ಡ್ರೈವ್ ಸುದ್ದಿ

Contributed byDHEERAJ K|Vijaya Karnataka
british car prices drop new regulations and customer rights
ಮುಕ್ತ ವ್ಯಾಪಾರದಿಂದ ಕಾರು ಬೆಲೆ ಇಳಿಕೆ

ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಜುಲೈ 15ರಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ಭಾರತದಲ್ಲಿಬ್ರಿಟನ್ ನಿರ್ಮಿತ ಐಷಾರಾಮಿ ಕಾರುಗಳ ಬೆಲೆ ಗಣನೀಯವಾಗಿ ಕಡಿಮೆಯಾಗಲಿದೆ. ಬ್ರಿಟನ್ ನಲ್ಲಿತಯಾರಾಗುವ ಕಾರುಗಳ ಮೇಲಿನ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿಕಡಿತಗೊಳಿಸಲಾಗಿದೆ. ರೇಂಜ್ ರೋವರ್ ಎಸ್ ವಿ ಕಾರಿನ ಬೆಲೆ 75 ಲಕ್ಷ ರೂ.ಗಳಷ್ಟು ಕಡಿಮೆಯಾಗಿದ್ದು, 4.25 ಕೋಟಿ ರೂ. ಕಾರು 3.50 ಕೋಟಿ ರೂ.ಗೆ ಸಿಗಲಿದೆ.
ಈ ರಿಯಾಯಿತಿಯು ಕೇವಲ ಬ್ರಿಟನ್ ನಲ್ಲಿಯೇ ಅಸೆಂಬಲ್ ಆಗುವ ಕಾರುಗಳಿಗೆ ಮಾತ್ರ ಅನ್ವಯಿಸುತ್ತದೆ. ರೇಂಜ್ ರೋವರ್ ಸ್ಪೋರ್ಟ್ ಎಸ್ ವಿ, ಬೆಂಟ್ಲಿ, ರೋಲ್ಸ್ ರಾಯ್ಸ… ಮತ್ತು ಆಸ್ಟನ್ ಮಾರ್ಟಿನ್ ನ ಕೆಲವು ಮಾಡೆಲ್ ಗಳ ಬೆಲೆ ಇಳಿಕೆಯಾಗಲಿದೆ. ಆದರೆ, ಲ್ಯಾಂಡ್ ರೋವರ್ ಬ್ರ್ಯಾಂಡ್ ನದ್ದೇ ಆದರೂ ಸ್ಲೋವಾಕಿಯಾದಲ್ಲಿತಯಾರಾಗುವ ‘ಡಿಫೆಂಡರ್ ’ ಮತ್ತು ’ಡಿಸ್ಕವರಿ’ ಕಾರುಗಳಿಗೆ ಈ ರಿಯಾಯಿತಿ ಸಿಗುವುದಿಲ್ಲ. 3.0 ಲೀಟರ್ ಗಿಂತ ಹೆಚ್ಚಿನ ಪೆಟ್ರೋಲ್ ಮತ್ತು 2.5 ಲೀಟರ್ ಗಿಂತ ಹೆಚ್ಚಿನ ಡೀಸೆಲ್ ಎಂಜಿನ್ ಹೊಂದಿರುವ ಕಾರುಗಳ ಮೇಲಿನ ಸುಂಕವನ್ನು ಶೇ. 110ರಿಂದ ನೇರವಾಗಿ ಶೇ. 30ಕ್ಕೆ ಇಳಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿಈ ಸುಂಕವು ಶೇ. 10 ಕ್ಕೆ ಇಳಿಯಲಿದೆ.ಅ

ಇವಿ ಕಾರುಗಳಿಗೆ ವಿನಾಯಿತಿ ಇಲ್ಲ: ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಮಾತ್ರ ಈ ಲಾಭ ಸಿಗಲಿದ್ದು, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳಿಗೆ ಮುಂದಿನ 5 ವರ್ಷಗಳವರೆಗೆ ಯಾವುದೇ ಸುಂಕ ವಿನಾಯಿತಿ ಇರುವುದಿಲ್ಲ.

= = =

ಇಂಧನ ದಕ್ಷತೆ ಹೆಚ್ಚಿಸಲು ನಿಯಮ

ಭಾರತದಲ್ಲಿವಾಹನಗಳ ಇಂಧನ ದಕ್ಷತೆಯನ್ನು ಹೆಚ್ಚಿಸಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಕೇಂದ್ರ ವಿದ್ಯುತ್ ಸಚಿವಾಲಯವು ಹೊಸ ‘ಕಾರ್ಪೊರೇಟ್ ಆವರೇಜ್ ಫ್ಯುಯೆಲ್ ಎಕಾನಮಿ’ (ಇಅಊಉ-ಐಐಐ) ಕರಡು ನಿಯಮಗಳನ್ನು ಸಿದ್ಧಪಡಿಸಿದೆ. ಈ ನಿಯಮಗಳು 2027-28ರಿಂದ 2031-32ರ ಅವಧಿಯಲ್ಲಿಭಾರತದಲ್ಲಿತಯಾರಾಗುವ ಅಥವಾ ಆಮದು ಮಾಡಿಕೊಳ್ಳಲಾಗುವ ‘ಋ1’ ಶ್ರೇಣಿಯ ಪ್ರಯಾಣಿಕ ವಾಹನಗಳಿಗೆ ಅನ್ವಯಿಸಲಿವೆ. ಇದರ ಅಡಿಯಲ್ಲಿಕಾರು ತಯಾರಕ ಕಂಪನಿಗಳು ತಾವು ಮಾರಾಟ ಮಾಡುವ ಒಟ್ಟಾರೆ ವಾಹನಗಳಲ್ಲಿಇಂಧನ ಉಳಿತಾಯದ ನಿರ್ದಿಷ್ಟ ಗುರಿಯನ್ನು ಕಡ್ಡಾಯವಾಗಿ ತಲುಪಬೇಕಾಗುತ್ತದೆ. ಈ ಹೊಸ ನಿಯಮಗಳ ಕುರಿತು ಕಾರು ತಯಾರಕರು, ಉದ್ಯಮದ ತಜ್ಞರು ಮತ್ತು ಸಾರ್ವಜನಿಕರು ತಮ್ಮ ಅನಿಸಿಕೆ ಹಾಗೂ ಸಲಹೆಗಳನ್ನು ಸಲ್ಲಿಸಲು ಆಗಸ್ವ್ 6ರವರೆಗೆ ಕಾಲಾವಕಾಶ ನೀಡಲಾಗಿದೆ.

