ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಕುಷ್ಟಗಿ: ರೈತರ ಜಮೀನುಗಳಲ್ಲಿರುವ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಆಗ್ರಹಿಸಿ ಪಟ್ಟಣದ ಜೆಸ್ಕಾಂ ಕಚೇರಿ ಆವರಣದಲ್ಲಿಗೋತಗಿ ಗ್ರಾಮಸ್ಥರು ಪ್ರತಿಭಟಿಸಿದರು. ರೈತ ಸಂಘದ ಮುಖಂಡ ನಜೀಸಾಬ್ ಮೂಲಿಮನಿ ಮಾತನಾಡಿ, ‘‘ಸಮರ್ಪಕ ವಿದ್ಯುತ್ ಪೂರೈಕೆಯಾಗದ ಕಾರಣ ರೈತರು ನಿತ್ಯ ಪರದಾಡುತ್ತಿದ್ದಾರೆ. ಹೀಗಾಗಿ, ಜೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು,’’ ಎಂದು ಆಗ್ರಹಿಸಿದರು. ರೈತ ಮುಖಂಡ ಆರ್ .ಕೆ.ದೇಸಾಯಿ ಮಾತನಾಡಿದರು. ಗೋತಗಿ ಗ್ರಾಮದ ಮುಖಂಡರು ಹಾಗೂ ರೈತರು ಇದ್ದರು.

