ಧಿ- ಕುಂದಗೋಳದ ಬಸವಣ್ಣ ಸ್ವಾಮೀಜಿ ಅಭಿಮತ
ವಿಕ ಸುದ್ದಿಲೋಕ ಮುರಗೋಡ
ಗುರುವಿನ ಆಶೀರ್ವಾದವೊಂದಿದ್ದರೆ ಕಲ್ಮಶವಾದ ಮನಸ್ಸು ಪರಿಶುದ್ಧವಾಗುತ್ತದೆ ಹಾಗೂ ವಿಷವೂ ಕೂಡ ಅಮೃತವಾಗಬಲ್ಲದು ಎಂದು ಕುಂದಗೋಳದ ಶ್ರೀ ಅಭಿನವ ಬಸವಣ್ಣ ಸ್ವಾಮೀಜಿ ಹೇಳಿದರು.
ಸಮೀಪದ ಸೊಗಲ ರಸ್ತೆ ಪಕ್ಕದ ಪಂಚವಟಿ ಮಹಾಂತ ಶಿವಯೋಗೀಶ್ವರ ಕಲ್ಯಾಣ ಕೇಂದ್ರದಲ್ಲಿಮಕರ ಸಂಕ್ರಾಂತಿ ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಶ್ರೀ ಕ್ಷೇತ್ರ ಪಂಚವಟಿ ಸಂಭ್ರಮ, ವಾರ್ಷಿಕೋತ್ಸವ ಹಾಗೂ ಧಾರ್ಮಿಕ ವಿಶೇಷ ಕಾರ್ಯಕ್ರಮದ ಸಮಾರೋಪದಲ್ಲಿಅವರು ಗುರುವಾರ ಸಂಜೆ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುರಗೋಡ ಶ್ರೀ ಮಹಾಂತ ದುರದುಂಡೀಶ್ವರ ಮಠದ ಪೀಠಾಧಿಕಾರಿ ನೀಲಕಂಠ ಸ್ವಾಮೀಜಿ ಮಾತನಾಡಿ, ‘‘ಮನುಷ್ಯ ಮರಣವನ್ನು ಗೆಲ್ಲಬೇಕಾದರೆ ಅದು ಕೇವಲ ಗುರುವಿನ ಹಾಗೂ ಮಹಾ ತಪಶ್ವಿ ಮಹಾಂತ ಶಿವಯೋಗಿಗಳಂತಹ ಮಹಾತ್ಮರ ಆಶೀರ್ವಾದದಿಂದ ಮಾತ್ರ ಸಾಧ್ಯವಿದೆ,’’ ಎಂದರು.
ಮುರಗೋಡ ಶ್ರೀಮಠದ ಮುಖ್ಯ ಕಾರ್ಯದರ್ಶಿ ಸಂತೋಷ ಹಿರೇಮಠ, ಕರಾಪ್ರಾಶಾಶಿ ಸಂಘದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಿದ್ದನಗೌಡರ, ಕುಮಾರ ಪೂಜಾರ ಹಾಗೂ ಎಫ್ .ಎಸ್ . ಸಿದ್ದನಗೌಡರ ಮಾತನಾಡಿದರು. ಶಿವಮೂರ್ತಿ ಸ್ವಾಮೀಜಿ, ಗದಗಯ್ಯ ಸ್ವಾಮೀಜಿ, ಶಂಕರ ಸ್ವಾಮೀಜಿ ಹಾಗೂ ನಿಂಗಯ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಧರ್ಮದರ್ಶಿ ಅಶೋಕ ಶೆಟ್ಟರ, ವಿ.ಬಿ. ದೇಸಾಯಿ ಹಾಗೂ ಎಸ್ .ಟಿ. ಪಟ್ಟಣಶೆಟ್ಟಿ ನೇತೃತ್ವ ವಹಿಸಿದ್ದರು. ಅಕ್ಕ ಮಹಾದೇವಿ ಅಕ್ಕನ ಬಳಗದ ಅಧ್ಯಕ್ಷೆ ಜಯಶ್ರೀ ಮಲ್ಲಯ್ಯನವರಮಠ, ಹಾಲಯ್ಯ ಶಾಸ್ತ್ರಿ ಹಿರೇಮಠ, ಈರಣ್ಣಸ್ವಾಮಿ ಚಿಕ್ಕಮಠ, ಪ್ರಕಾಶ ಮುಪ್ಪಯ್ಯನವರಮಠ ಸೇರಿದಂತೆ ಹಲವು ಗಣ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ಶಿವಾನಂದ ಮೌನೇಶ್ವರಮಠ ಸ್ವಾಗತಿಸಿದರು. ಕುಮಾರ ಪೂಜೇರಿ ನಿರೂಪಿಸಿದರು. ದರ್ಶನ ಹಿರೇಮಠ ವಂದಿಸಿದರು.
-16ಮುರಗೋಡ2
ಶ್ರೀಕ್ಷೇತ್ರ ಪಂಚವಟಿ ಸಂಭ್ರಮ, ವಾರ್ಷಿಕೋತ್ಸವ ಹಾಗೂ ಧಾರ್ಮಿಕ ವಿಶೇಷ ಕಾರ್ಯಕ್ರಮ ಸಮಾರೋಪದಲ್ಲಿಕುಂದಗೋಳ ಶ್ರೀಗಳನ್ನು ಸನ್ಮಾನಿಸಲಾಯಿತು.

