ಬದಿಯಡ್ಕ: ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯ ರಕ್ಷಕ ಶಿಕ್ಷಕ ಸಂಘ ಹಾಗೂ ಮಾತೃ ಸಂಘದ ಮಹಾಸಭೆಯು ಇತ್ತೀಚೆಗೆ ಜರುಗಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಮರುದ್ದೀನ್ ಪಾಡಲಡ್ಕ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಖಾಲಿದ್ ಬಾಪಾಲಿಪನಂ, ಅಧ್ಯಾಪಕರಾದ ಶರತ್ ಕುಮಾರ್ ಹಾಗೂ ದಿನ ಟೀಚರ್ ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ತಾಹಿರ ಮಾಡತ್ತಡ್ಕ, ಮಾತೃ ಸಂಘದ ಉಪಾಧ್ಯಕ್ಷೆ ಶೀಬ ಉಪಸ್ಥಿತರಿದ್ದರು. ಸಭೆಯಲ್ಲಿನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ನೂತನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ಬಾಸ್ ಎಂ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ , ಮಾತೃ ಸಂಘದ ಅಧ್ಯಕ್ಷೆ ಯಾಗಿ ವರ್ಷ ಮಾಡತ್ತಡ್ಕ, ಉಪಾಧ್ಯಕ್ಷೆಯಾಗಿ ತಾಹಿರಾ ಮಾಡತ್ತಡ್ಕರನ್ನು ಆರಿಸಲಾಯಿತು. ಭಾರತಿ ಟೀಚರ್ ಪ್ರಾರ್ಥನೆ ಹಾಡಿದರು. ಮುಖ್ಯಶಿಕ್ಷಕ ಪ್ರಶಾಂತ ಕುಮಾರ್ ಕೆ. ಸ್ವಾಗತಿಸಿದರು. ಅಧ್ಯಾಪಕ ಪ್ರಶಾಂತ ಕುಮಾರ್ ಬಿ. ಹಾಗೂ ಅಬ್ದುಲ್ ಸಲಾಂ ನಿರೂಪಿಸಿದರು. ಸ್ಟಾಫ್ ಸೆಕ್ರೆಟರಿ ಸುಭಾಷ್ ಇ. ಕೆ. ವಂದಿಸಿದರು.