ಇಂಟ್ರೊ: ಸಂತಾನಚಿಕಿತ್ಸೆ ಹಾಗೂ ಸ್ತ್ರೀರೋಗ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ಹೆಸರುವಾಸಿಯಾದ ಬೆಂಗಳೂರಿನ ಓವಂ ಆಸ್ಪತ್ರೆ ವಿಜಯ ಕರ್ನಾಟಕ ಸಹಯೋಗದಲ್ಲಿಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿವಿಕ ಓದುಗರ ಪ್ರಶ್ನೆಗೆ ಆಸ್ಪತ್ರೆಯ ತಜ್ಞ ವೈದ್ಯರು ಉತ್ತರಿಸಿ ಹಲವು ಗೊಂದಲಗಳಿಗೆ ಪರಿಹಾರ ಸೂಚಿಸಿದರು.ಲವಲವಿಕೆ ಸುದ್ದಿಲೋಕ
ಅಗತ್ಯ ಹಾಗೂ ಅನಿವಾರ್ಯವನ್ನು ಮೀರಿ ಇತ್ತೀಚೆಗೆ ಸಿ ಸೆಕ್ಷನ್ ಹೆರಿಗೆಗಳು ಹೆಚ್ಚುತ್ತಿವೆ. ಅದರಲ್ಲೂಖಾಸಗಿ ಆಸ್ಪತ್ರೆಗಳಲ್ಲಿಇದರ ಪ್ರಮಾಣ ಹೆಚ್ಚು. ಆದರೆ ಈ ಬೆಳವಣಿಗೆ ಸರಿಯಲ್ಲ. ಸಹಜ ಹೆರಿಗೆಗೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿನೈಸರ್ಗಿಕ ವಿಧಾನದ ಹೆರಿಗೆಯ ಬಗ್ಗೆ ಸಾರ್ವಜನಿಕರಲ್ಲಿಜಾಗೃತಿ ಮೂಡಿಸಬೇಕು ಎಂದರು ಓವಂ ಆಸ್ಪತ್ರೆಯ ಅಧ್ಯಕ್ಷ ಹಾಗೂ ಸಿಇಒ, ಮಕ್ಕಳ ತಜ್ಞ ಡಾ. ಆದರ್ಶ ಸೋಮಶೇಖರ್ .
ವಿಜಯ ಕರ್ನಾಟಕ ಬೆಂಗಳೂರು ಕಚೇರಿಯಲ್ಲಿಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿಭಾಗವಹಿಸಿ ಮಾತನಾಡಿದ ಅವರು, ‘ಪ್ರಾಣಿಗಳಲ್ಲಿಹೆರಿಗೆ ಸಹಜವಾಗಿಯೇ ಆಗುತ್ತದೆ. ಮನುಷ್ಯ ಕೂಡ ಪ್ರಾಣಿಯೇ. ಶತಮಾನಗಳ ಹಿಂದೆ ಎಲ್ಲವೂ ಸಹಜ ಹೆರಿಗೆಯೇ. ಆದರೆ ಈಗ ಯಾಕೆ ಸಾಧ್ಯವಾಗುತ್ತಿಲ್ಲಅಂದರೆ ಬದಲಾದ ಜೀವನಶೈಲಿ ಹಾಗೂ ಅಷ್ಟೇ ಪ್ರಮಾಣದ ಮುಂದುವರಿದ ತಂತ್ರಜ್ಞಾನ. ಆದರೆ ಹೆರಿಗೆ ಎಂಬುದು ಸಹಜವಾಗಿಯೇ ಆಗುವಂಥದ್ದು. ಅದು ಪ್ರಕೃತಿ ನಿಯಮ. ಅದರ ವಿರುದ್ಧ ಹೋಗುವ ಬದಲು ಸಹಜ ಹೆರಿಗೆಯಲ್ಲಿಯೇ ಇರುವ ಸರಳ ವಿಧಾನಗಳತ್ತ ಗಮನ ನೀಡಬೇಕು. ಈ ನಿಟ್ಟಿನಲ್ಲಿನಾವು ನಮ್ಮ ಆಸ್ಪತ್ರೆಯಲ್ಲಿಜಲ ಹಾಗೂ ಸಹಜ ಪ್ರಸವ ವಿಧಾನಗಳಿಗೆ ಪ್ರಾಮುಖ್ಯ ನೀಡಿದ್ದೇವೆ’ ಎಂದು ಹೇಳಿದರು.
