ಅಕ್ವಾ ಪ್ಲೇನಿಂಗ್ ಏನು? ಹೇಗೆ ತಡೆಯಬೇಕು?

Contributed bychanna mallikarjuna|Vijaya Karnataka
aqua planning causes and prevention methods
ಅಕ್ವಾಪ್ಲೇನಿಂಗ್

ವಾಹನ ಚಾಲನೆಯ ವೇಳೆ ಇರಲಿ ಎಚ್ಚರ
ಧಿಧಿಧಿಧಿಧಿಧಿಧಿಧಿ---

ಚನ್ನಮಲ್ಲಿಕಾರ್ಜುನ

---

ವಿಪರೀಪ ಮಳೆ ಇರುವ ಕಾಲದಲ್ಲಿವಾಹನಗಳ ಚಾಲನೆಯ ವೇಳೆಗೆ ಅಪಾಯ ಒಡ್ಡಬಹುದಾದ ಸಮಸ್ಯೆಗಳಲ್ಲಿಅಕ್ವಾಪ್ಲೇನಿಂಗ್ ಕೂಡ ಒಂದು. ಇದನ್ನು ಹೈಡ್ರೋಪ್ಲೇನಿಂಗ್ ಎಂದೂ ಕರೆಯುತ್ತಾರೆ. ಅಕ್ವಾಪ್ಲೇನಿಂಗ್ ಎಂದರೆ ನಿಂತ ನೀರು, ಕೆಸರು ಅಥವಾ ಹಿಮವು ವಾಹನಗಳ ಚಕ್ರವನ್ನು ಉರುಳುವುದನ್ನು ತಡೆಯುವ ಪ್ರಕ್ರಿಯೆ. ಈ ವೇಳೆ ಚಕ್ರದ ಮೇಲಿನ ಬ್ರೇಕಿಂಗ್ ಕ್ರಿಯೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.

ಅಕ್ವಾ ಪ್ಲೇನಿಂಗ್ ಮುಖ್ಯವಾಗಿ ಎಲ್ಲಾವಾಹನಗಳ ಚಕ್ರಕ್ಕೂ ಅನ್ವಯವಾದರೂ ವಿಶೇಷವಾಗಿ ಇದರ ಪರಿಣಾಮ ವಿಮಾನದ ಲ್ಯಾಂಡಿಂಗ್ ಸಮಯದಲ್ಲಿಹೆಚ್ಚು. ವಾಹನದ ಚಕ್ರವು ನೀರಿನಲ್ಲಿಉರುಳುವಾಗ ಅಕ್ವಾಪ್ಲೇನಿಂಗ್ ಸಂಭವಿಸಬಹುದು. ಇದನ್ನು ಸರಳವಾಗಿ ಹೀಗೆ ಹೇಳಬಹುದು. ಅಕ್ವಾಪ್ಲೇನಿಂಗ್ ಎಂದರೆ ಮಳೆಗಾಲದಲ್ಲಿಅಥವಾ ರಸ್ತೆಯಲ್ಲಿನೀರು ನಿಂತಾಗ ವಾಹನ ಚಾಲನೆ ಮಾಡುವಾಗ ಎದುರಾಗುವ ಒಂದು ಅಪಾಯಕಾರಿ ಪರಿಸ್ಥಿತಿ. ಮಳೆಯಲ್ಲಿಅಥವಾ ನೀರಿರುವ ರಸ್ತೆಯಲ್ಲಿವಾಹನವನ್ನು ವೇಗವಾಗಿ ಚಲಾಯಿಸಿದಾಗ, ಟೈರ್ ಮತ್ತು ರಸ್ತೆಯ ನಡುವಿನ ನೀರು ಹೊರಗೆ ಹೋಗಲು ಜಾಗವಿಲ್ಲದೆ ಟೈರ್ ನ ಅಡಿಯಲ್ಲಿಸಂಗ್ರಹವಾಗುತ್ತದೆ. ಇದರಿಂದಾಗಿ ಟೈರ್ ಗೂ ಮತ್ತು ರಸ್ತೆಗೂ ಇರುವ ನೇರ ಸಂಪರ್ಕ ತಪ್ಪಿಹೋಗುತ್ತದೆ. ವಾಹನವು ರಸ್ತೆಯ ಮೇಲಲ್ಲದೆ, ನೀರಿನ ತೆಳುವಾದ ಪದರದ ಮೇಲೆ ನಿಂತಿರುತ್ತದೆ. ಈ ಹಂತದಲ್ಲಿಸ್ಟೀರಿಂಗ್ , ಬ್ರೇಕ್ ಅಥವಾ ಆಕ್ಸಿಲರೇಟರ್ ಯಾವುದೂ ಕೆಲಸ ಮಾಡುವುದಿಲ್ಲಮತ್ತು ವಾಹನದ ನಿಯಂತ್ರಣ ಸಂಪೂರ್ಣವಾಗಿ ತಪ್ಪಿಹೋಗುತ್ತದೆ. ಹಾಗಂತ, ಇದು ವಾಹನ ಸ್ಕಿಡ್ ಆಗುವುದಲ್ಲ. ಆದರೆ, ಅಕ್ವಾಪ್ಲೇನಿಂಗ್ ನ ಪರಿಣಾಮವಾಗಿ ವಾಹನ ಸ್ಕಿಡ್ ಆಗಬಹುದು.

