Upsc 2025 Selection Guidance For 16 Young Achievers
ಯುಪಿಎಸ್ ಸಿಗೆ ಆಯ್ಕೆ: 16 ಮಂದಿಗೆ ಗೈಡ್
Contributed by: KENCHE GOWDA|Vijaya Karnataka•
ಬೆಂಗಳೂರು: ಕೇಂದ್ರ ನಾಗರಿಕ ಸೇವೆಗೆ 2025ನೇ ಸಾಲಿನಲ್ಲಿರಾಜ್ಯದಿಂದ ಆಯ್ಕೆಯಾಗಿರುವ 16 ಮಂದಿ ವಿಧಾನಸೌಧದಲ್ಲಿರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದುಕೊಂಡರು. ನಾಗರಿಕ ಸೇವೆಗೆ ಆಯ್ಕೆಯಾಗಿ ಸದ್ಯ ಪ್ರಶಿಕ್ಷಣಾರ್ಥಿಧಿಗಳಾಗಿರುವ ಈ 16 ಮಂದಿಯನ್ನು ಅಭಿನಂದಿಸಿದ ಮುಖ್ಯ ಕಾರ್ಯದರ್ಶಿ, ‘‘ಈ ಸಲ ಪ್ರಥಮ ಭಾರಿಗೆ ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯ ನಾಲ್ವರು, ಕೋಲಾರ ಜಿಲ್ಲೆಯ ನಾಲ್ವರು ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾಗಿರುಧಿವುದು ವಿಶೇಷ ಸಾಧನೆಯಾಗಿದೆ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘‘ಉನ್ನತ ಹುದ್ದೆಗಳಲ್ಲಿಕಾರ್ಯನಿರ್ವಹಿಸುವಾಗ ಜನರ ಸಮಸ್ಯೆ ಆಲಿಸಿ, ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಸಮಸ್ಯೆಗಳ ಮೂಲ ಕಾರಣಗಳನ್ನು ಸಮಗ್ರವಾಗಿ ವಿಶ್ಲೇಷಿಸಿ, ಪರಿಹರಿಸುವ ಆಡಳಿತಾತ್ಮಕ ಸಾಮರ್ಥ್ಯವನ್ನು ರೂಢಿಸಿ ಕೊಳ್ಳಬೇಕು,’’ ಎಂದು ಮಾರ್ಗದರ್ಶನ ಮಾಡಿದರು.