= = =

ಗ್ರಾಹಕರ ಪರ ನಿಂತ ನ್ಯಾಯಾಲಯ

ಛತ್ತೀಸ್ ಗಢದ ರಾಯ್ ಪುರ ಜಿಲ್ಲಾಗ್ರಾಹಕ ನ್ಯಾಯಾಲಯವು ಇ20 ಪೆಟ್ರೋಲ್ ಬಳಕೆಗೆ ಸಂಬಂಧಿಸಿದ ದೇಶದ ಮೊದಲ ಪ್ರಕರಣದಲ್ಲಿವಾಹನ ಮಾಲೀಕರ ಪರವಾಗಿ ಮಹತ್ವದ ತೀರ್ಪು ನೀಡಿದೆ.

ರಾಯ್ ಪುರದ ನಿವಾಸಿ ಡಾ. ಪ್ರೇಮರಾಜ್ 2024ರ ಜೂನ್ ನಲ್ಲಿಮಾರುತಿ ಸುಜುಕಿ ‘ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ’ ಕಾರನ್ನು ಖರೀದಿಸಿದ್ದರು. ಆದರೆ, ಇ20 ಪೆಟ್ರೋಲ್ ಬಳಸಿದ ನಂತರ ಕಾರು ಪದೇಪದೆ ಹಾದಿ ಮಧ್ಯದಲ್ಲೇ ನಿಂತುಹೋಗುತ್ತಿತ್ತು. ಹಲವು ಬಾರಿ ಸರ್ವಿಸ್ ಸೆಂಟರ್ ಗೆ ತೋರಿಸಿ ಟ್ಯಾಂಕ್ ಕ್ಲೀನ್ ಮಾಡಿಸಿದರೂ ಸಮಸ್ಯೆ ಬಗೆಹರಿದಿರಲಿಲ್ಲ. ಅಲ್ಲದೆ, ಕಾರು ಖರೀದಿಸುವಾಗ ಇದು ಇ20 ಇಂಧನಕ್ಕೆ ಪೂರ್ಣ ಪ್ರಮಾಣದಲ್ಲಿಹೊಂದಿಕೊಳ್ಳುವುದಿಲ್ಲಎಂಬ ಮಾಹಿತಿಯನ್ನು ತಮಗೆ ನೀಡಿರಲಿಲ್ಲಎಂದು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ, ಮಾರುಕಟ್ಟೆಯಲ್ಲಿಸದ್ಯ ಇ20 ಪೆಟ್ರೋಲ್ ಹೆಚ್ಚಾಗಿ ಲಭ್ಯವಿರುವುದರಿಂದ ಗ್ರಾಹಕರಿಗೆ ಬೇರೆ ಆಯ್ಕೆಗಳಿಲ್ಲಎಂಬುದನ್ನು ಗಮನಿಸಿ ಕಂಪನಿಗೆ ಕಠಿಣ ನಿರ್ದೇಶನ ನೀಡಿದೆ. 45 ದಿನಗಳ ಒಳಗಾಗಿ ಗ್ರಾಹಕರಿಗೆ ಹೊಸ ಇ20 ಹೊಂದಾಣಿಕೆಯಾಗುವ ಕಾರನ್ನು ಬದಲಾಯಿಸಿಕೊಡಬೇಕು. ಇಲ್ಲದಿದ್ದರೆ, ಕಾರಿನ ಬೆಲೆ ಮತ್ತು ಆರ್ ಟಿಒ ಸೇರಿ ಒಟ್ಟು 20.50 ಲಕ್ಷ ರೂಪಾಯಿಗಳನ್ನು ಮರುಪಾವತಿಸಬೇಕು. ಇದರೊಂದಿಗೆ ಗ್ರಾಹಕನಿಗಾದ ಮಾನಸಿಕ ಕಿರಿಕಿರಿಗೆ ಒಂದು ಲಕ್ಷ ರೂ. ಪರಿಹಾರ ಹಾಗೂ ಕೋರ್ಟ್ ವೆಚ್ಚಕ್ಕಾಗಿ 10 ಸಾವಿರ ರೂ. ನೀಡಬೇಕು ಎಂದು ಮಾರುತಿ ಸುಜುಕಿ ಮತ್ತು ಡೀಲರ್ ಗೆ ಆದೇಶಿಸಿದೆ.