ಪ್ರಮುಖ - ಶ್ರೀ ಸಿದ್ದರಾಮನಂದ ಮಹಾಸ್ವಾಮೀಜಿ ಶಿವೈಕ್ಯ

Contributed bynandagudinagaraja77@gmail.com|Vijaya Karnataka

ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮನಂದ ಮಹಾಸ್ವಾಮೀಜಿ ಅವರು ನಿಧನರಾಗಿದ್ದಾರೆ. ಅವರು ಹಾಲುಮತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಭಕ್ತರ ಮನ ಗೆದ್ದಿದ್ದರು. ನಂದಗುಡಿಯಲ್ಲಿ ಶಾಖಾ ಮಠ ಸ್ಥಾಪಿಸಿ, ಬೀರೆ ದೇವರ ದೇವಾಲಯ ನಿರ್ಮಿಸಿದ್ದರು. ಶೋಷಿತ ವರ್ಗದವರ ಏಳಿಗೆಗೆ ಶ್ರಮಿಸಿದ್ದರು. ಅವರ ಅಗಲಿಕೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಹಲವು ಸಂಘಟನೆಗಳು ಸಂತಾಪ ಸೂಚಿಸಿವೆ.

shri siddharamananda swamijis demise grief in the halumatha community

ವಿಕ ಸುದ್ದಿಲೋಕ ನಂದಗುಡಿ

ಸದಾ ಭಕ್ತರ ಕಾಳಜಿ ವಹಿಸುತ್ತ, ಶೋಷಿತ ವರ್ಗದ ದಿವ್ಯಶಕ್ತಿಯಾಗಿದ್ದ ಕಾಗಿನೆಲೆ ಕನಕ ಗುರುಪೀಠ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಸಿದ್ದರಾಮನಂದ ಮಹಾಸ್ವಾಮೀಜಿ ಶುಕ್ರವಾರ ಬೆಳಗಿನ ಜಾವ ಹೃದಯಾಘಾತದಿಂದ ಶಿವೈಕ್ಯರಾದರು.

3 ದಿನಗಳ ಕಾಲ ಕಲ್ಬುರ್ಗಿಯಲ್ಲಿಹಾಲುಮತ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿಕುರುಬ ಸಮುದಾಯದ ವಿಭಿನ್ನ ಸಂಪ್ರದಾಯಗಳನ್ನು ಮತ್ತು ಅನೇಕ ಸಾಧಕರನ್ನು ನಾಡಿಗೆ ಪರಿಚಯಿಸಿ, ಆಶೀರ್ವಾದ ನೀಡುವುದರೊಂದಿಗೆ ವಿಶಿಷ್ಟ ಕಾರ್ಯಕ್ರಮ ಯಶಸ್ವಿಗೊಳಿಸಿ ಸಾರ್ಥಕತೆಯ ನುಡಿಗಳನ್ನಾಡಿ ಲಕ್ಷಾಂತರ ಭಕ್ತರ ಹೃದಯ ಗೆದ್ದಿದ್ದರು.

ಶ್ರೀಗಳು ನಂದಗುಡಿಯಲ್ಲಿಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠ ಸ್ಥಾಪಿಸಿದ್ದಲ್ಲದೆ, ಪ್ರತಿ ವರ್ಷ ವಿಜಯದಶಮಿಯಂದು ಪಟ್ಟದ ಬೀರೆದೇವರ ಮೆರವಣಿಗೆ, ಒಕ್ಕಲಿನವರ ತಲೆ ಮೇಲೆ ತೆಂಗಿನಕಾಯಿ ಒಡೆಯುವ ಪವಾಡ ಕಾರ್ಯಕ್ರಮ, ಪ್ರತಿ ವರ್ಷ ಕಡೆ ಕಾರ್ತಿಕ ಸೋಮವಾರ ಕಾರ್ತಿಕ ದೀಪೋತ್ಸವ ಹಾಗೂ ಪ್ರತಿ 5 ವರ್ಷಗಳಿಗೊಮ್ಮೆ ಬೀರೆ ದೇವರ ಜಾತ್ರಾ ಮಹೋತ್ಸವವನ್ನು ಸೂಸುತ್ರವಾಗಿ ನಡೆಸುವ ಜತೆಗೆ ನಂದಗುಡಿಯಲ್ಲಿಸುಮಾರು 4.5 ಕೋಟಿ ರೂ. ವೆಚ್ಚದ ನೂತನ ಶ್ರೀ ಬೀರೆ ದೇವರ ದೇವಾಲಯ ನಿರ್ಮಿಸಿ ಲೋಕಾರ್ಪಣೆಗೊಳಿಸಿದ್ದರು.

ಬೆಂಗಳೂರು ಭಾಗದಲ್ಲಿಹಾಲುಮತ ಸಮುದಾಯ ಒಗ್ಗೂಡಿಸಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ, ಶೋಷಿತರ ಪಾಲಿಗೆ ಬೆಳಕಾಗಿ ಶ್ರಮಿಸಿದ್ದರು. ನಾಡಿನ ಲಕ್ಷಾಂತರ ಹಾಲುಮತ ಸಮುದಾಯದ ದಿವ್ಯ ಚೇತನ ಕಣ್ಮರೆಯಾಗಿರುವುದು ಈ ಭಾಗದ ಭಕ್ತರಲ್ಲಿಆತಂಕದ ಛಾಯೆ ಆವರಿಸಿದೆ.

ಶ್ರೀಗಳ ದಿವ್ಯ ಚೇತನಕ್ಕೆ ಹೊಸಕೋಟೆ ತಾಲೂಕು ಕುರುಬರ ಸಂಘ, ನಂದಗುಡಿ ಬೀರೇಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಹಾಗೂ ಬೀರೆ ದೇವರ ಒಕ್ಕಲಿನ ಎಲ್ಲಪದಾಧಿಕಾರಿಗಳು ಭಕ್ತಿಪೂರ್ವಕ ಸಂತಾಪ ಸೂಚಿಸಿದ್ದಾರೆ.

15 ನಂದಗುಡಿ 5.

ಕಾಗಿನೆಲೆ ಕನಕ ಗುರುಪೀಠ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಸಿದ್ದರಾಮನಂದ ಮಹಾಸ್ವಾಮೀಜಿ.