ವಿಕ ಓದುಗರು ದೂರವಾಣಿ ಮೂಲಕ ಕೇಳಿದ ಗರ್ಭ ಧಾರಣೆ ಸಮಸ್ಯೆ, ಹೆರಿಗೆಯ ನಂತರದ ಆರೋಗ್ಯ, ಜೀವನಶೈಲಿ ಸೇರಿದಂತೆ ಹಲವರ ಪ್ರಶ್ನೆಗಳಿಗೆ ಒವಮ್ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ. ಮರ್ಲಿನ್ ಜೆ. ಕಿಶೋರ್ ಅವರು ಉತ್ತರಿಸಿದರು. ಅಲ್ಲದೆ ಜಲಪ್ರಸವ, ಸಹಜ ಪ್ರಸವ, ಗರ್ಭಿಣಿ ಮತ್ತು ಬಾಣಂತಿಗೆ ಅಗತ್ಯವಿರುವ ಕಾಳಜಿ ಬಗ್ಗೆ ಮಾಹಿತಿ ಹಂಚಿಕೊಂಡರು.
ಗರ್ಭಧಾರಣೆ ಯೋಜನೆ
‘ಮದುವೆಯಾಗಿ ಕೆಲವು ವರ್ಷಗಳಾಗಿವೆ. ಆದರೆ ಮಗು ಆಗಿಲ್ಲಎಂಬ ದೂರು, ಕೊರಗು ಹಲವು ದಂಪತಿಗಳದ್ದು. ಆದರೆ ಗರ್ಭಧಾರಣೆಯ ಸೂಕ್ತ ಸಮಯ, ಅನುಸರಿಸಬೇಕಾದ ಜೀವನಶೈಲಿ ಬಗ್ಗೆ ಹಲವರಿಗೆ ಮಾಹಿತಿ ಕೊರತೆ ಇದೆ. ಈ ಸಂಬಂಧ ದಂಪತಿಗೆ ತಜ್ಞರ ಸಮಾಲೋಚನೆ ಅಗತ್ಯ’ ಎಂದ ಡಾ.ಮರ್ಲಿನ್ ಜೆ. ಕಿಶೋರ್ ಕೇಳುಗರೊಬ್ಬರ ಪ್ರಶ್ನೆಗೆ ಉತ್ತರಿಸಿ, ‘ಗರ್ಭಧಾರಣೆಗೆ ಸಿದ್ಧವಾಗಬೇಕು ಅಂತಾದಾಗ ಮನೋದೈಹಿಕವಾಗಿ ಸಜ್ಜಾಗಬೇಕು. ಉತ್ತಮ ಜೀವನಶೈಲಿ ಅನುಸರಿಸಬೇಕು. ಸತತ ಪ್ರಯತ್ನದ ನಂತರವೂ ಗರ್ಭ ಧರಿಸದಿದ್ದರೆ ಕೆಲವು ಪರೀಕ್ಷೆಗಳಿಗೆ ಒಳಗಾಗಬೇಕು. ಕೆಲವು ರಕ್ತಪರೀಕ್ಷೆಗಳ ಜೊತೆಗೆ ಅಂಡಾಣು ಗುಣಮಟ್ಟ, ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆ ಪರೀಕ್ಷಿಸುವುದು ಕಡ್ಡಾಯ. ಇಬ್ಬರ ವರದಿಗಳನ್ನು ಪರಿಶೀಲಿಸಿದ ನಂತರ ಸೂಕ್ತ ಚಿಕಿತ್ಸೆಯನ್ನು ನಿರ್ಧರಿಸಬಹುದು’ ಎಂದರು.
