ಸೋದರತ್ವದಿಂದ ಜೀವನ ನಡೆಸಿ

Contributed byprk.k73@gmail.com|Vijaya Karnataka

ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಆದಿನಾರಾಯಣ ಅವರು ಮುಳಬಾಗಿಲು ತಾಲೂಕಿನ ಅಗರ ಗ್ರಾಮದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಾಲಯ ಮತ್ತು ದರ್ಗಾಗಳು ಪವಿತ್ರವಾಗಿದ್ದು, ಹಿಂದೂ ಮುಸ್ಲಿಮರು ಸೋದರತ್ವದಿಂದ ಬಾಳಬೇಕು ಎಂದು ಅವರು ಹೇಳಿದರು. ಒಡಕು ಮೂಡಿಸುವ ಪ್ರಯತ್ನ ಸರಿಯಲ್ಲ. ಸಂಕ್ರಾಂತಿ ನಂತರ 20 ಸಾವಿರ ಹೆಲ್ಮೆಟ್ ವಿತರಣೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಹಲವು ಮುಖಂಡರು ಭಾಗವಹಿಸಿದ್ದರು.

unity and peaceful coexistence celebrated during festival

ಸೋದರತ್ವದಿಂದ ಜೀವನ ನಡೆಸಿ

ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಆದಿನಾರಾಯಣ ಸಲಹೆ

ವಿಕ ಸುದ್ದಿಲೋಕ ಮುಳಬಾಗಲು

ದೇವಾಲಯ ಹಾಗೂ ದರ್ಗಾಗಳು ಅತ್ಯಂತ ಪವಿತ್ರವಾಗಿದ್ದು, ಹಿಂದೂ ಮುಸ್ಲಿಮರು ಸೋದರತ್ವದಿಂದ ಜೀವನ ಮಾಡಬೇಕು ಎಂದು ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ತಿಳಿಸಿದರು.

ತಾಲೂಕಿನ ಅಗರ ಗ್ರಾಮದಲ್ಲಿಏರ್ಪಡಿಸಿದ್ದ ಉರುಸ್ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಕೆಲವರು ಹಿಂದೂ ಮುಸ್ಲಿಮರನ್ನು ಬೇರ್ಪಡಿಸಲು ಪ್ರಯತ್ನ ಮಾಡುವುದು ಸರಿಯಲ್ಲ. ಓಟಿಗಾಗಿ ಮುಸ್ಲಿಮರು ಹಾಗೂ ಹಿಂದೂಗಳನ್ನು ನೋಡದೇ ಎಲ್ಲರನ್ನು ಸಮಾನತೆಯಿಂದ ನೋಡಬೇಕಾಗಿದೆ ಎಂದರು.

ಉರುಸ್ ಕಾರ್ಯಕ್ರಮ ಅತ್ಯಂತ ವæೖಶಿಷ್ಟ್ಯದಿಂದ ನಡೆಯುತ್ತಿದ್ದು ಇಲ್ಲಿಹಿಂದೂ ಹಾಗೂ ಮುಸ್ಲಿಮರು ವೇದಿಕೆ ಹಂಚಿಕೊಂಡು ಭಾವೈಕ್ಯತೆಯನ್ನು ಪ್ರದರ್ಶನ ಮಾಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಸಂಕ್ರಾಂತಿ ಹಬ್ಬ ಮುಗಿದ ನಂತರ ದಿನಾಂಕ ಗೊತ್ತುಪಡಿಸಿ ಜೀವ ಸಂಜೀವಿನಿ ಕಾರ್ಯಕ್ರಮದಲ್ಲಿ20 ಸಾವಿರ ಹೆಲ್ಮೆಟ್ ಗಳನ್ನು ವಿತರಣೆ ಮಾಡಲಾಗುವುದು. ಅರ್ಹರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ರಾಜ್ಯ ಜೈವಿಕ ಇಂಧನ ಮಂಡಳಿಯ ಮಾಜಿ ಉಪಾಧ್ಯಕ್ಷ ಜಿ. ರಾಮಲಿಂಗಾರೆಡ್ಡಿ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಆರ್ .ಆರ್ . ರಾಜೇಂದ್ರಗೌಡ, ಕೆಡಿಪಿ ಸದಸ್ಯ ಕಾರ್ಗಿಲ್ ವೆಂಕಟೇಶ್ , ದರಕಾಸ್ತು ಸಮಿತಿ ಸದಸ್ಯರಾದ ಜಮ್ಮನಹಳ್ಳಿ ಕೃಷ್ಣ, ಗುಜ್ಜನಹಳ್ಳಿ ಮಂಜುನಾಥ್ , ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಕೊಲದೇವಿ ಉಮಾಶಂಕರ್ , ಮುಖಂಡರಾದ ಎಂ.ಸಿ.ಸರ್ವಜ್ಞಗೌಡ, ಜಬೀವುಲ್ಲ, ಸಂಗೊಳ್ಳಿ ವೆಂಕಟೇಶ್ , ಕೃಷ್ಣಮೂರ್ತಿ, ಚೋಟಾಸಾಬಿ ಸೇರಿದಂತೆ ಉರುಸ್ ಕಮಿಟಿಯ ಪದಾಧಿಕಾರಿಗಳು ಇದ್ದರು.

14 ಎಂ.ಬಿ.ಎಲ್ ಪೋಟೋ 4 ಮುಳಬಾಗಲು ತಾಲೂಕಿನ ಅಗರ ಗ್ರಾಮದಲ್ಲಿಏರ್ಪಡಿಸಿದ್ದ ಉರುಸ್ ಕಾರ್ಯಕ್ರಮದಲ್ಲಿಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆದಿನಾರಾಯಣ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು.