ಸ್ಟೋರಿ/ಊರು ಬಾಗಿಲ ಕೆರೆಗಿಲ್ಲರಕ್ಷಣೆ

Contributed byranjithkumarks1004@gmail.com|Vijaya Karnataka

ಬೇಲೂರು ತಾಲೂಕಿನ ಅರೇಹಳ್ಳಿ ಬಳಿ ಇರುವ ಊರು ಬಾಗಿಲ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಐತಿಹಾಸಿಕ ಕೆರೆ ಗಿಡಗಂಟಿಗಳಿಂದ ಆವೃತವಾಗಿ ಅವನತಿಯ ಅಂಚಿಗೆ ತಲುಪಿದೆ. ಕೆರೆ ಒತ್ತುವರಿಯಾಗಿದ್ದು, ಅದರ ವಿಸ್ತಾರ ಕುಗ್ಗಿದೆ. ಕೆರೆ ಉಳಿವಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಕೆರೆ ಸರ್ವೆ ಮಾಡಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

uuru baagilu kere heritage and conservation

ಊರು ಬಾಗಿಲ ಕೆರೆಗಿಲ್ಲರಕ್ಷಣೆ

*ಅವನತಿಯತ್ತ ಪುರಾತನ ಕೆರೆ | ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ | ಜಲಮೂಲ ಉಳಿಸುವಂತೆ ಗ್ರಾಮಸ್ಥರ ಆಗ್ರಹ

ರಂಜಿತ್ ಕುಮಾರ್ ಕೆ.ಎಸ್ ,ಅರೇಹಳ್ಳಿ

ಘ್ಕಿ್ಟa್ಞ್ಜಜಿಠಿhk್ಠಞa್ಟks1004ಃಜಞaಜ್ಝಿ.್ಚಟಞ

ಪಟ್ಟಣ ಸಮೀಪದ ಪುರಾತನ ಕೆರೆ ಗಿಡಗಂಟಿಗಳಿಂದ ಸಂಪೂರ್ಣ ಆವೃತವಾಗಿ ಅವನತಿಯ ಅಂಚಿನಲ್ಲಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಪೂರ್ವಿಕರು ಕಟ್ಟಿಸಿದ ಕೆರೆಗಳನ್ನು ಸಂರಕ್ಷಣೆ ಮಾಡಬೇಕಾದವರು ಮೌನಕ್ಕೆ ಶರಣಾಗಿರುವುದರಿಂದ ಗ್ರಾಮೀಣ ಭಾಗದ ಕೆರೆಗಳು ಇಂದು ಕಣ್ಮರೆಯಾಗುತ್ತಿವೆ. ಈ ಕೆರೆಯು ಒತ್ತುವರಿಯಾಗಿ ಉಳ್ಳವರ ಪಾಲಾಗುವ ಮುನ್ನ ರಕ್ಷಣೆಗೆ ಮುಂದಾಗಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಎಲ್ಲಿದೆ ಈ ಕೆರೆ?: ಬೇಲೂರು ತಾಲೂಕು ಅರೇಹಳ್ಳಿ ಪಟ್ಟಣದ ಕೂಗಳತೆ ದೂರದಲ್ಲಿಊರು ಬಾಗಿಲ ಕೆರೆಯಿದೆ. ಮಲಸಾವರಕ್ಕೆ ತೆರಳುವ ಮಾರ್ಗದಲ್ಲಿಸರ್ವೆ ನಂ.230ರಲ್ಲಿಈ ಕೆರೆಯಿದ್ದು ಹೊಸದಾಗಿ ಈ ದಾರಿಯಲ್ಲಿತೆರಳುವವರು ಇದು ಯಾವುದೋ ಕಾಡಿರಬೇಕು ಎಂದುಕೊಂಡರೂ ಅಚ್ಚರಿ ಪಡಬೇಕಾಗಿಲ್ಲ. ಆದರೆ ತಡೆಗೋಡೆ ಮಾತ್ರ ಇಲ್ಲೊಂದು ಕೆರೆ ಇದೆ ಎಂಬುದನ್ನು ಹೇಳುತ್ತಿದೆ.