ತಡ ವಿವಾಹ ಅಥವಾ ಸುದೀರ್ಘ ಕಾಲದ ಪ್ರಯತ್ನದಲ್ಲಿಯಶಸ್ವಿಯಾಗಿ ಮಗುವನ್ನು ಪಡೆಯಲಾಗದ ಪರಿಸ್ಥಿತಿಯ ಬಗ್ಗೆ ವಿವರಿಸಿದ ಡಾ. ಆದರ್ಶ ಸೋಮಶೇಖರ್ , ‘ಸಕಾಲದ ತಪಾಸಣೆ, ಚಿಕಿತ್ಸೆಗಳ ಮೂಲಕ ಮಗುವಿನ ಕನಸನ್ನು ನನಸಾಗಿಸಿಕೊಳ್ಳಬಹುದು’ ಎಂದ ಅವರು, ಪದೇಪದೆ ಗರ್ಭಪಾತವಾಗುವ, ಅವಧಿಗೆ ಮುನ್ನ ಜನಿಸುವ ಮಗುವಿನ ಕಾಳಜಿ ಬಗ್ಗೆ ಬಂದ ಪ್ರಶ್ನೆಗೆ ಮಾಹಿತಿ ಹಂಚಿಕೊಂಡ ಅವರು ‘ಮುಂದುವರಿದ ತಂತ್ರಜ್ಞಾನದ ಪರಿಣಾಮ ತಿಂಗಳು ತುಂಬುವ ಮೊದಲೇ ಜನಿಸಿದ ಶಿಶುವಿನ ಕಾಳಜಿ ಹಿಂದೆಂದಿಗಿಂತ ಸುಲಭ. ಆಧುನಿಕ ತಂತ್ರಜ್ಞಾನಗಳು ನೆರವಾಗಲಿವೆ. ಈ ನಿಟ್ಟಿನಲ್ಲಿನಾವು ಸೇವೆ ನೀಡುತ್ತೇವೆ’ ಎಂದರು.
ಸಿ ಸೆಕ್ಷನ್ ನಂತರವೂ ಸಹಜ ಹೆರಿಗೆ
ಸಹಜ ಹೆರಿಗೆಯ ಮಹತ್ವವನ್ನು ತಿಳಿಸಿದ ಡಾ. ಆದರ್ಶ ಸೋಮಶೇಖರ್ ಹಾಗೂ ಮರ್ಲಿನ್ ಜೆ. ಕಿಶೋರ್ , ‘ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕ ಆದಾಕ್ಷಣ ಎರಡನೆಯದಕ್ಕೂ ಅದೇ ವಿಧಾನ ಅನುಸರಿಸಬೇಕು ಎಂಬ ಭಾವನೆ ಹಲವರಲ್ಲಿದೆ. ಆದರೆ ಅದೇ ಅನಿವಾರ್ಯ ಅಲ್ಲ. ಸಹಜ ಹೆರಿಗೆ ಖಂಡಿತ ಸಾಧ್ಯ. ಆದರೆ ಸಹಜ ಹೆರಿಗೆ ಆಗಬೇಕು ಅಂದರೆ ಜೀವನಶೈಲಿ ಮುಖ್ಯ. ಗರ್ಭಿಣಿಯಾಗಿದ್ದಾಗ ದೈಹಿಕ ಕ್ರಿಯಾಶೀಲತೆಗೆ ಒತ್ತು ನೀಡಿ’ ಎಂದರು.
