ಭಾರತೀನಗರ: ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿನಾಯಕತ್ವದ ಗುಣಗಳನ್ನು ಬೆಳೆಸಿದರೆ ಅವರು ಸಮಾಜದ ಜವಾಬ್ದಾರಿಗಳನ್ನು ಅರಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಶ್ರೀ ಚಾಂಷುಗರ್ಸ್ನ ಪ್ರಧಾನ ವ್ಯವಸ್ಥಾಪಕ ಎಂ.ರವಿ ಹೇಳಿದರು.ಭಾರತೀನಗರದ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿಮಾತನಾಡಿದ ಅವರು,
‘‘ವಿದ್ಯಾರ್ಥಿ ನಾಯಕರು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ಶಿಕ್ಷಕರು ಹಾಗೂ ಸಹಪಾಠಿಗಳ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಶಿಸ್ತು, ಉತ್ತಮ ನಡವಳಿಕೆ, ಆತ್ಮವಿಶ್ವಾಸ, ಸಂಘಟನಾ ಶಕ್ತಿ ಹಾಗೂ ಸಾಮಾಜಿಕ ಪ್ರಜ್ಞೆಯೇ ಉತ್ತಮ ನಾಯಕತ್ವದ ಮೂಲ ಗುಣಗಳಾಗಿವೆ’’ ಎಂದು ತಿಳಿಸಿದರು.
‘‘ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ , ಸರ್ ಎಂ.ವಿಶ್ವೇಶ್ವರಯ್ಯ, ಡಾ.ಜಿ.ಮಾದೇಗೌಡ ಹಾಗೂ ಕೆ.ವಿ. ಶಂಕರೇಗೌಡ ಅವರ ಕೊಡುಗೆ ಅಪಾರ’’ ಎಂದು ಸ್ಮರಿಸಿದ ಅವರು,‘‘ ಸರ್ ಸಿ.ವಿ. ರಾಮನ್ , ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಆಲ್ಫೆ್ರಡ್ ನೊಬೆಲ್ ಅವರ ಜೀವನದ ಘಟನೆಗಳನ್ನು ಉದಾಹರಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು.
ಮುಖ್ಯ ಅತಿಥಿ ಸಾಹಿತಿ ಹಾಗೂ ವಿಶ್ರಾಂತ ಪ್ರಾಂಶುಪಾಲ ಡಾ. ಮ.ರಾಮಕೃಷ್ಣ ಮಾತನಾಡಿ,‘‘ ಮೊಬೈಲ್ ಅನ್ನು ಜ್ಞಾನ ಮತ್ತು ಮಾಹಿತಿಗಾಗಿ ಬಳಸಬೇಕು. ಧೈರ್ಯವಾಗಿ ಮಾತನಾಡುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪರಿಶ್ರಮಪಟ್ಟರೆ ಉತ್ತಮ ಸಾಧನೆ ಸಾಧ್ಯ’’ ಎಂದು ಹೇಳಿದರು.
‘‘ಜವಾಹರಲಾಲ್ ನೆಹರು, ಡಾ. ಬಿ.ಆರ್ . ಅಂಬೇಡ್ಕರ್ , ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಎಸ್ . ಜಾನಕಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಡಾ. ಜಿ. ಮಾದೇಗೌಡ ಅವರ ಜೀವನದ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಕನಸು ಕಾಣುವವರು ಕ್ರಿಯಾಶೀಲರಾಗಿ ಸಮಾಜದಲ್ಲಿಗುರುತಿಸಿಕೊಳ್ಳುತ್ತಾರೆ’’ ಎಂದು ತಿಳಿಸಿದರು.
ಭಾರತೀ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಬಿ.ಎಂ. ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಪಿ. ರಾಜೇಂದ್ರ ರಾಜೇ ಅರಸ್ , ಹೆಲ್ತ್ ಸೈನ್ಸ್ ನಿರ್ದೇಶಕ ಟಿ. ತಮಿಜ್ ಮಣಿ, ಡಾ.ಎಂ.ಎಸ್ . ಮಹದೇವಸ್ವಾಮಿ, ಜವರೇಗೌಡ, ಸಿ.ರಮ್ಯಾ, ವಿ.ಎನ್ . ಸುಶ್ಮಿತಾ, ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜು, ಶಿಕ್ಷಕರಾದ ನಂದಿನಿ, ಸಿ.ಶಿವಮಣಿ, ಸ್ವಾಮಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಫೋಟೋ22ಬಿಟಿಜಿ1- ಭಾರತೀನಗರದ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿನಡೆದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಚಾಂಷುಗರ್ಸ್ನ ಪ್ರಧಾನ ವ್ಯವಸ್ಥಾಪಕ ಎಂ.ರವಿ ಜ್ಯೋತಿ ಬೆಳಗಿಸಿದರು.