ಸತ್ಸಂಗದಿಂದ ಬದುಕಿನಲ್ಲಿನೆಮ್ಮದಿ

Contributed bygvittalslb@gmail.com|Vijaya Karnataka

ಕೊಪ್ಪಳದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಶಿವಾನಂದ ಸ್ವಾಮೀಜಿ ಮಾತನಾಡಿದರು. ಸತ್ಸಂಗದಿಂದ ಸಾತ್ವಿಕ ಗುಣ ಬೆಳೆದು ನೆಮ್ಮದಿ ಸಿಗುತ್ತದೆ ಎಂದರು. ವಿಜಯ ಕರ್ನಾಟಕದ ಬೋಧಿವೃಕ್ಷ ಪತ್ರಿಕೆ ಧಾರ್ಮಿಕ ವಿಚಾರ ಬಿತ್ತರಿಸುತ್ತಿರುವುದು ಶ್ಲಾಘನೀಯ. ರಾಜೇಶ ಶಶಿಮಠ ಕಾರ್ಯಕ್ರಮ ನಿರ್ವಹಿಸಿದರು. ವೀರಭದ್ರಪ್ಪ ನಂದ್ಯಾಳ, ಆನಂದ ತೀರ್ಥ ಪ್ಯಾಟಿ, ಪ್ರಾಣೇಶ್‌ ಪೂಜಾರಿ ಮಾತನಾಡಿದರು.

yoga and spirituality confidence through satsang

ಸತ್ಸಂಗದಿಂದ ಬದುಕಿನಲ್ಲಿನೆಮ್ಮದಿ

| ಮಕ್ಕಳ್ಳಿ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಅಭಿಮತ

| ವಿಜಯ ಕರ್ನಾಟಕದ ಅಧ್ಯಾತ್ಮಿಕ ದಿನಪತ್ರಿಕೆ ಬೋಧಿ ವೃಕ್ಷದಿಂದ ಕಾರ್ಯಕ್ರಮ ಆಯೋಜನೆ

ವಿಕ ಸುದ್ದಿಲೋಕ ಕೊಪ್ಪಳ

‘‘ಸತ್ಸಂಗದಿಂದ ಮನುಷ್ಯರಲ್ಲಿಸಾತ್ವಿಕ ಗುಣ ಬೆಳೆಯುವುದರ ಜತೆಗೆ ನೆಮ್ಮದಿ ಸಿಗುತ್ತದೆ,’’ ಎಂದು ಯಲಬುರ್ಗಾ ತಾಲೂಕಿನ ಮಕ್ಕಳ್ಳಿ ಶಿವಾನಂದ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ನಗರದ ಕಿನ್ನಾಳ ರಸ್ತೆಯ ಗುರುಬಸವ ಮಹಾಮನೆಯಲ್ಲಿವಿಜಯ ಕರ್ನಾಟಕದ ಅಧಾತ್ಮಿಕ ಪತ್ರಿಕೆಯಾದ ಬೋಧಿವೃಕ್ಷದಿಂದ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘‘ನಾವು ಜೀವನದಲ್ಲಿಇನ್ನೊಬ್ಬರ ತಪ್ಪು ಹುಡುಕುವುದರಿಂದ ನಮಗೆ ಜ್ಞಾನದ ಅರಿವಾಗುವುದಿಲ್ಲ. ನಮ್ಮಲ್ಲಿಯ ಜ್ಞಾನ ಬಳಸಿಕೊಂಡಲ್ಲಿನಮ್ಮ ಜೀವನ ಮಾದರಿಯಾಗುತ್ತದೆ. ಪತ್ರಿಕೆಗಳು ಕೇವಲ ಉದ್ಯಮಗಳಾಗಿರುವ ಈ ದಿನಗಳಲ್ಲಿಬೋಧಿವೃಕ್ಷ ಪತ್ರಿಕೆ ಮೂಲಕ ಜನರಲ್ಲಿಧಾರ್ಮಿಕತೆಯ ವಿಚಾರ ಬಿತ್ತುತ್ತಿರುವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿರುವ ‘ವಿಜಯ ಕರ್ನಾಟಕ’ದ ಕಾರ್ಯ ಶ್ಲಾಘನೀಯ,’’ ಎಂದರು.