ಮೆನೋಪಾಸ್ ಹಂತದ ಸಮಸ್ಯೆ
ಐವತ್ತರ ಹರೆಯದಲ್ಲೂಮಗುವನ್ನು ಪಡೆಯಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಮರ್ಲಿನ್ ಜೆ. ಕಿಶೋರ್ , ‘ವಯಸ್ಸಾದ ಮೇಲೂ ಮಗುವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪಡೆಯಲು ಸಾಕಷ್ಟು ಅವಕಾಶಗಳು ಇವೆ. ಆದರೆ ಸಹಜ ಗರ್ಭಧಾರಣೆ ಸವಾಲಿನದ್ದು. ಆದರೆ ಅಸಾಧ್ಯ ಅನ್ನುವುದಿಲ್ಲ. ಅದೇ ರೀತಿ ಮೆನೋಪಾಸ್ ಹಂತವನ್ನು ನಿರ್ವಹಿಸುವತ್ತ ಗಮನ ನೀಡಬೇಕು. ದೇಹದ ಏರುಪೇರುಗಳತ್ತ ಮಹಿಳೆಯರು ಹೆಚ್ಚಿನ ಕಾಳಜಿವಹಿಸಬೇಕು. ಈ ಹಂತದಲ್ಲಿಮೂಳೆಯ ಆರೋಗ್ಯದತ್ತ ವಿಶೇಷ ಎಚ್ಚರಿಕೆ ಅಗತ್ಯ. ಈ ನಿಟ್ಟಿನಲ್ಲಿವಿಟಮಿನ್ ಡಿ, ಮ್ಯಾಗ್ನೇಷಿಯಂ ಸೇರಿದಂತೆ ದೇಹದ ಪೋಷಕಾಂಶಗಳ ಕಡೆ ಗಮನ ನೀಡಿ. ವ್ಯಾಯಾಮ, ನಡಿಗೆ ನಿತ್ಯದ ಅಭ್ಯಾಸವಾಗಲಿ. ಬದಲಾಗುವ ಹಾರ್ಮೋನ್ , ಸ್ತನ, ಗರ್ಭಕೋಶದ ಆರೋಗ್ಯದತ್ತ ವಿಶೇಷ ಗಮನ ನೀಡಿ ಸಕಾಲದ ತಪಾಸಣೆಗೆ ಒಳಗಾಗಿ’ ಎಂದರು.
/////////////
ಪಾರ್ಟ್ -2
ಸಹಜ ಹೆರಿಗೆಗೆ ವಾಟರ್ ಬತ್ ರ್ ವಿಧಾನ
ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿಮತ್ತು ನೈಸರ್ಗಿಕ ಹೆರಿಗೆಯನ್ನು ಬಯಸುವವರನ್ನು ಈಗ ಪ್ರಪಂಚದಾದ್ಯಂತ ವಾಟರ್ ಬತ್ ರ್ ಅಥವಾ ನೀರಿನಲ್ಲಿಹೆರಿಗೆಯಾಗುವ ವಿಧಾನ ಸೆಳೆಯುತ್ತಿದೆ. ಬೆಂಗಳೂರಿನಲ್ಲಿಕೂಡ ಕೆಲವು ಆಸ್ಪತ್ರೆಗಳು ಈ ಸೌಲಭ್ಯ ನೀಡುತ್ತಿದ್ದು, ಓವಮ್ ಆಸ್ಪತ್ರೆ ಇದಕ್ಕೆ ಹೆಸರುವಾಸಿ. ಇದಕ್ಕಾಗಿಯೇ ತರಬೇತಿ ಪಡೆದ ತಜ್ಞರ ತಂಡ ಒಳಗೊಂಡಿದ್ದು, ಈ ಬಗ್ಗೆ ತಜ್ಞತೆ ಪಡೆದ ಡಾ. ಮರ್ಲಿನ್ ಜೆ. ಕಿಶೋರ್ ವಾಟರ್ ಬತ್ ರ್ ಬಗ್ಗೆ ವಿವರಿಸಿದ್ದಾರೆ.
