಕೆಎಸ್ ಆರ್ ಪಿ ತುಕಡಿಗಳನ್ನು ಸಜ್ಜುಗೊಳಿಸಲಾಗಿದೆ. ಉಡುಪಿ ಜಿಲ್ಲಾಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ನೇತೃತ್ವದಲ್ಲಿ1 ಹೆಚ್ಚುವರಿ ಎಸ್ ಪಿ, 8-ಡಿವೈಎಸ್ ಪಿ, 21-ಪೊಲೀಸ್ ನಿರೀಕ್ಷಕರು, 61-ಪೊಲೀಸ್ ಉಪನಿರೀಕ್ಷಕರು, 110-ಸಹಾಯಕ ಪೊಲೀಸ್ ಉಪನಿರೀಕ್ಷಕರು ಹಾಗೂ 812 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸಿವಿಲ್ ಪೊಲೀಸ್ ಬಲದ ಜತೆಗೆ 200 ಗೃಹರಕ್ಷಕ ಸಿಬ್ಬಂದಿ ಬಂದೊಬಸ್ ್ತ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ. 4-ಕೆಎಸ್ ಆರ್ ಪಿ, 14-ಡಿಎಆರ್ , 5-ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಆಯಾಕಟ್ಟಿನ ಸ್ಥಳದಲ್ಲಿಸಿಸಿ ಕ್ಯಾಮೆರಾ ಕಣ್ಗಾವಲು: ಪರ್ಯಾಯ ಶೋಭಾಯಾತ್ರೆ, ದರ್ಬಾರ್ , ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಉಡುಪಿಯ ಸಾಂಸ್ಕೃತಿಕ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿಜನ ಸೇರುತ್ತಾರೆ. ಹೀಗಾಗಿ ಶ್ರೀಕೃಷ್ಣ ಮಠದ ಸುತ್ತಮುತ್ತಲಿನ ಪ್ರದೇಶದಲ್ಲಿಕಣ್ಗಾವಲಿಗೆ 70 ಸ್ಥಳಗಳಲ್ಲಿಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಶ್ರೀಕೃಷ್ಣಮಠದ ವಠಾರ ಬಳಿ ಪೊಲೀಸ್ ಹೊರಠಾಣೆಗಳನ್ನು ತೆರೆಯಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಡ್ರೋನ್ ಕ್ಯಾಮೆರಾ: ಒಂದು ಕ್ಯೂಆರ್ ಟಿ ತಂಡ, 6 ಆಂಬ್ಯುಲೆನ್ಸ್ , 6 ಅಗ್ನಿಶಾಮಕ, 5 ಅಗ್ನಿ ಬುಲೆಟ್ , 24 ಪಬ್ಲಿಕ್ ಅಡ್ರೆಸ್ ಸಿಸ್ಟಂ, 6 ಪೊಲೀಸ್ ಸಹಾಯವಾಣಿ, 12 ಬೈನಾಕುಲರ್ , 3 ಡ್ರೋನ್ ಕ್ಯಾಮೆರಾ, 300 ಬ್ಯಾರಿಕೇಡ್ ಗಳನ್ನು ಬಳಸಿಕೊಳ್ಳಲಾಗಿದೆ.

ಏನೆಲ್ಲಇರುತ್ತದೆ ?

ಜ.17, ಸಂಜೆ 7 ಗಂಟೆಯಿಂದ ಉಡುಪಿ ನಗರದ ನಾಧಿನಾ ಸ್ಥಳಗಳಲ್ಲಿಸಾರ್ವಜನಿಕ ಸಾಂಸ್ಕೃತಿಕ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಜ.18, ಬೆಳಗ್ಗಿನ ಜಾವ 3 ಗಂಟೆಯ ಹೊತ್ತಿಗೆ ಶ್ರೀ ಶಿರೂರು ಮಠಾಧೀಶ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಉತ್ಸವದ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.

ಶ್ರೀಪಾದರು ಕನಕನ ಕಿಂಡಿ, ಅನಂತೇಶ್ವರ, ಚಂದ್ರಮೌಳೇಶ್ವರ ಮತ್ತು ಮುಖ್ಯಪ್ರಾಣ ದೇವರ ದರ್ಶನ ಪಡೆದು ಶ್ರೀಕೃಷ್ಣಮಠದೊಳಗೆ ತೆರಳಲಿದ್ದಾರೆ. ಶ್ರೀಕೃಷ್ಣಮಠದಲ್ಲಿಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದವರಿಗೆ ಅಧಿಕಾರವನ್ನು ಹಸ್ತಾಂತರಿಸಲಿದ್ದಾರೆ. ಬೆಳಗ್ಗೆ 5.55ಕ್ಕೆ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಬೆಳಗ್ಗೆ 6.45ಕ್ಕೆ ಪರ್ಯಾಯ ದರ್ಬಾರ್ ರಾಜಾಂಗಣದಲ್ಲಿಆರಂಭವಾಗಲಿದೆ.

ಕೋಟ್

ಉಡುಪಿ ಶ್ರೀಕೃಷ್ಣ ಮಠದಲ್ಲಿಜ.17 ಮತ್ತು 18 ರಂದು ನಡೆಯುವ ಶಿರೂರು ಶ್ರೀಗಳ ಪರ್ಯಾಯ ಮಹೋತ್ಸವದಲ್ಲಿಲಕ್ಷಕ್ಕೂ ಅಧಿಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಎಲ್ಲಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಯುವುದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

-ಹರಿರಾಂ ಶಂಕರ್ , ಜಿಲ್ಲಾಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ.