ಇಂಟ್ರೊ: ಐವಿಎಫ್ ಮೂಲಕ ಮಗುವನ್ನು ಪಡೆಯುವ ದಂಪತಿ ಮೂರು ತಿಂಗಳು ಮುಂಚಿತವಾಗಿಯೇ ಸಜ್ಜಾಗಬೇಕು. ಇದರ ಭಾಗವಾಗಿ ಉತ್ತಮ ಜೀವನಶೈಲಿ ಅನುಸರಿಸುವುದು ಮುಖ್ಯ.ಸ್ಲಗ್ : ಗರ್ಭ ತಯಾರಿ
ಬಂಜೆತನ ಸಮಸ್ಯೆಯನ್ನು ಎದುರಿಸುತ್ತಿರುವ ದಂಪತಿಗೆ ಇನ್ ವಿಟ್ರೊ ಫರ್ಟಿಲೈಸೇಷನ್ ಅಂದರೆ ಐವಿಎಫ್ ತಂತ್ರಜ್ಞಾನವು ಪೋಷಕರಾಗುವ ಅವರ ಕನಸನ್ನು ನನಸು ಮಾಡಲು ಸಹಕಾರಿ. ಆದರೆ, ಯಶಸ್ವಿ ಐವಿಎಫ್ ಚಿಕಿತ್ಸೆಯು ಪ್ರಾರಂಭವಾಗುವ ಮುನ್ನವೇ ಅದಕ್ಕೆ ತಕ್ಕ ಸಿದ್ಧತೆ ಅಗತ್ಯ ಎಂದು ಸಂತಾನಹೀನತೆ ತಜ್ಞರು ಹೇಳುತ್ತಾರೆ.
ಜೀವನಶೈಲಿ ಮುಖ್ಯ
ಬಂಜೆತನ ಅನುಭವಿಸುತ್ತಿರುವ ದಂಪತಿಗೆ ಮಗುವನ್ನು ಪಡೆಯಲು ಐವಿಎಫ್ ವಿಧಾನ ಸಹಾಯಕ ಎಂಬುದು ಸತ್ಯವಾದರೂ ಇದಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಬೇಕು. ಏಕೆಂದರೆ ಅಂಡಾಣು ಹಾಗೂ ವೀರ್ಯಾಣುಗಳ ಗುಣಮಟ್ಟ ಇಲ್ಲಿಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿಐವಿಎಫ್ ಆರಂಭಿಸುವ ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ದಂಪತಿ ಸಿದ್ಧತೆಗಳನ್ನು ಪ್ರಾರಂಭಿಸಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ. ಇದಕ್ಕಾಗಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಅದರ ಭಾಗವಾಗಿ ನಿಯಮಿತ ವ್ಯಾಯಾಮ, ದೇಹದ ಸಮ ತೂಕವನ್ನು ಕಾಕಾಡಿಕೊಳ್ಳಬೇಕು. ಸಮತೋಲಿತ ಆಹಾರ ಸೇವನೆ ಮುಖ್ಯ. ಹಣ್ಣು, ತರಕಾರಿ, ಧಾನ್ಯ ಹಾಗೂ ಬೀಜಗಳನ್ನು ಆಹಾರ ಒಳಗೊಂಡಿರಲಿ. ಅಲ್ಲದೆ ಧೂಮಪಾನ, ಮದ್ಯಪಾನ, ಸಂಸ್ಕರಿತ ಆಹಾರಗಳಿಂದ ದೂರ ಇರಿ. ಇದು ಸಂತಾನೋತ್ಪತ್ತಿಯ ಫಲಿತಾಂಶವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಪುರುಷರ ಕಾಳಜಿ
ಪುರುಷರ ಫಲವತ್ತತೆ ಕೂಡ ಅತ್ಯಗತ್ಯ. ಈ ನಿಟ್ಟಿನಲ್ಲಿತಂದೆಯಾಗಲು ಬಯಸುವ ಪುರುಷ ಹೆಚ್ಚಿನ ತಾಪಮಾನಕ್ಕೆ ತನ್ನನ್ನು ಒಡ್ಡಿಕೊಳ್ಳಬಾರದು. ಆರಾಮದಾಯಕ ದಿರಸು ಧರಿಸಬೇಕು. ಅದರ ಜೊತೆ ಉತ್ತಮ ಆರೋಗ್ಯಕರ ಜೀವನಶೈಲಿ ಅನುಸರಿಸಿದರೆ ಆರೋಗ್ಯಪೂರ್ಣ ವೀರ್ಯಗಳನ್ನು ಪಡೆಯಬಹುದು.