ಗರ್ಭಿಣಿಯು ಉಗುರು ಬೆಚ್ಚಗಿನ ನೀರಿನಿಂದ ತುಂಬಿದ ಟಬ್ ಅಥವಾ ಪೂಲ್ ನಲ್ಲಿಹೆರಿಗೆಯ ವೇದನೆಯನ್ನು ಅನುಭವಿಸುವ ಮತ್ತು ಮಗುವಿಗೆ ಜನ್ಮ ನೀಡುವ ಪ್ರಕ್ರಿಯೆ ಇದು. ಟಬ್ ಅಥವಾ ಫೂಲ್ ನಲ್ಲಿನೀರನ್ನು ದೇಹದ ಸಾಮಾನ್ಯ ತಾಪಮಾನಕ್ಕೆ (ಸುಮಾರು 37ಡಿಗ್ರಿ ಸೆಲ್ಷಿಯಸ್ / 98.6ಡಿಗ್ರಿ ಸೆಲ್ಷಿಯಸ್ ) ತಕ್ಕಂತೆ ಇರಿಸಲಾಗುತ್ತದೆ. ಇದು ಎರಡು ಹಂತಗಳನ್ನು ಒಳಗೊಂಡಿದೆ. ಕೆಲವರು ಹೆರಿಗೆಯ ನೋವನ್ನು ಕಡಿಮೆ ಮಾಡಿಕೊಳ್ಳಲು ಮಾತ್ರ ನೀರಿನಲ್ಲಿಕುಳಿತುಕೊಳ್ಳುತ್ತಾರೆ.ಇನ್ನು ಕೆಲವರು ಮಗುವಿನ ಸಂಪೂರ್ಣ ಜನನದವರೆಗೂ ನೀರಿನಲ್ಲೇ ಇದ್ದು ಜನ್ಮ ನೀಡುತ್ತಾರೆ.
ಅನುಕೂಲ
ಉಗುರು ಬೆಚ್ಚಗಿನ ನೀರು ನರಗಳನ್ನು ಸಡಿಲಗೊಳಿಸಿ, ಹೆರಿಗೆಯ ತೀವ್ರ ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ನೀರು ದೇಹದ ಒತ್ತಡವನ್ನು ಕಡಿಮೆ ಮಾಡಿ, ತಾಯಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರಾಮದಾಯಕ ಅನುಭವ ನೀಡುತ್ತದೆ. ನೀರಿನಲ್ಲಿತೇಲುವ ಗುಣವಿರುವುದರಿಂದ ತಾಯಿಗೆ ತನ್ನ ಸ್ಥಾನವನ್ನು ಬದಲಾಯಿಸಿಕೊಳ್ಳುವುದು ಸುಲಭವಾಗುತ್ತದೆ. ಗರ್ಭಕೋಶದ ದ್ರವದಿಂದ ನೇರವಾಗಿ ಬೆಚ್ಚಗಿನ ನೀರಿಗೆ ಬರುವುದರಿಂದ ಮಗುವಿಗೆ ಹೊರಜಗತ್ತಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸುಲಭವಾಗುತ್ತದೆ.
ಗಮನಿಸಿ
ವಾಟರ್ ಬತ್ ರ್ ಅನ್ನು ಯಾವಾಗಲೂ ಪರಿಣಿತ ವೈದ್ಯರು ಅಥವಾ ಅನುಭವವಿರುವ ತಜ್ಞರ ಅವರ ಸಮ್ಮುಖದಲ್ಲೇ ಮಾಡಬೇಕು. ಟಬ್ ಅಥವಾ ನೀರು ಸರಿಯಾಗಿ ಸ್ವಚ್ಛವಾಗಿರದಿದ್ದರೆ ತಾಯಿ ಮತ್ತು ಮಗುವಿಗೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಮಗುವನ್ನು ನೀರಿನಿಂದ ಮೇಲಕ್ಕೆತ್ತುವಾಗ ಹೊಕ್ಕುಳ ಬಳ್ಳಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಹೆರಿಗೆಯ ಸಮಯದಲ್ಲಿಏನಾದರೂ ಸಮಸ್ಯೆಗಳು ಕಂಡುಬಂದಲ್ಲಿತಕ್ಷಣವೇ ತಾಯಿಯನ್ನು ನೀರಿನಿಂದ ಹೊರತಂದು ಸಾಮಾನ್ಯ ಆಸ್ಪತ್ರೆ ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ.
ಯಾರಿಗೆ ಇದು ಸೂಕ್ತವಲ್ಲ?