ಜಿಲ್ಲಾಆಯುಷ್ ನಿವೃತ್ತ ಅಧಿಕಾರಿ ಡಾ.ಸಂಗಮೇಶ ಕಲಹಾಳ ಮಾತನಾಡಿ, ‘‘ರಾಜಕೀಯ, ಕ್ರೈಂ, ವಿವಾದಾತ್ಮಕ ಸುದ್ದಿಗಳನ್ನು ಬಿತ್ತರಿಸುವ ಪತ್ರಿಕೆಗಳ ಮಧ್ಯೆ ಧಾರ್ಮಿಕ ವಿಷಯವನ್ನು ಜನರಿಗೆ ತಿಳಿಸುವಲ್ಲಿ ಬೋಧಿವೃಕ್ಷ ಪತ್ರಿಕೆ ಯಶಸ್ವಿಯಾಗಿದೆ,’’ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಕುಮಾರ ಕುಕುನೂರು ಅಧ್ಯಕ್ಷತೆ ವಹಿಸಿ, ‘‘ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ್ಲ. ಮನುಷ್ಯ 100 ವರ್ಷ ಬದುಕಲು ಆಸೆ ಪಡುತ್ತಾನೆ. ಆದರೆ, ಅದಕ್ಕೆ ಸಂಬಂಧಿಸಿದ ಕೆಲಸ ಮಾಡುವುದಿಲ್ಲ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಉತ್ತಮ ವಿಚಾರ ಮೈಗೂಡಿಸಿಕೊಂಡು ಮಾದರಿ ಬದುಕು ಕಟ್ಟಿಕೊಳ್ಳಬೇಕು,’’ ಎಂದು ಸಲಹೆ ನೀಡಿದರು. ರಾಜೇಶ ಶಶಿಮಠ ನಿರ್ವಹಿಸಿದರು.

==

((ಕೋಟ್ ))

ಶರಣರು ಹೇಳಿದ ಸಂಗತಿಗಳನ್ನು ಜೀವನದಲ್ಲಿಅಳವಡಿಸಿಕೊಂಡರೆ ಜೀವನ ಪಾವನವಾಗುತ್ತದೆ. ಬಸವಣ್ಣನವರ ವಚನಗಳು ನಮಗೆ ಒಳ್ಳೆಯ ಮಾರ್ಗ ತೋರುತ್ತವೆ. ಸತ್ಸಂಗದಿಂದ ಸದ್ವಿಚಾರಗಳು ದೊರೆಯುತ್ತವೆ.

-ವೀರಭದ್ರಪ್ಪ ನಂದ್ಯಾಳ, ಅಧ್ಯಕ್ಷ, ವಿಶ್ವಗುರು ಬಸವೇಶ್ವರ ಟ್ರಸ್ಟ್ , ಕೊಪ್ಪಳ.

==

ನೆಮ್ಮದಿಯ ಬದುಕಿಗೆ ಅಧ್ಯಾತ್ಮ ಅತ್ಯವಶ್ಯವಾಗಿದೆ. ಹೀಗಾಗಿ, ಇಂತಹ ಸತ್ಸಂಗ ಆಚರಣೆ ಮೂಲಕ ಮನುಷ್ಯ ನೆಮ್ಮದಿ ಪಡೆದುಕೊಳ್ಳಬಹುದಾಗಿದೆ. ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ವಿಜಯ ಕರ್ನಾಟಕ ಪತ್ರಿಕೆ ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ.

-ಆನಂದ ತೀರ್ಥ ಪ್ಯಾಟಿ, ಸದಸ್ಯ, ಗಾಂಧಿಬಳಗ, ಕೊಪ್ಪಳ

==

ಹಲವು ವರ್ಷಗಳಿಂದ ನಾನು ಬೋಧಿವೃಕ್ಷ ಪತ್ರಿಕೆ ಓದುತ್ತಿದ್ದೇನೆ. ಜನರ ಮನಸ್ಸಿನಲ್ಲಿಅಧ್ಯಾತ್ಮಿಕ ವಿಚಾರ ಮೂಡುವ ಕೆಲಸವನ್ನು ಬೋಧಿವೃಕ್ಷ ಮಾಡುತ್ತಿದೆ. ಪತ್ರಿಕೆಯ ಕಾರ್ಯ ಮುಂದುವರಿಯಲಿ.

-ಪ್ರಾಣೇಶ್ ಪೂಜಾರಿ, ಸದಸ್ಯ, ಗಾಂಧಿ ಬಳಗ, ಕೊಪ್ಪಳ

----------

ಫೋಟೋ ಕ್ಯಾಪ್ಷನ್ : 16-ಕೆಪಿಎಲ್ ವಿಠ್ಠಲ-20

ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿರುವ ಗುರುಬಸವ ಮಹಾ ಮನೆಯಲ್ಲಿವಿಜಯ ಕರ್ನಾಟಕದ ಬೋಧಿವೃಕ್ಷ ಪತ್ರಿಕೆಯಿಂದ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮವನ್ನು ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ವೀರಭದ್ರಪ್ಪ ನಂದ್ಯಾಳ ಉದ್ಘಾಟಿಸಿದರು.

16-ಕೆಪಿಎಲ್ ವಿಠ್ಠಲ-20 ಎ

ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿರುವ ಗುರುಬಸವ ಮಹಾ ಮನೆಯಲ್ಲಿಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿವಿಜಯ ಕರ್ನಾಟಕದ ಬೋಧಿವೃಕ್ಷ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

16-ಕೆಪಿಎಲ್ ವಿಠ್ಠಲ-20 ಬಿ

ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿರುವ ಗುರುಬಸವ ಮಹಾಮನೆಯಲ್ಲಿಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದ ಶರಣರು.