ಕೆರೆಯ ಐತಿಹ್ಯ: ಇಂದಿನ ಅರೇಹಳ್ಳಿ ಪಟ್ಟಣ ಅಭಿವೃದ್ಧಿ ಹೊಂದುವ ನೂರಾರು ವರ್ಷಗಳ ಹಿಂದೆ ಊರು ಬಾಗಿಲು ಎಂಬ ಪುಟ್ಟ ಗ್ರಾಮದಲ್ಲಿಜನರು ವಾಸಿಸುತ್ತಿದ್ದರು. ಇಲ್ಲಿಗ್ರಾಮವಿತ್ತು ಎಂಬುದಕ್ಕೆ ಪುರಾವೆಯಾಗಿ ಮಲ್ಲಿಕಾರ್ಜುನ ಟ್ರೇಡರ್ಸ್ ಮಳಿಗೆ ಬಳಿ ಊರು ಬಾಗಿಲ ಕಲ್ಲಿನ ದ್ವಾರ ಹಾಗೂ ಕಮಾನು ಇಂದಿಗೂ ಇದ್ದು ಈ ದ್ವಾರದ ಮೂಲಕವೆ ಗ್ರಾಮಕ್ಕೆ ತೆರಳಬೇಕಾಗಿತ್ತು. ಊರು ಬಾಗಿಲ ದ್ವಾರವನ್ನು ಗಿಡಗಂಟಿಗಳು ಸಂಪೂರ್ಣವಾಗಿ ಮುಚ್ಚಿಕೊಂಡಂತಿದ್ದು ನೀರಿನ ಟ್ಯಾಂಕ್ ಮರೆ ಮಾಚಿರುವುದರಿಂದ ಊರು ಬಾಗಿಲ ದ್ವಾರ ರಸ್ತೆಗೆ ಗೋಚರಿಸದಂತಾಗಿದೆ. ಜತೆಗೆ ಈ ಸ್ಥಳದಲ್ಲಿಸುಗ್ಗಿಯಮ್ಮ, ಈಶ್ವರ, ಕಾಲ ಭೈರವೇಶ್ವರ ಅಥವಾ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿತ್ತು ಎನ್ನಲಾಗಿದ್ದು, ಇಲ್ಲಿದ್ದ ಕೆರೆಯನ್ನೆ ಊರು ಬಾಗಿಲ ಕೆರೆಯೆಂದು ಕರೆಯಲಾಯಿತು ಎಂದು ರೈತ ಸಂಘದ ಹೋರಾಟಗಾರ ಎಂ.ಬಿ.ಶಿವಪ್ಪಗೌಡ ಹೇಳುತ್ತಾರೆ.

ಕೆರೆಯ ಉಪಯೋಗ: ಕೆರೆ ಸುತ್ತಮುತ್ತಲ ಎತ್ತರದ ಪ್ರದೇಶಗಳಿಂದ ಮಳೆ ನೀರು ಹರಿದು ಊರು ಬಾಗಿಲ ಕೆರೆತುಂಬಿಕೊಳ್ಳುತ್ತಿತ್ತು. ಭರ್ತಿಯಾದ ಕೆರೆ ನೀರು ವಾಟೇಹಳ್ಳವನ್ನು ಕೂಡಿ ಹೇಮಾವತಿ ನದಿ ಸೇರುತ್ತಿತ್ತು. ಹೀಗೆ ಸಂಗ್ರಹಣೆಗೊಂಡ ನೀರು ಕೃಷಿಗೆ ಪೂರಕವಾಗಿತ್ತು. ಕೆರೆ ಎದುರಿನ ಇಳಿಜಾರಿನ ಭೂಪ್ರದೇಶದಲ್ಲಿಗದ್ದೆ ಬಯಲು ಸಾಕಷ್ಟಿತ್ತು. ರೈತರು ತಮ್ಮ ಗದ್ದೆಯಲ್ಲಿಭತ್ತವನ್ನು ಹೇರಳವಾಗಿ ಬೆಳೆಯುತ್ತಿದ್ದರಿಂದ ಮಳೆ ನೀರಿನ ಅಭಾವ ಎದುರಾದರೆ ಕೆರೆ ನೀರನ್ನು ಗದ್ದೆಗೆ ಉಪಯೋಗಿಸಿಕೊಳ್ಳುತ್ತಿದ್ದರು.