ಚಿಕಿತ್ಸಾ ಯೋಜನೆ
ಚಿಕಿತ್ಸೆಗೆ ಮುನ್ನ, ಸಂತಾನಹೀನತೆ ತಜ್ಞರು ಮಹಿಳೆಯ ವಯಸ್ಸು, ಅಂಡಾಶಯದ ಸಾಮರ್ಥ್ಯ, ಹಾರ್ಮೋನ್ ಮಟ್ಟಗಳು ಮತ್ತು ಪುರುಷನ ವೀರ್ಯದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ದಂಪತಿಗೆ ಸೂಕ್ತ ವೈಯಕ್ತಿಕ ಚಿಕಿತ್ಸಾ ಯೋಜನೆಯನ್ನು ರೂಪಿಸುತ್ತಾರೆ. ತಜ್ಞರ ಪ್ರಕಾರ, ಹೆಚ್ಚಿನ ಪ್ರಮಾಣದ ಫರ್ಟಿಲಿಟಿ ಔಷಧ ನೀಡುವುದರಿಂದಲೇ ಯಶಸ್ಸಿನ ಪ್ರಮಾಣ ಹೆಚ್ಚಾಗುತ್ತದೆ ಎಂದೇನೂ ಇಲ್ಲ. ಆಯ್ದ ರೋಗಿಗಳಿಗೆ ಮೈಲ್ಡ… ಸ್ಟಿಮ್ಯುಲೇಷನ್ ನ್ಯಾಚುರಲ್ ಸೈಕಲ್ ಐವಿಎಫ್ ಸುರಕ್ಷಿತ ಹಾಗೂ ಪರಿಣಾಮಕಾರಿ ಪರ್ಯಾಯವಾಗಬಹುದು.
ಮಗುವನ್ನು ಪಡೆಯಲು ಕೇವಲ ಆರೋಗ್ಯಕರ ಭ್ರೂಣವಷ್ಟೇ ಸಾಲದು. ಯಶಸ್ವಿ ಗರ್ಭಧಾರಣೆಯು ಗರ್ಭಾಶಯದ ಉತ್ತಮ ಸಿದ್ಧತೆಯ ಮೇಲೆಯೂ ಅವಲಂಬಿತವಾಗಿರುತ್ತದೆ. ಹೀಗಾಗಿ ಸಮಗ್ರ ಮೌಲ್ಯಮಾಪನ ಅತ್ಯಗತ್ಯ.
‘ಐವಿಎಫ್ ಎಂಬುದು ವಿಜ್ಞಾನ, ತಾಳ್ಮೆ ಮತ್ತು ಭರವಸೆಗಳ ಸಮ್ಮಿಲನ. ವೈಯಕ್ತಿಕ ಚಿಕಿತ್ಸೆ, ಸಮಯೋಚಿತ ಮೌಲ್ಯಮಾಪನ ಮತ್ತು ಕಾಳಜಿಯು ದಂಪತಿಗೆ ಆರೋಗ್ಯಕರ ಗರ್ಭಧಾರಣೆಯನ್ನು ಪಡೆಯಲು ಅತ್ಯುತ್ತಮ ಅವಕಾಶವನ್ನು ನೀಡುತ್ತದೆ’ ಎಂದು ಸಾಗರ್ ಚಂದ್ರಮ್ಮ ಹಾಸ್ಪಿಟಲ್ಸ್ ಆ್ಯಂಡ್ ಫರ್ಟಿಲಿಟಿ ಸೆಂಟರ್ ನ ಸಂತಾನಹೀನತೆ ತಜ್ಞೆ ಡಾ. ರಶ್ಮಿ ಸ್ವರೂಪ್ ಹೇಳುತ್ತಾರೆ.