ಮುಖ್ಯ ಕಾರಣಗಳು:

ರಸ್ತೆಯಲ್ಲಿನೀರಿದ್ದಾಗ ವೇಗವಾಗಿ ಚಲಾಯಿಸಿದರೆ, ಟೈರ್ ಗಳಿಗೆ ನೀರನ್ನು ಪಕ್ಕಕ್ಕೆ ತಳ್ಳಲು ಸಮಯ ಸಿಗುವುದಿಲ್ಲ. ಸವೆದು ಹೋದ ಟೈರ್ ಗಳಿಂದಾಗಿ ನೀರು ಆಚೆ ಸಿಡಿಯುವುದಿಲ್ಲ. ಟೈರ್ ನಲ್ಲಿರುವ ಗ್ರೂವ್ ್ಸಗಳು ನೀರನ್ನು ಹೊರಹಾಕಲು ಸಹಾಯ ಮಾಡುತ್ತವೆ. ಟೈರ್ ನ ಆ ಗ್ರೂÊ್ಸ…ಗಳು ಸವೆದಿದ್ದರೆ ಅಕ್ವಾಪ್ಲೇನಿಂಗ್ ಆಗುವ ಸಾಧ್ಯತೆ ಹೆಚ್ಚು. ರಸ್ತೆಯ ಗುಂಡಿಗಳಲ್ಲಿಅಥವಾ ಹೈವೇಗಳಲ್ಲಿನೀರು ಹರಿಯುತ್ತಿದ್ದರೆ ಅಥವಾ ನಿಂತಿದ್ದರೆ ಈ ಸಮಸ್ಯೆ ಎದುರಾಗುತ್ತದೆ. ಟೈರ್ ನಲ್ಲಿಸರಿಯಾದ ಗಾಳಿ ಇಲ್ಲದಿದ್ದರೂ ಈ ಅಪಾಯ ಹೆಚ್ಚಿರುತ್ತದೆ.

ಅಪಾಯವನ್ನು ಹೀಗೆ ಕಡಿಮೆ ಮಾಡಿ

ಅಕ್ವಾಪ್ಲೇನಿಂಗ್ ಎಂದರೇನು ಮತ್ತು ಅದನ್ನು ಹೇಗೆ ತಪ್ಪಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಸುರಕ್ಷಿತ ಚಾಲನೆಗೆ, ವಿಶೇಷವಾಗಿ ಮಳೆಗಾಲದ ಹಾಗೂ ಹಿಮ ಬೀಳುವ ಹವಾಮಾನ ಪರಿಸ್ಥಿತಿಗಳಲ್ಲಿಬಹಳ ಮುಖ್ಯ. ಚಾಲನೆಯಲ್ಲಿಅಕ್ವಾಪ್ಲೇನಿಂಗ್ ಇದ್ದಕ್ಕಿದ್ದಂತೆ ಸಂಭವಿಸಬಹುದು. ಆದರೆ, ಅಕ್ವಾಪ್ಲೇನಿಂಗ್ ಬಗ್ಗೆ ಸರಿಯಾದ ಜ್ಞಾನ ಮತ್ತು ಸಿದ್ಧತೆಯೊಂದಿಗೆ ಅಪಾಯಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಸರಿಯಾದ ಟೈರ್ ಒತ್ತಡವನ್ನು ಕಾಪಾಡಿಕೊಳ್ಳುವ ಮೂಲಕ, ಸುರಕ್ಷಿತ ವೇಗದಲ್ಲಿಚಾಲನೆ ಮಾಡುವ ಮೂಲಕ ಮತ್ತು ಪರಿಸ್ಥಿತಿಗಳ ಬಗ್ಗೆ ತಿಳಿದಿರುವ ಮೂಲಕ, ನೀವು ಅಕ್ವಾಪ್ಲೇನಿಂಗ್ ಅನ್ನು ತಡೆಗಟ್ಟಲು ಮತ್ತು ನಿಮ್ಮ ಕಾರನ್ನು ರಸ್ತೆಯಲ್ಲಿಸುರಕ್ಷಿತವಾಗಿಡಲು ಸಹಾಯ ಮಾಡಬಹುದು.