ಕೆರೆ ಒತ್ತುವರಿ ಆರೋಪ: ನೂರಾರು ವರ್ಷಗಳ ಹಿಂದಿನ ಊರು ಬಾಗಿಲು ಎಂಬ ಗ್ರಾಮಕ್ಕೆ ಜೀವನಾಡಿಯಾಗಿದ್ದ ಕೆರೆಯು 2.33 ಎಕರೆ ವಿಸ್ತಾರವನ್ನು ಹೊಂದಿತ್ತು. ಆದರೆ ಕೆರೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಅತಿಕ್ರಮಣ ಮಾಡಿ ಒತ್ತುವರಿ ಮಾಡಿಕೊಂಡ ಪರಿಣಾಮ ಕೆರೆಯ ವಿಸ್ತಾರ ಕುಗ್ಗಿದೆ ಎಂಬುದು ನಿವಾಸಿಗಳ ಆರೋಪವಾಗಿದೆ.

ಕೆರೆ ಉಳಿವಿಗೆ ಜನಾಂದೋಲನ ಅಗತ್ಯ: ಹಿಂದೆಲ್ಲಗ್ರಾಮೀಣ ಭಾಗದ ಸಮುದಾಯಗಳಿಂದಲೇ ಕೆರೆ ಸಂರಕ್ಷಣೆ ನಡೆಯುತ್ತಿತ್ತು. ಕೆರೆ ಕಟ್ಟೆಗಳನ್ನು ರಕ್ಷಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ದೊರಕುವಂತೆ ಮಾಡಲು ಜನಾಂದೋಲನದ ಅಗತ್ಯತೆಯಿದೆ ಎಂದು ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ.

---ಕೋಟ್ ---

ಪುರಾತನ ಇತಿಹಾಸವಿರುವ ಊರು ಬಾಗಿಲ ಕೆರೆ ಇಂದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ ಅವನತಿಯ ಅಂಚಿನಲ್ಲಿರುವುದು ದುರದೃಷ್ಟಕರ.

-ಎಂ.ಬಿ.ಶಿವಪ್ಪ ಗೌಡ, ರೈತ ಸಂಘದ ಹೋರಾಟಗಾರ, ಅರೇಹಳ್ಳಿ

ಕೆರೆಗಳನ್ನು ಉಳಿಸಬೇಕಾಗಿರುವುದು ನಮ್ಮ ಕರ್ತವ್ಯ. ಈ ವಿಚಾರವನ್ನು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕೆರೆ ಸಂರಕ್ಷಣೆಗೆ ಮುಂದಾಗುತ್ತೇನೆ.

-ಎಚ್ .ಡಿ.ತುಳಸಿದಾಸ್ , ಕಾಂಗ್ರೆಸ್ ಕಿಸಾನ್ ಖೇತ್ ರಾಜ್ಯ ಸಂಚಾಲಕ,ಅರೇಹಳ್ಳಿ

ಊರು ಬಾಗಿಲ ಕೆರೆ ಒತ್ತುವರಿಯಾಗಿರುವ ಬಗ್ಗೆ ಮಾಹಿತಿಯಿದ್ದು ಶೀಘ್ರದಲ್ಲೆ ಸರ್ವೆ ಕಾರ್ಯ ಮುಗಿಸಿ ಪಂಚಾಯಿತಿ ಅಧೀನಕ್ಕೆ ಪಡೆದುಕೊಳ್ಳಲಾಗುವುದು. ನಂತರ ನರೇಗಾದಡಿ ಕೆರೆ ಪುನಶ್ಚೇತನಕ್ಕೆ ಕ್ರಮ ವಹಿಸಲಾಗುವುದು.

-ಚಂದ್ರಯ್ಯ, ಪಿಡಿಒ, ಅರೇಹಳ್ಳಿ ಗ್ರಾಪಂ

*ಫೋಟೊ ಇದೆ

10-01-2026ಊTಓಂಖಐ03ಅ

1.ಅವನತಿಯ ಅಂಚಿನಲ್ಲಿರುವ ಬೇಲೂರು ತಾಲೂಕು ಅರೇಹಳ್ಳಿಯ ಊರು ಬಾಗಿಲ ಕೆರೆ.

10-01-2026ಊTಓಂಖಐ04ಆ

2.ಕೆರೆಯಿದೆ ಎಂಬುದಕ್ಕೆ ದಾಖಲೆಯಾಗಿ ಸ್ಯಾಟಲೈಟ್ (ದಿಶಾಂಕ್ ಆ್ಯಪ್ ) ಚಿತ್ರ.