ಅಧಿಕ ರಕ್ತದೊತ್ತಡ ಅಥವಾ ಮಧುಮೇಹ ಇರುವವರಿಗೆ, ಅವಧಿಗೂ ಮುನ್ನವೇ ಹೆರಿಗೆಯಾಗುತ್ತಿದ್ದರೆ ಅಥವಾ ಇನ್ಯಾವುದೇ ಅಪಾಯದ ಗರ್ಭಾವಸ್ಥೆ ಆಗಿದ್ದರೆ ಇದು ಅಸಾಧ್ಯ.
ತಯಾರಿ ಅಗತ್ಯ
ಸಹಜ ಹೆರಿಗೆ ಬಹುತೇಕರ ಬಯಕೆ. ಅದರಲ್ಲೂನೀರಿನಲ್ಲಿಹೆರಿಗೆಯಾಗುವ ಸಹಜ, ಸರಳ ಅನುಭವಕ್ಕೆ ಗರ್ಭ ಧರಿಸಿದ ಮೂರನೇ ತಿಂಗಳಿಂದಲೇ ತಯಾರಿ ನಡೆಸಬೇಕು. ಅಂದರೆ ಪ್ರಸವದ ವೇಳೆಯಲ್ಲಿಯಾವುದೇ ಸಮಸ್ಯೆ ಆಗದಂತೆ ಸಹಜ ಹೆರಿಗೆ ಆಗಲು ದೇಹವನ್ನು ಸಜ್ಜುಗೊಳಿಸಬೇಕು. ಇದಕ್ಕಾಗಿ ನಿಯಮಿತ ವ್ಯಾಯಾಮ, ಸಮರ್ಪಕ ಪೋಷಕಾಂಶ ಪೂರೈಕೆ ಇತ್ಯಾದಿ ಸೇರಿದಂತೆ ಮನೋ¨ದೈಹಿಕವಾಗಿ ಶಾಂತ ಸ್ಥಿತಿಗೆ ಹೆರಿಗೆಯ ಹೊತ್ತಲ್ಲಿರುವಂತೆ ತಯಾರಿ ನಡೆಸಬೇಕು.
‘ಹೆರಿಗೆ ಎಂಬುದು ಅವಸ್ಮರಣೀಯ ಅನುಭವ. ಅದನ್ನು ಸಹಜ ಹಾಗೂ ಸುಲಭಗೊಳಿಸಲು ವಾಟರ್ ಬತ್ ರ್ ಸಹಕಾರಿ. ತಾಯಿಗೂ, ನವಜಾತ ಶಿಶುವಿಗೂ ಆರೋಗ್ಯಕರ, ಪ್ರಶಾಂತ ವಾತಾವರಣ ಒದಗಿಸುತ್ತದೆ ಈ ವಾಟರ್ ಬತ್ ರ್ ವಿಧಾನ. ಯಾವ ಭಯ ಅಥವಾ ಅಡೆತಡೆಗಳಿಲ್ಲದೆ ಹೆರಿಗೆಯಾಗಬಹುದು. ಶಿಶು ತಾಯಿಯ ಹೊಟ್ಟೆಯಲ್ಲಿ ಕೂಡ ಇದ್ದದ್ದು ನೀರಿನಲ್ಲೇ. ಅದೇ ರೀತಿ ನೀರಿನಲ್ಲಿಹುಟ್ಟುವುದರಿಂದ ಮಗುವಿನ ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ. ಬದಲಿಗೆ ಹೊಟ್ಟೆಯೊಳಗಿನ ವಾತಾವರಣವನ್ನೇ ಶಿಶು ಹಿತವಾಗಿ ಅನುಭವಿಸುತ್ತದೆ. ಓವಮ್ ಆಸ್ಪತ್ರೆಯಲ್ಲಿಈಗಾಗಲೇ ಹಲವಾರು ಇಂತಹ ಹೆರಿಗೆ ಮಾಡಿಸಿದ್ದೇವೆ ಎನ್ನುತ್ತಾರೆ ಡಾ. ಮರ್ಲಿನ್ ಜೆ. ಕಿಶೋರ್ .