ನಮ್ಮ ವಾಹನದ ಟೈರ್ ಗಳು ಅಥವಾ ನಾವು ಪ್ರಯಾಣ ಮಾಡಲಿರುವ ಪ್ರದೇಶದ ಪರಿಸ್ಥಿತಿಗಳ ಬಗ್ಗೆ ಖಚಿತವಾಗಿ ತಿಳಿದುಕೊಳ್ಳಿ. ನಿಮ್ಮ ವಾಹನವು ತೇವಗೊಂಡ ರಸ್ತೆಗಳಿಗೆ ಹೊಂದುವ ಟೈರ್ ಗಳನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ವೃತ್ತಿಪರ ಟೈರ್ ಮೆಕಾನಿಕ್ ಗಳನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ತಿಳಿಯಿರಿ. ಎಲ್ಲಾಪರಿಸ್ಥಿತಿಗಳಲ್ಲಿಅಕ್ವಾಪ್ಲೇನಿಂಗ್ ಅನ್ನು ತಪ್ಪಿಸಲು ಎಚ್ಚರಿಕೆಯಿಂದ ಚಾಲನೆ ಮಾಡಿ.

ಬಾಕ್ಸ್

ಅಕ್ವಾಪ್ಲೇನಿಂಗ್ ಆದಾಗ ಏನು ಮಾಡಬೇಕು?

* ದಿಢೀರ್ ಬ್ರೇಕ್ ಹಾಕಬೇಡಿ: ಸಡನ್ ಆಗಿ ಬ್ರೇಕ್ ಹಾಕಿದರೆ ವಾಹನ ಸ್ಕಿಡ್ ಆಗಿ ಉರುಳಿಬೀಳುವ ಅಪಾಯವಿರುತ್ತದೆ.

* ಆಕ್ಸಿಲರೇಟರ್ ನಿಂದ ಕಾಲು ತೆಗೆಯಿರಿ: ಆಕ್ಸಿಲರೇಟರ್ ನಿಂದ ಕಾಲು ತೆಗೆದು ವಾಹನದ ವೇಗ ತಾನಾಗಿಯೇ ಕಡಿಮೆಯಾಗಲು ಬಿಡಿ.

* ಸ್ಟೀರಿಂಗ್ ನೇರವಾಗಿಡಿ: ಸ್ಟೀರಿಂಗ್ ಅನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ. ದಿಢೀರನೆ ಪಕ್ಕಕ್ಕೆ ತಿರುಗಿಸಲು ಪ್ರಯತ್ನಿಸಬೇಡಿ. ಟೈರ್ ಮತ್ತೆ ರಸ್ತೆಯ ಸಂಪರ್ಕಕ್ಕೆ ಬಂದಾಗ ವಾಹನ ನಿಯಂತ್ರಣಕ್ಕೆ ಸಿಗುತ್ತದೆ.

ಬಾಕ್ಸ್

ಅಕ್ವಾಪ್ಲೇನಿಂಗ್ ತಡೆಯುವುದು ಹೇಗೆ?

ಮಳೆ ಬರುವಾಗ ಅಥವಾ ರಸ್ತೆಯಲ್ಲಿನೀರಿದ್ದಾಗ ವೇಗವನ್ನು ಕಡಿಮೆ ಮಾಡಿ.

ಉತ್ತಮ ಸ್ಥಿತಿಯಲ್ಲಿರುವ (ಸಾಕಷ್ಟು ಥ್ರೆಡ್ /ಗ್ರೂÊ್ಸ… ಇರುವ) ಟೈರ್ ಗಳನ್ನು ಬಳಸಿ.

ಟೈರ್ ಗಳಲ್ಲಿಸರಿಯಾದ ಗಾಳಿಯ ಒತ್ತಡವನ್ನು ಕಾಯ್ದುಕೊಳ್ಳಿ.

ಮಳೆಯ ಸಮಯದಲ್ಲಿಕ್ರೂಸ್ ಕಂಟ್ರೋಲ್ ಬಳಸಬೇಡಿ.