ಪಾಣಾಜೆ : ಒಡ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ‘ ನಿಪುಣ್ ಭಾರತ್ ’ ಅಭಿಯಾನದ ಅಂಗವಾಗಿ ಕ್ಲಸ್ಟರ್ ಮಟ್ಟದ ಇಂಚರ ಮಕ್ಕಳ ಕಲಿಕಾ ಹಬ್ಬ ಇತ್ತೀಚೆಗೆ ನಡೆಯಿತು.
ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಮೈಮೂನತುಲ್ ಮೆಹ್ರಾ ಉದ್ಘಾಟಿಸಿದರು. ಎಸ್ ಡಿಎಂಸಿ ಅಧ್ಯಕ್ಷೆ ಪ್ರೇಮಾ ಪಡ್ಯಂಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯೆ ವಿಮಲಾ ಅರ್ಧಮೂಲೆ, ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ , ಸಿಆರ್ ಪಿ ನಾರಾಯಣ ಪುಣಚ, ಸ್ಥಳೀಯರಾದ ವಿಶ್ವನಾಥ ರೈ ಕಡಮಾಜೆ, ನಾರಾಯಣ ಭಟ್ ಕಾಕೆಕೊಚ್ಚಿ, ಶಂಕರ ರೈ ಬಾಳೆಮೂಲೆ, ಮುಖ್ಯಶಿಕ್ಷಕ ಜನಾರ್ದನ ಅಲ್ಚಾರು, ಶಾಲಾ ನಾಯಕಿ ಪೂಜಾಶ್ರೀ ಉಪಸ್ಥಿತರಿದ್ದರು. ಶಿಕ್ಷಕಿ ದಿವ್ಯಾ ಪಡುಬಿದ್ರಿ ವಂದಿಸಿದರು. ಸ್ವರ್ಣಲತಾ ನಿರೂಪಿಸಿದರು. ಕಲಿಕಾ ಹಬ್ಬದ ಮೆರವಣಿಗೆ, ಮಕ್ಕಳ ಸ್ಪರ್ಧಾ ಚಟುವಟಿಕೆ ನಡೆಯಿತು.
( 15 ಪಿಎಲ್ ಒಡ್ಯ )

